ಜೆಡಿಎಸ್, ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ; ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಯತ್ನಾಳ್ ತಿರುಗೇಟು
ಸಮ್ಮಿಶ್ರ ಸರ್ಕಾರ ಕೆಡವಲು ನಾನು, ಶಾಸಕ ಯತ್ನಾಳ್ ಬಹಳಷ್ಟು ಶ್ರಮಿಸಿದ್ದೇವೆ. ಆದರೆ ನಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂಬ ರೇಣುಕಾಚಾರ್ಯ ಹೇಳಿಕೆಗೆ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದರು.
ವಿಜಯಪುರ: ಜೆಡಿಎಸ್ (JDS), ಬಿಜೆಪಿ (BJP) ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿರುಗೇಟು ನೀಡಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರು ಸಿಎಂ ಬೊಮ್ಮಾಯಿ ಹಾಗೂ ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷದ ಕೆಲವರು ಹೋಗುವವರು ಹೋಗುತ್ತಾರೆ. ಈ ಜಿಲ್ಲೆಯಲ್ಲೂ ಒಬ್ಬರು ಹೋಗುವುದಕ್ಕೆ ಸಿದ್ಧರಾಗಿದ್ದಾರೆ. ಅವರು ಕೈ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ಗುಸು ಗುಸು, ಪಿಸು ಪಿಸು ಮಾತುಕತೆಯನ್ನ ನಡೆಸಿದ್ದಾರೆ ಅಂತ ಪರೋಕ್ಷವಾಗಿ ನಡಹಳ್ಳಿಗೆ ಟಾಂಗ್ ಕೊಟ್ಟಿದ್ದಾರೆ.
ನಮ್ಮಲ್ಲಿ ಕೆಲವರು ಅಡ್ಜಸ್ಟ್ಮೆಂಟ್ ನಾಯಕರಿದ್ದಾರೆ ಎಂದು ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್, ಡಿಕೆಶಿ, ಸಿದ್ದರಾಮಯ್ಯ, ಹೆಚ್ಡಿಕೆ ಜತೆ ಅಡ್ಜಸ್ಟ್ಮೆಂಟ್ ಇರುವ ಕೆಲ ನಾಯಕರು ಇದ್ದಾರೆ. ಕೆಲ ನಾಯಕರು ಅಂತ್ಯವಾಗಿದ್ದಾರೆ. ಇದೀಗ ಸಲಹೆ ಕೊಡುವ ನಾಯಕರಷ್ಟೇ ಉಳಿದಿದ್ದಾರೆ ಅಂತ ಹೇಳಿದರು.
ಮುಂದುವರಿದು ಮಾತನಾಡಿದ ಯತ್ನಾಳ್, ಶಶಿಕಲಾ ಜೊಲ್ಲೆ ಬಗ್ಗೆ ನಾನು ಎಲ್ಲೂ ಟೀಕೆ ಮಾಡಿಲ್ಲ. ಜೊಲ್ಲೆಯವರಿಗೆ ಈಗ ಹೊಸ ಜಿಲ್ಲೆ ಜವಾಬ್ದಾರಿ ನೀಡಿದ್ದಾರೆ. ಇಷ್ಟು ದಿನ ನಮಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ. ಉಮೇಶ್ ಕತ್ತಿ ನಮ್ಮ ಜಿಲ್ಲೆಯ ಉಸ್ತುವಾರಿ ಆಗಿದ್ದಾರೆ. ಕತ್ತಿ ಉಸ್ತುವಾರಿಯಾಗಿರುವುದು ಸಂತೋಷದ ವಿಚಾರ ಎಂದರು.
