AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

No Money: ಆ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ದತಿಯಲ್ಲಿ ತರಕಾರಿ, ಇತರೆ ವಸ್ತುಗಳ ಮಾರಾಟ ನಡೆಯುತ್ತದೆ! ಅರೇ ಇಂಥಾ ಕಾಲದಲ್ಲಿಯೂ…

Barter system: ಆಧುನಿಕತೆಗೂ ಮುಂಚೆ ವಸ್ತುಗಳನ್ನು ಪರಸ್ಪರ ಹೇಗೆ ವಿನಿಮಯ ಮಾಡಿಕೊಂಡು ಜೀವನ ಮಾಡಲಾಗುತ್ತಿತ್ತೋ ಅದೇ ಮಾದರಿಯಲ್ಲಿ ಸಾರವಾಡ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯೋ ಮಾರುಕಟ್ಟೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ. ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆವರೆಗೆ ನಡೆಯೋ ಈ ಸಂತೆಯಲ್ಲಿ ಏನೇ ವಸ್ತುಗಳು ಬೇಕೆಂದರೆ ಅದಕ್ಕೆ ಪ್ರತಿಯಾಗಿ ಜೋಳವನ್ನು ನೀಡಬೇಕು. ಇಲ್ಲಿ ಹಣ ಪ್ರಮುಖ ಪಾತ್ರ ವಹಿಸಿಲ್ಲಾ.

No Money: ಆ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ದತಿಯಲ್ಲಿ ತರಕಾರಿ, ಇತರೆ ವಸ್ತುಗಳ ಮಾರಾಟ ನಡೆಯುತ್ತದೆ! ಅರೇ ಇಂಥಾ ಕಾಲದಲ್ಲಿಯೂ...
ಅಶೋಕ ಯಡಳ್ಳಿ, ವಿಜಯಪುರ
| Edited By: ಸಾಧು ಶ್ರೀನಾಥ್​|

Updated on: Nov 11, 2023 | 4:43 PM

Share

ಅಲೆಮಾರಿಯಾಗಿ ಅಲೆದಾಡುತ್ತಾ ಮನುಷ್ಯ ನಾಗರಿಕ ಸಮಾಜದತ್ತ ಮುಖ ಮಾಡಿದಾಗ ಸಹಬಾಳ್ವೆ ಹಾಗೂ ವಿನಿಮಯ ಪದ್ದತಿ ಮೂಲಕ ಜೀವನ ಮಾಡುತ್ತಿದ್ದ. ನಗನಾಣ್ಯ ನೋಟುಗಳು ಇಲ್ಲದ ಕಾಲದಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದ. ಅವಶ್ಯಕ ವಸ್ತುಗಳನ್ನು ಪಡೆಯಲು ತನ್ನ ಬಳಿಯಿದ್ದ ವಸ್ತುಗಳನ್ನು ನೀಡಿ, ಪಡೆಯುತ್ತಿದ್ದ. ಇಂಥ ಪದ್ದತಿ ಆಧುನಿಕತೆ ಬೆಳೆದಂತೆಲ್ಲಾ ಮಾಯವಾಗಿದೆ. ಹಣವಿದ್ದರೆ ಸಾಕು ಎಲ್ಲವೂ ಸಿಗುತ್ತದೆ ಎಂಬಂತಾಗಿದೆ. ಇಷ್ಟೆಲ್ಲಾ ಆಧುನಿಕತೆ ವೈಜ್ಞಾನಿಕತೆಯ ಮಧ್ಯೆ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದಿಗೂ ವಿನಿಮಯ ಪದ್ದತಿ ಮೂಲಕ ತರಕಾರಿ ಹಾಗೂ ಇತರೆ ವಸ್ತುಗಳು ಮಾರುಕಟ್ಟೆ ನಡೆಯುತ್ತದೆ. ಅರೇ ಇಂಥಾ ಕಾಲದಲ್ಲಿಯೂ ಇದು ಸಾಧ್ಯಾನಾ? ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ. ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಮಾರುಕಟ್ಟೆ… ಮಾರುಕಟ್ಟೆಯಲ್ಲಿ ವಿನಿಮಯ ಪದ್ದತಿ ಇನ್ನೂ ಜೀವಂತ… ನಾಣ್ಯ-ನೋಟುಗಳ ಚಲಾವಣೆಗಿಂತ ಇಲ್ಲಿ ವಿನಿಮಯ ಪದ್ದತಿಯಲ್ಲೇ ತರಕಾರಿ ಹಣ್ಣು ಇತರೆ ವಸ್ತುಗಳು ಖರೀದಿ ಸಾಧ್ಯ… ಜೋಳ ನೀಡಿದರೆ ಸಾಕು ನಿಮಗಿಷ್ಟವಾದುದನ್ನಾ ಖರೀದಿ ಮಾಡಬಹುದು.. ಇಂಥದೊಂದು ವಿಶೇಷ ಮಾರುಕಟ್ಟೆ ಪ್ರತಿ ವಾರ ನಡೆಯುತ್ತಿರೋದು ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ!

