ಬೆಳಗಾವಿ: ಚಲಿಸುತ್ತಿದ್ದ ಬಸ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆಗೈದ ದುಷ್ಕರ್ಮಿ

ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಸಂಕೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳು ವಂದನಾ ಹಟ್ಟಿಕರ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ: ಚಲಿಸುತ್ತಿದ್ದ ಬಸ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆಗೈದ ದುಷ್ಕರ್ಮಿ
ಹಲ್ಲೆ ನಡೆಸಿದ ವ್ಯಕ್ತಿ ಮತ್ತು ಹಲ್ಲೆಗೊಳಗಾದ ಮಹಿಳೆ

ಬೆಳಗಾವಿ: ಚಲಿಸುತ್ತಿದ್ದ ಬಸ್ ನಿಲ್ಲಿಸಿ ಮಹಿಳೆಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಆಲೂರು ಕೆ.ಎಂ ಗ್ರಾಮದಲ್ಲಿ ನಡೆದಿದೆ. ವಂದನಾ ಎಂಬ ಮಹಿಳೆಯ ಮೇಲೆಯೇ ಹಲ್ಲೆ ನಡೆದಿರುವುದು. ಪ್ರವೀಣ್ ಕಾಂಬ್ಳೆ ಎಂಬ ವ್ಯಕ್ತಿಯೇ ಹಲ್ಲೆ ನಡೆಸಿದಾತ. ಸಂಕೇಶ್ವರ ಪಟ್ಟಣದಿಂದ ಬಾಡ ಗ್ರಾಮಕ್ಕೆ ತೆರಳುತ್ತಿದ್ದ ಅವರ ಮೇಲೆ ಹಲ್ಲೆ ನಡೆಸಿದ ಪ್ರವೀಣ್ ಕಾಂಬ್ಳೆ ಮಹಿಳೆಗೆ ಪರಿಚಯಸ್ಥ ಎಂಬುದು ತಿಳಿದುಬಂದಿದೆ. ಪ್ರವೀಣ್ ಕಾಂಬ್ಳೆ ಚಿಕ್ಕೋಡಿ ತಾಲೂಕಿನ‌ ಮಾಂಗನೂರಿನ ನಿವಾಸಿ ಎಂಬ ಮಾಹಿತಿ ದೊರೆತಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಸಂಕೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಾಯಾಳು ವಂದನಾ ಹಟ್ಟಿಕರ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಪೊಲೀಸ್ ಕಾನ್ಸ್​ಟೇಬಲ್ ಮನೆಯಲ್ಲಿ ಕಳ್ಳತನ
ಬೆಂಗಳೂರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮನೆಯಲ್ಲೇ ಕಳವು ನಡೆದಿದೆ. ಶೇಷಾದ್ರಿಪುರಂನ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಕಳ್ಳತನ ನಡೆಸಿದ್ದು ಸೆಪ್ಟೆಂಬರ್ 27ರಂದು ಕಾನ್ಸ್ಟೇಬಲ್ ಮಾರುತಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಭಾರತ್ ಬಂದ್ ಹಿನ್ನೆಲೆ ಮುಂಜಾನೆ ಕರ್ತವ್ಯಕ್ಕೆ ತೆರಳಿದ್ದ ಕಾನ್ಸ್ಟೇಬಲ್ ಮಾರುತಿ ಅವರು ಅಂದು ರಾತ್ರಿ ಸ್ನೇಹಿತರ ಮನೆಯಲ್ಲಿ ತಂಗಿದ್ದರು. ಮರುದಿನ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಚಿನ್ನ, ಬೆಳ್ಳಿ, ಮೊಬೈಲ್ ಸೇರಿ 85 ಸಾವಿರ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ ಕಳ್ಳತನ; ಬಸ್ ಪತ್ತೆ
ನೆಲಮಂಗಲ: ದಾಬಸ್‌ಪೇಟೆಯಲ್ಲಿ ರಸ್ತೆಬದಿ ನಿಲ್ಲಿಸಿದಾಗ ಕಳ್ಳತನವಾಗಿದ್ದ ಖಾಸಗಿ ಬಸ್ಸನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಶಿವಕುಮಾರ್‌ ಅವರಿಗೆ ಸೇರಿದ ಬಸವೇಶ್ವರ ಹೆಸರಿನ ಖಾಸಗಿ ಬಸ್ಸೇ ಕಳ್ಳತನವಾಗಿತ್ತು. ರಸ್ತೆಬದಿ ನಿಲ್ಲಿಸಿ ಊಟಕ್ಕೆ ತೆರಳಿದ್ದ ವೇಳೆ ಬಸ್ ಕಳ್ಳತನವಾಗಿತ್ತು. ಅಪರಿಚಿತನೋರ್ವ ಬಸ್ ಚಲಾಯಿಸಿಕೊಂಡು ಹೋಗಿ ಕಳವು ಮಾಡಲಾಗಿತ್ತು. ಪೊಲೀಸರು ಮಾಲೀಕನ ದೂರಿನ ಮೇರೆಗೆ ಬಸ್ ಪತ್ತೆ ಹಚ್ಚಿದ್ದಾರೆ. ತುಮಕೂರು ತಾಲೂಕಿನ ಗೂಳೂರು ಗ್ರಾಮ ಬಳಿ ಬಸ್ ಪತ್ತೆಯಾಗಿದೆ. ಕಳವಿನ ಬಗ್ಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:

ಹಾಸನದ ಆಲೂಗಡ್ಡೆ ಬೆಳೆಗಾರರಿಗೆ 129 ಕೋಟಿ ನಷ್ಟವಾಗಿದೆ: ಎಚ್.ಡಿ.ರೇವಣ್ಣ ಆಕ್ಷೇಪ 

RRR ಚಿತ್ರದ ಬಿಡುಗಡೆಯ ಬಗ್ಗೆ ಕೇಳಿಬರುತ್ತಿದೆ ಅಚ್ಚರಿಯ ಸುದ್ದಿ; ಏನದು? ಇಲ್ಲಿದೆ ಮಾಹಿತಿ

Read Full Article

Click on your DTH Provider to Add TV9 Kannada