AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಮಾರಾಟ; ನಾಲ್ವರು ಅಂದರ್​

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮತ್ತೊಬ್ಬರ ಆಸ್ತಿ ಮನೆ ಜಮೀನು ಮಾರಾಟ ಮಾಡುವ ಜಾಲ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಕಂಡ-ಕಂಡವರ ಆಸ್ತಿಯನ್ನು ನಕಲಿ ದಾಖಲಾತಿಗಳ ಮೂಲಕ ನಾವೇ ಅದರ ಮಾಲೀಕರು ಎಂದು ಎದುರಿನವರಿಗೆ ನಂಬಿಸಿ ಮಾರಾಟ ಮಾಡುವ ಗ್ಯಾಂಗ್​​ಗಳು ಕೆಲಸ ಮಾಡುತ್ತಿವೆ. ಇದನ್ನು ತೊಡೆದು ಹಾಕಲು ನೋಂದಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು, ಇದೀಗ ನಕಲಿ ದಾಖಲಾತಿ ಮಾಡಿ ಸರ್ಕಾರಿ ಜಮೀನಿಗೆ ಕನ್ನ ಹಾಕುತ್ತಿರುವವರು ಅಂದರ್ ಆಗಿದ್ಧಾರೆ. ಈ ಕುರತು ಒಂದು ವರದಿ ಇಲ್ಲಿದೆ.

ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಮಾರಾಟ; ನಾಲ್ವರು ಅಂದರ್​
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಮಾರಾಟ ಮಾಡುವ ನಾಲ್ವರು ಅಂದರ್​
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Aug 09, 2024 | 5:33 PM

Share

ವಿಜಯಪುರ, ಆ.09: ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು(Fake documents) ಸೃಷ್ಟಿಸಿ ಮತ್ತೊಬ್ಬರ ಆಸ್ತಿಗಳನ್ನು ಮಾರಾಟ ಮಾಡುವ ದಂಧೆ ಜೋರಾಗಿ ನಡೆದಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಬೇರೆಯವರ ಆಸ್ತಿಗಳು ತಮ್ಮದೆಂದು ನಕಲಿ ದಾಖಲೆ ಸೃಷ್ಟಿ ಮಾಡಿ ಮತ್ತೊಬ್ಬರಿಗೆ ಮಾರಾಟ ಮಾಡಿರುವ 50 ಕ್ಕೂ ಆಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಕೆಲ ಪ್ರಕರಣಗಳಲ್ಲಿ ಆರೋಪಿತರ ಬಂಧನವೂ ಆಗಿದೆ. ಇಂಥಹ ನಕಲಿಗಳ ಕಣ್ಣು ಇದೀಗ ಸರ್ಕಾರಿ ಆಸ್ತಿಗಳ ಮೇಲೂ ಬಿದ್ದಿದೆ. ಸರ್ಕಾರಿ ಜಮೀನಿನ ದಾಖಲೆಗಳನ್ನು ನಕಲಿ ಮಾಡಿ ಮತ್ತೊಬ್ಬರಿಗೆ ತಮ್ಮದೇ ಜಮೀನು ಎಂದು ಮಾರಾಟ ಮಾಡುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಹೊರ ಭಾಗದಲ್ಲಿನ 7.5 ಎಕರೆ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ತೊರವಿ ಗ್ರಾಮದ ಹೊರ ಭಾಗದಲ್ಲಿರುವ ಸರ್ಕಾರಿ ಜಮೀನಿನು ಸರ್ವೇ ನಂಬರ್ 118/5 ಪೈಕಿ 7.5 ಎಕರೆ ಭೂಮಿ, 2001 ರಲ್ಲಿ ತೊರವಿ ಗ್ರಾಮದ ಜಕ್ಕಪ್ಪ ತೊರವಿ ಹಾಗೂ ಬೀರಪ್ಪ ತೊರವಿ ಎಂಬುವವರ ಹೆಸರಿಗೆ ಜಮೀನಿ ದಾಖಲೆಗಳು ನಮೂದಾಗಿದ್ದವು. ಇದನ್ನು ಕಂಡ ಜಕ್ಕಪ್ಪ ಹಾಗೂ ಬೀರಪ್ಪ ಈ ಜಮೀನು ನಮ್ಮದಲ್ಲ, ನಮ್ಮ ಹೆಸರಿಗೆ ಈ ಜಮೀನು ಹೇಗೆ ಬಂತು ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಹೆಸರು ತೆಗೆಯಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಈಗ ಅದೇ ಜಮೀನಿನ ನಕಲಿ ದಾಖಲೆ ಸೃಷ್ಟಿ ಮಾಡಿ ಬೇರೆಯವರಿಗೆ ಮಾರಾಟ ಮಾಡಿರುವುದು ಹೊರ ಬಿದ್ದಿದೆ.