ತಲೆತಲೆಮಾರುಗಳಿಂದೂ ಸಾರವಾಡ ಗ್ರಾಮದಲ್ಲಿ ನಡೆಯೋ ವಾರದ ಸಂತೆ ಜೋಳದ ವಿನಿಮಿಯದೊಂದಿಗೆ ಇತರೆ ವಸ್ತುಗಳನ್ನು ತರಕಾರಿ ಹಣ್ಣುಗಳನ್ನು ಕೊಳ್ಳಬಹುದಾಗಿದೆ. ಇಲ್ಲಿ ಹಣದ ಬದಲಾಗಿ ಜೋಳವೇ ಪ್ರಮುಖವಾದುದಾಗಿದೆ. ಆಧುನಿಕತೆಗೂ ಮುಂಚೆ ವಸ್ತುಗಳನ್ನು ಪರಸ್ಪರ ಹೇಗೆ ವಿನಿಮಯ ಮಾಡಿಕೊಂಡು ಜೀವನ ಮಾಡಲಾಗುತ್ತಿತ್ತೋ ಅದೇ ಮಾದರಿಯಲ್ಲಿ ಸಾರವಾಡ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯೋ ಮಾರುಕಟ್ಟೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ. ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆವರೆಗೆ ನಡೆಯೋ ಈ ಸಂತೆಯಲ್ಲಿ ಏನೇ ವಸ್ತುಗಳು ಬೇಕೆಂದರೆ ಅದಕ್ಕೆ ಪ್ರತಿಯಾಗಿ ಜೋಳವನ್ನು ನೀಡಬೇಕು. ಇಲ್ಲಿ ಹಣ ಪ್ರಮುಖ ಪಾತ್ರ ವಹಿಸಿಲ್ಲ. ಇಂಥಹ ವಿಶಿಷ್ಟ ಸಂತೆ ನಡೆಯೋದು ಸಾರವಾಡ ಗ್ರಾಮದಲ್ಲಿ ಮಾತ್ರ ಎಂಬುದೂ ಸಹ ವಿಶೇಷವೇ ಆಗಿದೆ.

ಇಂದಿನ ಕಾಲದಲ್ಲಿ ಹಣವಿಲ್ಲದೇ ಯಾವ ಕೆಲಸ ಕಾರ್ಯಗಳೂ ಸಹ ಆಗಲ್ಲಾ. ಅಂತದ್ದರಲ್ಲಿ ಸಾರವಾಡದ ಸಂತೆಯಲ್ಲಿ ಹಣಕ್ಕಿಂತ ಜೋಳಕ್ಕೆ ಹೆಚ್ಚು ಬೇಡಿಕೆಯಿದೆ. ಸಾರವಾಡ ಗ್ರಾಮದ ಭಾಗದಲ್ಲಿ ಬೆಳೆದ ಜೋಳ ರುಚಿಕರ ಹಾಗೂ ಆರೋಗ್ಯಕರ ಎಂಬ ಮಾತಿದೆ. ಜೊತೆಗೆ ಬರದ ಕಾರಣ ಜೋಳದ ದರವೂ ಏರಿಕೆಯಾಗಿದೆ. ಜೋಳದ ದರ ಏರಿಕೆಯಾಗದ ಆ ಕಾಲದಲ್ಲೂ ಇಲ್ಲಿನ ಸಂತೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ.

Also Read: ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?

