ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಿಂತಿಲ್ಲ: ಮೇಧಾ ಪಾಟ್ಕರ್ ಹೇಳಿಕೆ

Medha Patkar: ಸ್ಲಂಗಳ ಮೇಲೆ ಉಳ್ಳವರ ಕಣ್ಣು ಬಿದ್ದಿದ್ದು, ಸ್ಲಂ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಾರ್ಪೊರೇಟೈಸೇಷನ್​ ವಿರುದ್ಧವೂ ಹೋರಾಡಬೇಕಿದೆ. ಬಿಲ್​ಗೇಟ್ಸ್ ಫೌಂಡೇಶನ್, ವಾಲ್​ಮಾರ್ಟ್​ ಬರುತ್ತಿದ್ದು ಅವುಗಳ ವಿರುದ್ಧವೂ ಹೋರಾಡಬೇಕಿದೆ ಎಂದು ಮೇಧಾ ಪಾಟ್ಕರ್ ಹೇಳಿದ್ದಾರೆ.

ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನಿಂತಿಲ್ಲ: ಮೇಧಾ ಪಾಟ್ಕರ್ ಹೇಳಿಕೆ
ಮೇಧಾ ಪಾಟ್ಕರ್

ವಿಜಯಪುರ: ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಇನ್ನೂ ನಿಂತಿಲ್ಲ. ಇಷ್ಟರಲ್ಲೇ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್​ ಗುರುವಾರ ಹೇಳಿದ್ದಾರೆ. ದೆಹಲಿ ಗಡಿಯಲ್ಲಿ ಹೋರಾಟ ಸ್ಥಗಿತಗೊಂಡಿದೆ, ಹೋರಾಟ ಹಿಂಪಡೆದಿಲ್ಲ. ಜನವರಿ 15ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತ ಸಂಘಟನೆಗಳ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಮೇಧಾ ಪಾಟ್ಕರ್​ ತಿಳಿಸಿದ್ದಾರೆ.

ಸ್ಲಂಗಳ ಮೇಲೆ ಉಳ್ಳವರ ಕಣ್ಣು ಬಿದ್ದಿದ್ದು, ಸ್ಲಂ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಾರ್ಪೊರೇಟೈಸೇಷನ್​ ವಿರುದ್ಧವೂ ಹೋರಾಡಬೇಕಿದೆ. ಬಿಲ್​ಗೇಟ್ಸ್ ಫೌಂಡೇಶನ್, ವಾಲ್​ಮಾರ್ಟ್​ ಬರುತ್ತಿದ್ದು ಅವುಗಳ ವಿರುದ್ಧವೂ ಹೋರಾಡಬೇಕಿದೆ ಎಂದು ವಿಜಯಪುರ ನಗರದಲ್ಲಿ ಸಾಮಾಜಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಹೇಳಿಕೆ ನೀಡಿದ್ದಾರೆ.

ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಡಿಸೆಂಬರ್​ನಲ್ಲಿ ಮನೆಗೆ ಹೋಗಲು ಸಿದ್ಧತೆ ನಡೆಸಿದ್ದರು. ಗಡಿಗಳಲ್ಲಿ ಹಾಕಿದ್ದ ಟೆಂಟ್​​ಗಳನ್ನು ತೆಗೆದಿದ್ದರು. ರೈತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಕೇಂದ್ರ ಸರ್ಕಾರದಿಂದ ಅಧಿಕೃತ ಪತ್ರ ನೀಡಲಾದ ಬೆನ್ನಲ್ಲೇ ರೈತರು ತಮ್ಮ ಆಂದೋಲನವನ್ನು ಹಿಂಪಡೆದಿದ್ದರು. ಹಾಗೆ ಡಿಸೆಂಬರ್ 11ರ ಸಂಜೆಯ ಒಳಗೆ ಎಲ್ಲರೂ ಗಡಿಗಳಿಂದ ಸಂಪೂರ್ಣವಾಗಿ ವಾಪಸ್​ ಆಗಲಿರುವ ಬಗ್ಗೆ ಹೇಳಿದ್ದರು.

ಆದರೆ ಹೀಗೆ ಹೋಗುವ ಮೊದಲು ದೆಹಲಿಯ ಗಡಿಯಲ್ಲಿ ರೈತರು ವಿಜಯ್​ ದಿವಸ್​ ಆಚರಣೆ ಮಾಡಿದ್ದರು. ವಿವಾದಿತ ಕೃಷಿ ಕಾಯ್ದೆಗಳ ಆಂದೋಲನದಲ್ಲಿ ತಮಗೆ ಕೇಂದ್ರದ ವಿರುದ್ಧ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ವಿಜಯ್​ ದಿವಸ್ ಆಚರಣೆ ಮಾಡಿ, ತಮ್ಮ ಊರಿಗೆ ತೆರಳಿದ್ದರು. ಶನಿವಾರ ದೆಹಲಿ ಗಡಿಯಲ್ಲಿ, ಎಲ್ಲ ಟೋಲ್ ಪ್ಲಾಜಾಗಳಲ್ಲಿ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ರೈತರು ವಿಜಯ ಮೆರವಣಿಗೆ ನಡೆಸಲಿರುವ ಬಗ್ಗೆ ಎಂದು ಸಂಯುಕ್ತ ಕಿಸಾನ್​ ಮೋರ್ಚಾ ಹೇಳಿಕೆ ನೀಡಿತ್ತು.

ಇದನ್ನೂ ಓದಿ: Kisan mahapanchayat ‘ಸರ್ಕಾರವು ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡುತ್ತಿದೆ, ನಾವು ದೇಶವನ್ನು ಉಳಿಸಲು ಇಲ್ಲಿಗೆ ಬಂದಿದ್ದೇವೆ

ಇದನ್ನೂ ಓದಿ: Farm Laws Repeal ಮೂರು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಂಪುಟ ಅಸ್ತು

Published On - 9:16 pm, Thu, 13 January 22

Click on your DTH Provider to Add TV9 Kannada