ಇದನ್ನೂ ಓದಿ:ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿ: ಮರಣ ಪತ್ರ ನೀಡಿದ್ದ ಶಿರಸ್ತೇದಾರ್​ ಅಮಾನತು

ಪೊಲೀಸರ ಖೆಡ್ಡಾಕ್ಕೆ ಬಿದ್ದ ಭೂಕಳ್ಳರು

ಈ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನಿನ ಮಾಲೀಕರು ನಾವೇ ಎಂದು ಖರೀಧಿದಾರರಿಗೆ ನಂಬಿಸಿ ಮಾರಾಟ ಮಾಡಿದ್ದವರು ಇದೀಗ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಜಮೀನು ಖರೀದಿ ಮಾಡಿರುವ ಶರಣಪ್ಪ ಛಲವಾದಿ ಎಜೆಂಟ್ ಆಗಿ ಕೆಲಸ ಮಾಡಿ, ಲಕ್ಷ್ಮಣಗೌಡ ಬಿರಾದಾರ, ಮಲಕಾಜಿ ಪಾಂಡಿಚೇರಿ ಹಾಗೂ ಬಾಂಡ್ ರೈಟರ್ ಆಗಿರುವ ದತ್ತಾತ್ರೇಯ ಶಿವಶರಣ ಎಂಬ ನಾಲ್ವರನ್ನು ಆದರ್ಶ ನಗರ ಪೊಲೀಸರು ಅರೆಸ್ಟ್ ಮಾಡಿ ಒಳಗೆ ಹಾಕಿದ್ದಾರೆ.

ಜಿಲ್ಲೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮಾಡಿಕೊಡುವ ಜಾಲವೇ ಸೃಷ್ಟಿ

ನಗರಲದಲ್ಲಿ ಹಾಗೂ ಜಿಲ್ಲೆಯಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮಾಡಿಕೊಡುವ ಜಾಲವೇ ಸೃಷ್ಟಿಯಾಗಿದೆ. ಒಬ್ಬರ ಆಧಾರ ಕಾರ್ಡ್ ನಂಬರ್​ನ್ನು ಪಡೆದು ಅದಕ್ಕೆ ಮತ್ತೊಬ್ಬರ ಫೋಟೋ ಲಗತ್ತಿಸಿ ಕೊಡಲಾಗುತ್ತಿದೆ. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೊಡುತ್ತಿರುವ ಕಾರಣದಿಂದ ಯಾವ ಭಯವೇ ಇಲ್ಲದೇ ನಾವೇ ಆಸ್ತಿಯ ಮಾಲೀಕರು ಎಂದು ನಂಬಿಸಿ ಖದೀಮರು ಅನಾಯಾಸವಾಗಿ ಮತ್ತೊಬ್ಬರ ಆಸ್ತಿ ಮಾರಾಟ ಮಾಡುತ್ತಿರುವುದು ನಡೆದುಕೊಂಡು ಬರುತ್ತಿದೆ.

ಇದನ್ನೂ ಓದಿ:ಬೆಂಗಳೂರು: ಜಾಮೀನಿಗಾಗಿ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ!

ಸದ್ಯ ಆದರ್ಶ ನಗರ ಪೊಲೀಸರು, ಜಿಲ್ಲಾ ಸಿಇಎನ್ ಪೊಲೀಸರು ಹಾಗೂ ನೋಂದಣಾಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೊಡುವ ಜಾಲಗಳನ್ನು ಮಟ್ಟ ಹಾಕಬೇಕು. ನಕಲಿ ದಾಖಲೆಗಳನ್ನು ಮಾಡುವವರ ಮೇಲೆ ಕಠಿಣ ಕಾನೂನಿನ ಪ್ರಕರಣ ಕ್ರಮ ತೆಗೆದುಕೊಂಡರೆ ಈ ಅಕ್ರಮಕ್ಕೆ ಬ್ರೇಕ್ ಬೀಳಲಿದೆ. ಇನ್ನು ತೊರವಿ ಗ್ರಾಮದ ಬಳಿಯ ಸರ್ಕಾರಿ ಜಮೀನಿನ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಕ್ಕೆ ಸಾರ್ವಜನಿಕರು ಪೊಲೀಸರ ಕಾರ್ಯ ವೈಖರಿಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ನಾಲ್ವರು ಆರೋಪಿತರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೋರ್ಟ್​ ಎಲ್ಲಾ ಆರೋಪಿತರನ್ನು ನ್ಯಾಯಾಂಗಾ ಬಂಧನಕ್ಕೆ ಆದೇಶ ಮಾಡಿದೆ. ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಕ್ಕೆ ಎಲ್ಲರೂ ಜೈಲು ಪಾಲಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ನಕಲಿ ದಾಖಲೆ ಸೃಷ್ಟಿ ಮಾರಾಟ ಮಾಡುವ ಜಾಲಗಳು ಹೆಚ್ಚಿದ್ದು, ಜನರು ಸಹ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ತಮ್ಮ ಆಧಾರ ಕಾರ್ಡ್​ಗಳಿಗೆ ಆಸ್ತಿಗಳನ್ನು ಜೋಡಣೆ ಮಾಡಬೇಕು. ಕಾಲ ಕಾಲಕ್ಕೆ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿದೆ. ಈ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುವ ಜಾಲವನ್ನು ಬೇರು ಮಟ್ಟದಿಂದಲೇ ಕಿತ್ತು ಹಾಕಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!