ಬೆಳಗಾವಿಯಲ್ಲಿ ತೀವ್ರಗೊಂಡ ಮರಾಠ ಮೀಸಲಾತಿ ಕಿಚ್ಚು; ಬೀಡ್ ನಗರದಲ್ಲಿ ನಿಷೇಧಾಜ್ಞೆ ಜಾರಿ, ವಿಜಯಪುರದಿಂದ ಮಹಾರಾಷ್ಟ್ರಕ್ಕೆ ಬಸ್ ಬಂದ್

| Updated By: ಆಯೇಷಾ ಬಾನು

Updated on: Oct 31, 2023 | 1:06 PM

ಇಂದು ಬೀಡ್ ಜಿಲ್ಲಾ ಬಂದ್‌ಗೆ ಕರೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬೀಡ್ ಮತ್ತು ಧಾರಾಶಿವ್ ಜಿಲ್ಲೆಯಲ್ಲಿ ಮರಾಠಾ ಮೀಸಲಾತಿ ಕಿಚ್ಚು ತೀವ್ರಗೊಂಡಿದೆ. ಬೀಡ್, ಧಾರಾಶಿವ ಜಿಲ್ಲೆಯಲ್ಲಿ ನಿನ್ನೆ ಹೋರಾಟ ಹಿಂಸಾಚಾರ ರೂಪ ಪಡೆದಿತ್ತು. ಬೀಡ್ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆ ಉಮರಗಾ ತಾಲೂಕಿನ ತುರೋರಿ ಗ್ರಾಮದಲ್ಲಿ ನಿನ್ನೆ ಸಂಜೆ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು.

ಬೆಳಗಾವಿಯಲ್ಲಿ ತೀವ್ರಗೊಂಡ ಮರಾಠ ಮೀಸಲಾತಿ ಕಿಚ್ಚು; ಬೀಡ್ ನಗರದಲ್ಲಿ ನಿಷೇಧಾಜ್ಞೆ ಜಾರಿ, ವಿಜಯಪುರದಿಂದ ಮಹಾರಾಷ್ಟ್ರಕ್ಕೆ ಬಸ್ ಬಂದ್
ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ಕೆಲ ಭಾಗಗಳಿಗೆ ಸಂಪರ್ಕಿಸುವ ಬಸ್​ಗಳ ಸಂಚಾರ ಸ್ಥಗಿತ
Follow us on

ವಿಜಯಪುರ, ಅ.31: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಪ್ರತಿಭಟನೆ ಮುಂದುವರಿದಿದೆ (Maharashtra Maratha Quota Demand) . ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್​​ಗಳಿಗೂ ಬೆಂಕಿ ಹಚ್ಚಲಾಗುತ್ತಿದೆ (Bus Fire). ಈ ಹಿನ್ನೆಲೆ ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ಕೆಲ ಭಾಗಗಳಿಗೆ ಸಂಪರ್ಕಿಸುವ 42 ಸರ್ಕಾರಿ ಬಸ್​ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಿಂದ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ವಿಜಯಪುರ ‌ಜಿಲ್ಲಾ ಸಾರಿಗೆ ಉಪವಿಭಾಗಾಧಿಕಾರಿ ಮೊಹಮ್ಮದ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆ, ಮುಂಬೈ, ಲಾತೋರ್​, ನಾಂದೇಡ್​, ತುಳಜಾಪುರ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳಬೇಕಿದ್ದ ಕೆಕೆಆರ್​ಟಿಸಿ ಬಸ್​​ ಸಂಚಾರ ಬಂದ್ ಮಾಡಲಾಗಿದೆ. ಜಿಲ್ಲೆಯಿಂದ ‌ನಿತ್ಯ‌ 124 ಬಸ್​ಗಳು ಮಹಾರಾಷ್ಟ್ರಕ್ಕೆ ಸಂಚಾರ ಮಾಡುತ್ತಿದ್ದವು. ಈ ಪೈಕಿ 42 ಬಸ್ ಗಳ ಸಂಚಾರ ಬಂದ್ ಮಾಡಲಾಗಿದೆ. ಸೊಲ್ಹಾಪುರ, ಸಾಂಗ್ಲಿ, ಮೀರಜ್​ಗೆ ಮಾತ್ರ ಕರ್ನಾಟಕದ ಬಸ್ ಸಂಚಾರ​ಕ್ಕೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಎಂದಿನಂತೆ ಮಹಾರಾಷ್ಟ್ರ ಸರ್ಕಾರಿ ಬಸ್​​​ಗಳು ಸಂಚರಿಸಲಿವೆ. ಮರಾಠಿ ಮೀಸಲಾತಿ ಹೋರಾಟದ ತೀವ್ರತೆಯಿರೋ‌ ಪ್ರದೇಶದಲ್ಲಿ ಸಹಜ ಸ್ಥಿತಿ ಕಂಡು ಬಂದ ನಂತರ ಎಂದಿನಂತೆ ‌ಬಸ್ ಗಳ ಸಂಚಾರ ಆರಂಭಿಸುವುದಾಗಿ ವಿಜಯಪುರ ‌ಜಿಲ್ಲಾ ಸಾರಿಗೆ ಉಪವಿಭಾಗಾಧಿಕಾರಿ ಮೊಹಮ್ಮದ್ ಫಯಾಜ್ ತಿಳಿಸಿದರು.

