ಜಮೀನು ಉಳುಮೆ ಮಾಡುವ ವೇಳೆ ಅವಘಡ; ರೋಟೋವೇಟರ್ ಕಟರ್ ಬಡಿದು ಯುವಕ ಸಾವು

ಜಮೀನು ಉಳುಮೆ ಮಾಡುವ ವೇಳೆ ಅವಘಡ; ರೋಟೋವೇಟರ್ ಕಟರ್ ಬಡಿದು ಯುವಕ ಸಾವು
ರೊಟೋವೇಟರ್ ಕಟರ್

ರೋಟೋವೇಟರ್ ಕಟರ್ ಬಡಿದು ಗೊಳಸಂಗಿ ಗ್ರಾಮದ ನಿವಾಸಿ ಮೆಹಿಬೂಬ್ ಮನಗೂಳಿ(32) ಮೃತಪಟ್ಟಿದ್ದಾರೆ. ಕೂಡಗಿ ಎನ್​ಟಿಪಿಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

TV9kannada Web Team

| Edited By: preethi shettigar

Jan 28, 2022 | 12:16 PM

ವಿಜಯಪುರ: ಟ್ರ್ಯಾಕ್ಟರ್​ನಿಂದ ರೋಟೋವೇಟರ್ ಮೂಲಕ ಜಮೀನು ಉಳುಮೆ ಮಾಡುವ ವೇಳೆ ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ರೋಟೋವೇಟರ್ ಕಟರ್ (Rotavator cutter) ಬಡಿದು ಗೊಳಸಂಗಿ ಗ್ರಾಮದ ನಿವಾಸಿ ಮೆಹಿಬೂಬ್ ಮನಗೂಳಿ(32) ಮೃತಪಟ್ಟಿದ್ದಾರೆ(Death). ಕೂಡಗಿ ಎನ್​ಟಿಪಿಸಿ(NTPC) ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಲಬುರಗಿ: ನೀರಾವರಿ ಪಂಪಸೆಟ್​ನಲ್ಲಿನ ತಾಮ್ರ ಕಳ್ಳತನ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಟಾಕಳಿ ಗ್ರಾಮದಲ್ಲಿ ನೀರಾವರಿ ಪಂಪಸೆಟ್​ನಲ್ಲಿನ ತಾಮ್ರ ಕಳ್ಳತನ ಮಾಡಿದ್ದಾರೆ. ಭೀಮಾ ನದಿ ದಡದಲ್ಲಿನ ಪಂಪ್​ಸೆಟ್​ನಲ್ಲಿನ ತಾಮ್ರ ಕಳ್ಳತನ ಮಾಡಿದ್ದಾರೆ. ಹದಿನೈದು  ಪಂಪ್​ಸೆಟ್​ನಲ್ಲಿನ ತಾಮ್ರ ಕಳ್ಳತನವಾಗಿದ್ದು, ಕಳೆದ ಒಂದು ವಾರದಲ್ಲಿ ನೂರಕ್ಕೂ ಹೆಚ್ಚು ಪಂಪ್​ಸೆಟ್​ನಲ್ಲಿನ ತಾಮ್ರ ಕಳ್ಳತನವಾಗಿದೆ. ಅಫಜಲಪುರ, ಜೇವರ್ಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಕಳ್ಳತನದಿಂದ ರೈತರು ಕಂಗಾಲಾಗಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗದಗ: ಕ್ರಷರ್ ಧೂಳಿಗೆ, ಕಲ್ಲು ಗಣಿಗಾರಿಕೆಗೆ ರೈತರ ಬೆಳೆ ನಾಶ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಬಳಿ ಇರುವ ಗಣಿಗಾರಿಕೆಯಿಂದ ರೈತರ ಬೆಳೆ ನಾಶವಾಗಿದೆ. ಅವೈಜ್ಞಾನಿಕ ಬ್ಲಾಸ್ಟಿಂಗ್​ಗೆ ದೊಡ್ಡ ಪ್ರಮಾಣದ ಕಲ್ಲುಗಳು ಬೋರ್ ವೆಲ್​ಗಳು ಬ್ಲಾಸ್ಟಿಂಗ್​ಗೆ ಕುಸಿಯುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶಿಲ್ದಾರ, ಪೊಲೀಸ್, ಗಣಿ ಅಧಿಕಾರಿಗಳ ಗಮನಕ್ಕೆ ತಂದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ನೆರವಿಗೆ ಬಾರದ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಸಧ್ಬವ್ ಕನ್​ಸ್ಟ್ರಕ್ಷನ್ ಕಂಪನಿ ಸದ್ಯ ಆರ್​ಎಸ್​ಎಎಸ್​ ಕಂಪನಿಯಿಂದ ‌ಕಾಮಗಾರಿ ನಡೆಸುತ್ತಿದೆ. ಅವೈಜ್ಞಾನಿಕ ಕಲ್ಲು ಕ್ವಾರಿ ಬ್ಲಾಸ್ಟಿಂಗ್ ನಡೆಯುತ್ತಿದ್ದು, ರೈತರ ಜಮೀನಿನಲ್ಲಿ ಕಲ್ಲು ರಾಶಿ ಹಾಕಲಾಗಿದೆ. ತಲೆ ಮೇಲೆ ಕಲ್ಲು ಹೊತ್ತುನಿಂತು ರೈತರು ರೋಷಾವೇಶ ವ್ಯಕ್ತಪಡಿಸಿದ್ದಾರೆ. ಬ್ಲಾಸ್ಟಿಂಗ್​ಗೆ ಹೆದರಿ ಜಮೀನಿನ ಕಡೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.

ಇದನ್ನೂ ಓದಿ: ಆಂಬ್ಯುಲೆನ್ಸ್ ವಾಹನ ತೊಳೆಯಲು ನೀರಿಗಿಳಿದಿದ್ದ ಯುವಕ ಜಲ ಸಮಾಧಿ – ಟ್ರಾಕ್ಟರ್​ಗೆ ಬೈಕ್​ ಡಿಕ್ಕಿ; ಇಬ್ಬರು ಸವಾರರ ಸಾವು

ಟ್ರಾಕ್ಟರ್​ಗೆ ಸಿಲುಕಿ ಗಾಯಗೊಂಡಿದ್ದ ನಾಗರ ಹಾವು ರಕ್ಷಣೆ: ಮಾನವೀಯತೆ ಮೆರೆದ ಉರಗ ತಜ್ಞ Photos

Follow us on

Related Stories

Most Read Stories

Click on your DTH Provider to Add TV9 Kannada