ಸಮ್ಮಿಶ್ರ ಸರ್ಕಾರ ಕೆಡವಲು ನಾನು, ಶಾಸಕ ಯತ್ನಾಳ್ ಬಹಳಷ್ಟು ಶ್ರಮಿಸಿದ್ದೇವೆ. ಆದರೆ ನಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂಬ ರೇಣುಕಾಚಾರ್ಯ ಹೇಳಿಕೆಗೆ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದರು. ನಾವು ಏನು ಮಾಡಿದ್ದೇವೆಂದು ಹೇಳಿಕೊಳ್ಳೋದು ಬೇಡ. ಬಿಜೆಪಿ ಅಧಿಕಾರಕ್ಕೆ ಬರಲು ಹಲವರು ಶ್ರಮಿಸಿದ್ದಾರೆ. ಆದರೆ ಅವರು ಅಧಿಕಾರದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಖಾಲಿ ಇರುವ 4 ಸಚಿವ ಸ್ಥಾನ ಭರ್ತಿ ಮಾಡಬೇಕು. ಸಚಿವ ಸ್ಥಾನ ಹಂಚಿಕೆಯಲ್ಲಿ ಕೆಲ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಇದು ಆ ಜಿಲ್ಲೆಗಳ ಜನರಿಗೆ ಮಾಡಿರುವ ಅಪಮಾನ. ನೀವು ಸಿಎಂ ಆಗುವುದಕ್ಕೆ ಶಾಸಕರನ್ನು ಕೊಟ್ಟಿದ್ದಾರೆ. ಕೆಲ ಜಿಲ್ಲೆಗಳಿಂದ ನಾಲ್ಕೈದು ಶಾಸಕರನ್ನು ಕೊಟ್ಟಿದ್ದಾರೆ. ಒಂದೊಂದು ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡಿದರೆ, ಉಳಿದ ಶಾಸಕರಿಗೆ ಅರ್ಹತೆ ಇಲ್ಲವಾ? ಎಂದು ಪ್ರಶ್ನಿಸಿದ ಶಾಸಕ ಯತ್ನಾಳ್, ಸಂಪುಟ ವಿಸ್ತರಣೆ ವೇಳೆ ಜಿಲ್ಲಾವಾರು ಪ್ರಾತಿನಿಧ್ಯ ನೀಡಿ. ನಂತರ ಹಿರಿಯ ನಾಯಕರು, ಬಾಲಂಗೋಚಿಗಳಿಗೆ ನೀಡಿ. ಪಕ್ಷದಲ್ಲೂ ಅನೇಕ ಬದಲಾವಣೆಗಳು ಆಗಬೇಕು. ಹೊಸ ಚೈತನ್ಯದೊಂದಿಗೆ ಯುಗಾದಿಗೆ ಬಿಜೆಪಿ ಸಜ್ಜಾಗಬೇಕು ಎಂದರು.
ಮೂರನೇ ಪೀಠ ಮಾಡಿಸಿದ್ದು ನಿರಾಣಿ: ಪಂಚಮಸಾಲಿ 3ನೇ ಪೀಠ ನಿರಾಣಿ ಮಾಡಿಸಿರುವುದು. ಮೂರನೇ ಪೀಠದಿಂದ ಯಾವುದೇ ಸಮಸ್ಯೆಯಿಲ್ಲ. ಅದರಿಂದ ಸಮಾಜ ಒಡೆಯವುದಿಲ್ಲ. ಸಮಾಜದ ಜನರಿಗೆ ಗೊತ್ತಿದೆ ಯಾವ ಪೀಠ ಎಷ್ಟು ಕೆಲಸ ಮಾಡಿದೆ ಎಂಬುದು. ಸಮಾಜಕ್ಕೆ ಮೀಸಲಾತಿ ಸಿಗಲಿ ಎಂದು ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. ಜನರಿಗೆ ಎಲ್ಲದರ ಬಗ್ಗೆ ಅರಿವಿದೆ. ಜನರೇ ಎಲ್ಲವೂ ತೀರ್ಮಾನ ಮಾಡುತ್ತಾರೆ. ಮೂರು ಅಲ್ಲ ಇನ್ನು ಎಷ್ಟೆ ಪೀಠಗಳು ಬಂದರೂ ಏನು ಆಗೋದಿಲ್ಲ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನೂ ಓದಿ
ಧಾರವಾಡ: ಕೊರೊನಾ ನಂತರ ಖಾಸಗಿ ಶಾಲೆಗಳಲ್ಲಿ ಹಾಜರಾತಿ ಇಳಿಕೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ!
ಧಾರವಾಡ: ಕೊರೊನಾ ನಂತರ ಖಾಸಗಿ ಶಾಲೆಗಳಲ್ಲಿ ಹಾಜರಾತಿ ಇಳಿಕೆ, ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ!
Published On - 4:51 pm, Tue, 25 January 22