AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಬಸ್‌ಗೆ ಬೆಂಕಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ‌ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ

ಬೀದರ್‌ ಜಿಲ್ಲೆ ಭಾಲ್ಕಿಯಿಂದ ಮಹಾರಾಷ್ಟ್ರದ ಪುಣೆಗೆ ತೆರಳುತ್ತಿದ್ದ ಬಸ್​ಗೆ ಬೆಂಕಿ ಹಚ್ಚಲಾಗಿದೆ. ಸದ್ಯ KA 38 F 1201 ಸಂಖ್ಯೆಯ KSRTC ಬಸ್‌ನಲ್ಲಿದ್ದ 48 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ‌ ಬಸ್ ಸಂಚಾರವನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

KSRTC ಬಸ್‌ಗೆ ಬೆಂಕಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ‌ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ
ಸಾಂದರ್ಭಿಕ ಚಿತ್ರ
Sahadev Mane
| Updated By: ಆಯೇಷಾ ಬಾನು|

Updated on: Oct 31, 2023 | 7:12 AM

Share

ಬೆಳಗಾವಿ, ಅ.31: ಕನ್ನಡ ರಾಜ್ಯೋತ್ಸವ ಬಂದ್ರೆ ಸಾಕು ನಾಡದ್ರೋಹಿ ಸಂಘಟನೆ ಎಂಇಎಸ್ (MES) ಫುಲ್ ಆ್ಯಕ್ಟೀವ್ ಆಗಿ ಬಿಡುತ್ತೆ. ಕನ್ನಡ ಹಬ್ಬದ ದಿನ ಕರಾಳ ದಿನಾಚರಣೆ ಆಚರಿಸಿ ಪುಂಡಾಟಿಕೆ ಪ್ರದರ್ಶಿಸುವ ಕೆಲಸ ಮಾಡ್ತಾರೆ. ಆದರೆ ಈ ಬಾರಿ ಕರಾಳ ದಿನಾಚರಣೆಗೆ (Black Day) ಅನುಮತಿ ಇಲ್ಲಾ ಅಂತಾ ಡಿಸಿ ಅವರು ಹೇಳಿದ ಮೇಲೆಯೂ ಎಂಇಎಸ್ ಪುಂಡರು ಸಭೆ ಸೇರಿ ಕರಾಳ ದಿನಾಚರಣೆ ಮಾಡಲು ನಿರ್ಣಯ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಕಿಚ್ಚಿಗೆ KSRTC ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್​ ಜಿಲ್ಲೆಯ ಉಮರಗಾ ತಾಲೂಕಿನ ತುರೋರಿ ಗ್ರಾಮದಲ್ಲಿ ಉದ್ರಿಕ್ತರು ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ.

ಬೀದರ್‌ ಜಿಲ್ಲೆ ಭಾಲ್ಕಿಯಿಂದ ಮಹಾರಾಷ್ಟ್ರದ ಪುಣೆಗೆ ತೆರಳುತ್ತಿದ್ದ ಬಸ್​ಗೆ ಬೆಂಕಿ ಹಚ್ಚಲಾಗಿದೆ. ಸದ್ಯ KA 38 F 1201 ಸಂಖ್ಯೆಯ KSRTC ಬಸ್‌ನಲ್ಲಿದ್ದ 48 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ‌ ಬಸ್ ಸಂಚಾರವನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂಓದಿ: ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಅಕ್ರಮ ಸಂಪತ್ತು ಪತ್ತೆ

ಕರ್ನಾಟಕ ರಾಜ್ಯೋತ್ಸವ ಬಂದ್ರೆ ಸಾಕು ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ನಾಡದ್ರೋಹಿ ಕೆಲಸಕ್ಕೆ ಸಜ್ಜಾಗಿ ಬಿಡುತ್ತೆ, ಕರಾಳ ದಿನಾಚರಣೆ ಹೆಸರಲ್ಲಿ ಕನ್ನಡಿಗರನ್ನ ಕೆರಳಿಸುವ ಕೆಲಸಕ್ಕೆ ಮುಂದಾಗ್ತಾರೆ. ಈ ಬಾರಿ ರಾಜ್ಯೋತ್ಸವ ದಿನದಂದೂ ಎಂಇಎಸ್ ನ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಅಂತಾ ಮೊನ್ನೆ ಕನ್ನಡಪರ ಹೋರಾಟಗಾರರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಡಿಸಿ ಅವರು ಕೂಡ ಕರಾಳ ದಿನಾಚರಣೆಗೆ ಈ ಬಾರಿ ಅನುಮತಿ ಇಲ್ಲಾ, ಅದರಂತೆ ಮಹಾರಾಷ್ಟ್ರ ಭಾಗದಿಂದ ಯಾವ ನಾಯಕರನ್ನೂ ಆ ದಿನ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರುತ್ತೇವೆ ಅಂತಾ ಹೇಳಿದ್ದರು. ಈ ಎಲ್ಲ ಬೆಳವಣಿಗೆ ಮಧ್ಯೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಮಹಾ ಸಿಎಂ ಏಕನಾಥ ಶಿಂಧೆ ಅದೊಂದು ಹೇಳಿಕೆ ನೀಡಿದ್ದಾರೆ. ಇದು ಕನ್ನಡಿಗರನ್ನ ಕೆರಳಿಸುವಂತೆ ಮಾಡಿದ್ರೇ ಇತ್ತ ನಾಡದ್ರೋಹಿಗಳು ಇನ್ನಷ್ಟು ಆ್ಯಕ್ಟೀವ್ ಆಗುವಂತೆ ಮಾಡಿದೆ. ಮಾಹಾರಾಷ್ಟ್ರ ಸಿಎಂಗೆ ಮಾಧ್ಯಮದವರು ಕರಾಳ ದಿನಾಚರಣೆಗೆ ಯಾರನ್ನಾದ್ರೂ ಬೆಳಗಾವಿಗೆ ಕಳುಹಿಸುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಬೆಳಗಾವಿಗೆ ನಮ್ಮ ಪ್ರತಿನಿಧಿ ಹೋಗ್ತಾರೆ ಅಂತಾ ಹೇಳುವ ಮೂಲಕ ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಪ್ರತಿನಿಧಿಯನ್ನ ಕಳುಹಿಸಿಕೊಡುವ ಮಾತನ್ನ ಮಹಾ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