ಒಂದೊಂದು ತರಕಾರಿಗೂ ಇಂತಿಷ್ಟು ಜೋಳ ಎಂದು ವ್ಯವಹಾರ ಮಾಡಿ ಕೊಡು ಕೊಳ್ಳುವಿಕೆ ನಡೆಯುತ್ತಿದೆ. ಹಣ್ಣಿರಲಿ ತರಕಾರಿ ಇರಲಿ ಅಥವಾ ಇತರೆ ಯಾವುದೇ ವಸ್ತುವಿರಲಿ ಅದಕ್ಕೆ ಇಂತಿಷ್ಟು ಜೋಳವೆಂದು ತೀರ್ಮಾನ ಮಾಡಿ ಜೋಳ ನೀಡುವ ಮೂಲಕ ಕೊಳ್ಳುವಿಕೆ ಮಾಡುತ್ತಾರೆ. ಸಮಪಾಲು, ಎರಡು ಪಟ್ಟು ಪಾಲು, ಎರಡು ಪಟ್ಟು ಪಾಲು ಜೋಳ ನೀಡಲಾಗುತ್ತದೆ. ತೂಕದ ಜೊತೆಗೆ ಅಳತೆಯ ಮೇಲೂ ಇಲ್ಲಿ ಜೋಳ ವಿನಿಮಯವಾಗುತ್ತದೆ.

ಸಾರವಾಡದ ಸಂತೆಗೆ ಜೋಳವನ್ನು ಸಂಗ್ರಹಿಸಲು ವಿವಿಧ ಗ್ರಾಮಗಳ ಜನರು ಸಹ ತರಕಾರಿ ಹಣ್ಣುಗಳು ಸೇರಿದಂತೆ ಇತರೆ ವಸ್ತುಗಳನ್ನು ತಂದು ವಿನಿಮಯ ಮದ್ದತಿಯ ಮೂಲಕ ಮಾರಾಟ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಹೇಗೆ ವಿನಿಮಯ ಪದ್ದತಿ ಮೂಲಕ ವ್ಯಾಪಾರ ವಹಿವಾಟು ನಡೆಯುತ್ತಿತ್ತೋ ಹಾಗೇ ನಮ್ಮೂರಿನ ಸಂತೆಯೂ ನಡೆಯುತ್ತದೆ ಎಂದು ಗ್ರಾಮದ ಜನರು ಹೆಮ್ಮೆ ಪಡುತ್ತಾರೆ.

Also read: ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ! ಏನಿದರ ವಿಶೇಷ?

ವಿಜಯಪುರ ಜಿಲ್ಲೆಯಲ್ಲಿ ಸಾರಾವಾಡದ ಸಂತೆಯನ್ನು ಜೋಳದ ಸಂತೆಯೆಂದು, ವಿನಿಮಯ ಪದ್ದತಿಯ ಸಂತೆಯೆಂದು ಕರೆಯುತ್ತಾರೆ. ಎಷ್ಟೇ ಆಧುನಿಕತೆ ಬೆಳೆದರೂ ಸಹ ಹಿಂದಿನ ಪದ್ದತಿಯನ್ನು ಇಲ್ಲಿ ಉಳಿಸಿಕೊಂಡು ಬರಲಾಗಿದೆ. ಗ್ರಾಮದ ಜನರಷ್ಟೇಯಲ್ಲಾ ಸುತ್ತಮುತ್ತಲ ಗ್ರಾಮಗಳ ಜನರೂ ಸಹ ಇದೇ ಪದ್ದತಿಯಲ್ಲಿ ಈ ಮಾರುಕಟ್ಟೆಯಲ್ಲಿ ಭಾಗಿಯಾಗುತ್ತಾರೆ. ತೀರಾ ಅನಿವಾರ್ಯವೆಂಬಂತೆ ರೈತರಲ್ಲದವರು, ನೌಕರರು ಜೋಳದ ಬದಲಾಗಿ ಹಣಕಾಸಿನ ಮೂಲಕ ವ್ಯವಹಾರ ಮಾಡುತ್ತಾರೆ. ಆದರೆ ಅದುನ ತೀರಾ ಕಡಿಮೆ ಪ್ರಮಾಣದಲ್ಲಿ ನಡೆಯುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