ವಿಜಯಪುರ ಮೂಲದ ನವೀನ್ ಹಾವಣ್ಣನವರ ಅಮೆರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆ

| Updated By: ಸಾಧು ಶ್ರೀನಾಥ್​

Updated on: Jan 05, 2024 | 2:53 PM

ಪ್ರಸ್ತುತ, ಪತ್ನಿ ಕ್ಯಾಥರಿನ್ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಾಗಿರುವ ನವೀನ್ ಅವರು ವಿಜಯಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಪಡೆದಿದ್ದರು. ಅದಾದಮೇಲೆ, ಹಾನಸದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಶಿಕ್ಷಣ ಮುಗಿಸಿ, ಕಲಬುರಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು.

ವಿಜಯಪುರ ಮೂಲದ ನವೀನ್ ಹಾವಣ್ಣನವರ ಅಮೆರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆ
ವಿಜಯಪುರ ಮೂಲದ ನವೀನ್ ಹಾವಣ್ಣನವರ ಅಮೆರಿಕಾದಲ್ಲಿ ಕೌನ್ಸಿಲರ್ ಆದರು
Follow us on

ವಿಜಯಪುರ ಮೂಲದ ನವೀನ್ ಹಾವಣ್ಣನವರ (Naveen Havannavar) ಅಮೇರಿಕಾದಲ್ಲಿ (USA) ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ಜಿಲ್ಲೆಯ ಪೀಟ್ಸ್ ಫೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಕೌನ್ಸಿಲರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ (Democratic Party) ನವೀನ್ ಸ್ಪರ್ಧೆ ಮಾಡಿದ್ದರು. ನವೀನ್ ಅವರು ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಎದುರು 33 ಮತಗಳ ಅಂತರಿಂದ ಗೆಲುವು ಕಂಡಿದ್ದಾರೆ. ನಾಲ್ಕು ವರ್ಷಗಳ ಅವಧಿಗೆ ಅವರು ಆಯ್ಕೆಯಾಗಿದ್ದಾರೆ.

ನವೀನ್ ಅವರು ಪೀಟ್ಸ್ ಫೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನವೀನ್ ಹಾವಣ್ಣವರ ಅವರು ಕಳೆದ 14 ವರ್ಷಗಳಿಂದ ಅಮೇರಿಕಾದಲ್ಲಿಯೇ ವಾಸವಾಗಿದ್ದಾರೆ.

ಚುನಾವಣೆಯ ದಿನದ ಕೊನೆಯಲ್ಲಿ ಇಬ್ಬರಿಗೂ ಏಳು ಮತಗಳ ಅಂತರವಿತ್ತು. ಅದರಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕೇಟ್ ಬೊಹ್ನೆ ಮುಂಜಿಂಗರ್ 4,233 ಮತಗಳನ್ನು ಮತ್ತು ಡೆಮಾಕ್ರಟಿಕ್ ಸ್ಪರ್ಧಿ ನವೀನ್ ಹಾವಣ್ಣನವರ 4,266 ಮತಗಳನ್ನು ಪಡೆದಿದ್ದರು. ಬಳಿಕ ಮರುಎಣಿಕೆ ನಡೆಸಲಾಯಿತು. ಅವರೊಂದಿಗೆ ಪಿಟ್ಸ್‌ಫೋರ್ಡ್‌ನಲ್ಲಿ ಟೌನ್ ಬೋರ್ಡ್ ಕೌನ್ಸಿಲರ್ ಸ್ಥಾನಕ್ಕೆ (Town Board seat in Pittsford) ಮರು ಎಣಿಕೆಯೊಂದಿಗೆ ನವೀನ್ ಅವರ ಹೆಸರು ಇತ್ಯರ್ಥವಾಯಿತು.

ಪ್ರಸ್ತುತ, ಪತ್ನಿ ಕ್ಯಾಥರಿನ್ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೇರಿಕಾದಲ್ಲಿ ವಾಸವಾಗಿರುವ ನವೀನ್ ಅವರು ವಿಜಯಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣ ಪಡೆದಿದ್ದರು. ಅದಾದಮೇಲೆ, ಹಾನಸದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಶಿಕ್ಷಣ ಮುಗಿಸಿ, ಕಲಬುರಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 2009-10 ರಲ್ಲಿ ಅಮೇರಿಕಾಕ್ಕೆ ತೆರಳುವ ಮುನ್ನ ನವೀನ್ ಹಾವಣ್ಣನವರ ಅವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದರು. ಮುಂದೆ ಅಮೇರಿಕಾದಲ್ಲಿ ಸಾಫ್ಟ್​​​​ವೇರ್ ಎಂಜಿನಿಯರ್ ಆಗಿ ಉದ್ಯೋಗದಲ್ಲಿ ತೊಡಗಿಸಿಕೊಂಡರು.

ಇದನ್ನೂ ಓದಿ: Barter system – ಆ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ದತಿಯಲ್ಲಿ ತರಕಾರಿ, ಇತರೆ ವಸ್ತುಗಳ ಮಾರಾಟ ನಡೆಯುತ್ತದೆ! ಅರೇ ಇಂಥಾ ಕಾಲದಲ್ಲಿಯೂ…

ಪುತ್ರ ನವೀನ್ ಅವರು ಕೌನ್ಸಿಲರ್ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇದೀಗ ವಿಜಯಪುರದಲ್ಲಿರೋ ನವೀನ್ ಕುಟುಂಬದಲ್ಲಿ ಸಂತಸ ನೂರ್ಮಡಿಸಿದೆ. ತಂದೆ ಪರಪ್ಪ, ತಾಯಿ ರೇಣುಕಾ ಹಾಗೂ ಕುಟುಂಬದವರಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಮುಂದೆ ಉತ್ತರೋತ್ತರ ನವೀನ್ ಅವರು ಅಮೆರಿಕದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಲಿ ಎಂದು ಅವರು ಆಶಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:44 pm, Fri, 5 January 24