ವಿಜಯಪುರ, ಆ.01: ಮಂಗಳಮುಖಿಯರು ಸೇರಿಕೊಂಡು ಹೆಣ್ತನದಿಂದ ವಿಮುಖಳಾಗಿ ಪುರುಷರಂತೆ ವೇಷಭೂಷಣ ತೊಟ್ಟಿದ್ದ ಯುವತಿಯನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಅರೆಸ್ಟ್ ಮಾಡಲಾಗಿದೆ. ವಿಜಯಪುರ(Vijayapura) ನಗರದ ಕೇಂದ್ರ ಬಸ್ ನಿಲ್ಧಾಣದ ಬಳಿ ಜುಲೈ 21 ರಂದು ಯುವತಿಯನ್ನು ಸಂಪೂರ್ಣ ಬೆತ್ತಲೆ ಮಾಡಿ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಿಡಿಯೋ ವೈರಲ್ ಆದ 24 ಗಂಟೆಗಳಲ್ಲಿ ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಯುವತಿ (ರೇಖಾ ರೆಡ್ಡಿ ಉರ್ಪ್ ಸಚಿವ ರೆಡ್ಡಿ) ಅವರು 6 ಮಂಗಳಮುಖಿಯರ ಮೇಲೆ ನಗರದ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸದ್ಯ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮಾ, ಕವಿತಾ, ದಾನಮ್ಮಾ ಹಾಗೂ ಮಾಹನಮ್ಮಾ ಅವರನ್ನು ಬಂಧಿಸಲಾಗಿದೆ. ಈ ಹಲ್ಲೆಯ ಕುರಿತು ತನಿಖೆ ಮಾಡಲಾಗುತ್ತಿದೆ, ತನಿಖೆ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ವಿಜಯಪುರ ಎಸ್ಪಿ ಋಷಿಕೇಷ ಸೋನೆವಣೆ ಹೇಳಿದ್ದಾರೆ.
ಇದನ್ನೂ ಓದಿ:ವಿಜಯಪುರ: ಮಂಗಳಮುಖಿಯನ್ನು ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ
ಇನ್ನು ತನ್ನ ಮೇಲೆ ಹಲ್ಲೆ ಮಾಡಿರೋ ಮಂಗಳಮುಖಿಯರ ಬಂಧನವಾಗಿದ್ದಕ್ಕೆ ಹಲ್ಲೆಗೊಳಗಾದ ಯುವತಿ ಸಂತಸ ಪಟ್ಟು, ನಾನು ಹೆಣ್ಣಾಗಿ ಹುಟ್ಟಿ ಪುರುಷರಂತೆ ಬದಲಾಗಿದ್ದೇನೆ. ಮಂಗಳಮುಖಿ ಅಶ್ವಿನಿ ಜೊತೆಗೆ ನನ್ನ ಒಡನಾಟ ಇತ್ತು. ಆಕೆ ಜೊತೆಗೆ ಪೂನಾದಲ್ಲೇ ಇದ್ದೇ. ನಾನು ಗಂಡಲ್ಲಾ, ಹೆಣ್ಣು ಎಂದು ಮಂಗಳಮುಖಿಯರಿಗೆ ಗೊತ್ತಾಗಿತ್ತು. ಪೂನಾದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದರು ಆಗ ನಾನು ನಮ್ಮೂರಿಗೆ ಬಂದು ನೆಲೆಸಿದ್ದೆ. ನಂತರ ಇನ್ಸಸ್ಟಾಗ್ರಾಂನಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರಿಗೆ ಬೈಯ್ದ ವಿಡಿಯೋ ಪೋಸ್ಟ್ ಮಾಡಿದ್ದೇ. ಅದರಿಂದ ಸಿಟ್ಟಾಗಿ ಮಂಗಳಮುಖಿಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮಂಗಳಮುಖಿಯರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಹಲ್ಲೆಗೊಳದಾದ ಯುವತಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Thu, 1 August 24