ಹೆಚ್​ಡಿಕೆ ಕರ್ಚೀಫ್​ಗೆ ಗ್ಲಿಸರಿನ್ ಹಾಕಿಕೊಂಡು ಅಳೋದು: ಪ್ರತಿಕ್ರಿಯೆಗೆ ಪತ್ರಕರ್ತರ ಕೈಗೇ ಕರ್ಚೀಫ್ ಕೊಟ್ಟು ದುಂಬಾಲು ಬಿದ್ದ ಕುಮಾರಸ್ವಾಮಿ

| Updated By: ಆಯೇಷಾ ಬಾನು

Updated on: Oct 26, 2021 | 12:52 PM

ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ ಎಂದು ಗದ್ಗದಿತರಾದ್ರು. ಕಣ್ಣೀರಿಗೆ ಗ್ಲಿಸರಿನ್ ಹಾಕ್ಕೋತಾರೆ ಅನ್ನೋದೆಲ್ಲ ಈ ಹಿಂದೆಯೇ ಹೇಳಿ ಬಿಟ್ಟಿದ್ದಾರೆ ಎಂದು ಕಣ್ಣೀರ ಟೀಕೆಗೆ ಮತ್ತೆ ಕಣ್ತುಂಬಿಕೊಂಡೇ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ.

ಹೆಚ್​ಡಿಕೆ ಕರ್ಚೀಫ್​ಗೆ ಗ್ಲಿಸರಿನ್ ಹಾಕಿಕೊಂಡು ಅಳೋದು: ಪ್ರತಿಕ್ರಿಯೆಗೆ ಪತ್ರಕರ್ತರ ಕೈಗೇ ಕರ್ಚೀಫ್ ಕೊಟ್ಟು ದುಂಬಾಲು ಬಿದ್ದ ಕುಮಾರಸ್ವಾಮಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
Follow us on

ವಿಜಯಪುರ: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕರ್ಚೀಫ್ಗೆ ಗ್ಲಿಸರಿನ್ ಹಾಕಿಕೊಂಡು ಅಳುತ್ತಾರೆ ಎಂಬ ಎಸ್.ಆರ್.ಶ್ರೀನಿವಾಸ್ ಟೀಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಕೈಯಲ್ಲಿದ್ದ ಕರ್ಚೀಫನ್ನು ಮಾಧ್ಯಮ ವರದಿಗಾರರ ಮುಂದೆ ಹಿಡಿದು ನೋಡಿ ತಗೊಳ್ಳಿ ಇದರಲ್ಲೇನಿದೆ ನೋಡಿ ಎಂದು ಕುಮಾರಸ್ವಾಮಿ ಪತ್ರಕರ್ತರ ಕೈಗೆ ಕರ್ಚೀಫ್ ಕೊಡಲು ಮುಂದಾದ್ರು.

ಈ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ ಎಂದು ಗದ್ಗದಿತರಾದ್ರು. ಕಣ್ಣೀರಿಗೆ ಗ್ಲಿಸರಿನ್ ಹಾಕ್ಕೋತಾರೆ ಅನ್ನೋದೆಲ್ಲ ಈ ಹಿಂದೆಯೇ ಹೇಳಿ ಬಿಟ್ಟಿದ್ದಾರೆ ಎಂದು ಕಣ್ಣೀರ ಟೀಕೆಗೆ ಮತ್ತೆ ಕಣ್ತುಂಬಿಕೊಂಡೇ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ.

ನಮ್ಮದು ಕುಟುಂಬ ರಾಜಕಾರಣ ಎಂದು ಹೇಳೋದು ಬಿಡಿ
ಇನ್ನು ಇದೇ ವೇಳೆ ಕುಟುಂಬ ರಾಜಕಾರಣ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಮ್ಮದು ಕುಟುಂಬ ರಾಜಕಾರಣ ಎಂದು ಆರೋಪಿಸ್ತಾರೆ. ನಮ್ಮದು ಕುಟುಂಬ ರಾಜಕಾರಣ ಎಂದು ಹೇಳೋದು ಬಿಡಿ. ವಿಪಕ್ಷ ನಾಯಕ ಸಿದ್ದರಾಮಯ್ಯರದ್ದು ಯಾವ ರಾಜಕಾರಣ ಮಾಡ್ತಾರೆ. ವರುಣಾ ಕ್ಷೇತ್ರ ಅವರ ಪುತ್ರನಿಗೆ ಬಿಟ್ಟುಕೊಟ್ಟಿದ್ದು ಏಕೆ? ಅಲ್ಲಿ ಬೇರೆ ಅಭ್ಯರ್ಥಿಗಳು ಇರಲಿಲ್ವಾ ಎಂದು ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಬುದ್ಧಿ ಹೇಳಿದ್ದೇ ಮುಳುವಾಯ್ತು! ನಡುರಾತ್ರಿ ಹೋಟೆಲ್​ನಲ್ಲಿ ನಡೆದಿದ್ದ ಸಭೆಯ ವಿವರ ಬಿಚ್ಚಿಟ್ಟ ಗುಬ್ಬಿ ಶಾಸಕ ಶ್ರೀನಿವಾಸ್

Published On - 12:46 pm, Tue, 26 October 21