ಗಡಿಜಿಲ್ಲೆ ಬೆಳಗಾವಿಗೂ ತಟ್ಟಿದ ಮರಾಠ ಮೀಸಲಾತಿ ಹೋರಾಟ ಎಫೆಕ್ಟ್​​

ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹಾಗೂ ಚಿಕ್ಕೋಡಿ ವಿಭಾಗದಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. NWKRTC ಚಿಕ್ಕೋಡಿ ವಿಭಾಗದಿಂದ 215 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದ ಗಡಿ ಭಾಗದವರೆಗೆ ಮಾತ್ರ ಸರ್ಕಾರಿ ಬಸ್‌ಗಳ ಸಂಚಾರ ಇರಲಿದೆ. ಬೆಳಗಾವಿ ಗಡಿಯ ನಿಪ್ಪಾಣಿ, ಕಾಗವಾಡದವರೆಗೆ ಮಾತ್ರ ಬಸ್‌ಗಳ ಸಂಚಾರ. ಬಸ್ ಸಂಚಾರ ಬಂದ್ ಹಿನ್ನೆಲೆ ಉಭಯ ರಾಜ್ಯಗಳ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಗಡಿಯಲ್ಲಿ ಭದ್ರತೆ ಹೆಚ್ಚಳ ಮಾಡಿದ್ದೇವೆ. ಎಲ್ಲೆಲ್ಲಿ ಸೆನ್ಸಿಟಿವ್ ವಾತಾವರಣ ಇದೆ ಅಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಿದ್ದೇವೆ. ಭದ್ರತಾ ವ್ಯವಸ್ಥೆ ಹೆಚ್ಚಳ ಮಾಡಿದ್ದೇವೆ. ಎಂಇಎಸ್ ಕೂಡ ಕರಾಳ ದಿನ ಅಂತ ಮಾಡುತ್ತೆ. ಹಾಗೇನಾದ್ರೂ ಮಾಡಿದ್ರೆ ಅದನ್ನು ತಡೆಯುವ ಕೆಲಸ ಮಾಡ್ತೇವೆ ಎಂದರು.

ಇದನ್ನೂ ಓದಿ: KSRTC ಬಸ್‌ಗೆ ಬೆಂಕಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ‌ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ

ಇನ್ನು ಇಂದು ಬೀಡ್ ಜಿಲ್ಲಾ ಬಂದ್‌ಗೆ ಕರೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬೀಡ್ ಮತ್ತು ಧಾರಾಶಿವ್ ಜಿಲ್ಲೆಯಲ್ಲಿ ಮರಾಠಾ ಮೀಸಲಾತಿ ಕಿಚ್ಚು ತೀವ್ರಗೊಂಡಿದೆ. ಬೀಡ್, ಧಾರಾಶಿವ ಜಿಲ್ಲೆಯಲ್ಲಿ ನಿನ್ನೆ ಹೋರಾಟ ಹಿಂಸಾಚಾರ ರೂಪ ಪಡೆದಿತ್ತು. ಬೀಡ್ ನಗರದಲ್ಲಿ ಎನ್‌ಸಿಪಿ ಶಾಸಕ ಸಂದೀಪ್ ಕ್ಷೀರಸಾಗರ ಮನೆ ಬಳಿ ಉದ್ರಿಕ್ತರು ಬೆಂಕಿ ಹಚ್ಚಿದ್ದರು. ಬೀಡ್‌ನಲ್ಲಿ ಎನ್‌ಸಿಪಿ ಕಾರ್ಯಾಲಯಕ್ಕೂ ಬೆಂಕಿ ಹಚ್ಚಲಾಗಿತ್ತು. ಬೀಡ್ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆ ಉಮರಗಾ ತಾಲೂಕಿನ ತುರೋರಿ ಗ್ರಾಮದಲ್ಲಿ ನಿನ್ನೆ ಸಂಜೆ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು.

ಮಹಾರಾಷ್ಟ್ರದ ಮೂವರು ಸಚಿವರು, ಸಂಸದರಿಗೆ ಬೆಳಗಾವಿ ಡಿಸಿ ಶಾಕ್

ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ನಿರ್ಧರಿಸಿದ್ದ ಎಂಇಎಸ್​ಗೆ​ ಶಾಕ್​ ಸಿಕ್ಕಿದೆ. ಮಹಾರಾಷ್ಟ್ರದ ಮೂವರು ಸಚಿವರು, ಸಂಸದರಿಗೆ ಬೆಳಗಾವಿ ಜಿಲ್ಲೆಯ ಪ್ರವೇಶ ನಿರ್ಬಂಧಿಸಲಾಗಿದೆ.ಮಹಾರಾಷ್ಟ್ರ ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ್, ದೀಪಕ್ ಕೇಸರಕರ್, ಸಂಸದ ಧೈರ್ಯಶೀಲ್​​ಗೆ ಇಂದಿನಿಂದ ನವೆಂಬರ್​​ 2ರ ಸಂಜೆ 6ರವರೆಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧ ಹೇರಿ ಡಿಸಿ ನಿತೇಶ್ ಪಾಟೀಲ್ ಆದೇಶ ನೀಡಿದ್ದಾರೆ. ಎಂಇಎಸ್​​​ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸಿಎಂ ಶಿಂಧೆ ಬೆಂಬಲಿಸಿದ್ದರು. ಮಹಾರಾಷ್ಟ್ರದಿಂದ ಪ್ರತಿನಿಧಿಗಳನ್ನ ಕಳಿಸುವುದಾಗಿ ಹೇಳಿದ್ದರು. ಸಿಎಂ ಶಿಂಧೆ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:54 am, Tue, 31 October 23