ಉಳುಮೆ ವೇಳೆ ಹೆದರಿದ ಜೋಡೆತ್ತುಗಳು ರೈತನ ಕಣ್ಮುಂದೆಯೇ ಬಾವಿಗೆ ಬಿದ್ದು ದಾರುಣ ಸಾವು
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಸ್ತವಾಡದ ರೈತ ಲಗಮಣ್ಣಗೆ ಸೇರಿದ ಜೋಡೆತ್ತುಗಳು ದುರ್ಮರಣಕ್ಕೀಡಾಗಿವೆ. ರೈತ ಲಗಮಣ್ಣ ಹುಕ್ಕೇರಿ ಕಣ್ಣೆದುರೇ ಜೋಡೆತ್ತುಗಳ ಸಾವು ಸಂಭವಿಸಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಳಗಾವಿ: ತೋಟದಲ್ಲಿ ಉಳುಮೆ ಮಾಡುವ ವೇಳೆ ಹೆದರಿದ ಜೋಡೆತ್ತುಗಳು ವಿಶಾಲವಾದ ಬಾವಿಗೆ ಬಿದ್ದು ಸಾವನ್ನಪ್ಪಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಸ್ತವಾಡದ ರೈತ ಲಗಮಣ್ಣಗೆ ಸೇರಿದ ಜೋಡೆತ್ತುಗಳು ದುರ್ಮರಣಕ್ಕೀಡಾಗಿವೆ.
ರೈತ ಲಗಮಣ್ಣ ಹುಕ್ಕೇರಿ ಕಣ್ಣೆದುರೇ ಜೋಡೆತ್ತುಗಳ ಸಾವು ಸಂಭವಿಸಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಸ್ತವಾಡ ಗ್ರಾಮದ ರೈತ ಲಗಮಣ್ಣ ಸತ್ಯಪ್ಪ ಹುಕ್ಕೇರಿ ಎಂಬುವವರಿಗೆ ಸೇರಿದ ಜೋಡೆತ್ತುಗಳು ಇವಾಗಿವೆ. ಸುಮಾರು ಎರಡು ಲಕ್ಷ ಮೌಲ್ಯದ ಜೋಡೆತ್ತುಗಳನ್ನು ಕಳೆದುಕೊಂಡ ರೈತ ಸತ್ಯಪ್ಪ ಕಳೆದುಕೊಂಡಿದ್ದಾರೆ. ಸ್ಥಳೀಯರು ಹರಸಾಹಸಪಟ್ಟು ಎತ್ತುಗಳ ಕಳೇಬರ ಹೊರ ತೆಗೆದಿದ್ದಾರೆ.
ಇದನ್ನೂ ಓದಿ: ಗದಗ: ಮಗು ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಯತ್ನ ಪ್ರಕರಣ; ಮಲಪ್ರಭಾ ನದಿಯಲ್ಲಿ ಮಗುವಿನ ಶವ ಪತ್ತೆ
ಇದನ್ನೂ ಓದಿ: ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ!
Published On - 1:12 pm, Fri, 1 October 21