ರಾಜಕಾರಣದಲ್ಲಿ ಹೊಸ ತಿರುವು ಉಂಟಾದಿತು: 2023ರ ಕಾಲಜ್ಞಾನ ಭವಿಷ್ಯ ನುಡಿದ ಸದಾಶಿವ ಮಠದ ಸಿದ್ದರಾಮಯ್ಯ ಮುತ್ಯಾ

|

Updated on: Feb 22, 2023 | 7:10 PM

ರಾಜಕಾರಣದಲ್ಲಿ ಹೊಸ ತಿರುವು ಉಂಟಾದಿತು ಮಕ್ಕಳ್ಯಾರ್ಯಾ. ಪ್ರಜೆಗಳಲ್ಲಿ ಏರುಪೇರು ಆಗುತ್ತೆ. ಆದರೂ ಆಳುವ ಪ್ರಭುಗಳಿಗೆ ಸುಭಿಕ್ಷೆ ಇದೆ ಎಂದು ರಾಜಕೀಯ ಬಗ್ಗೆ ಸಿದ್ದರಾಮಯ್ಯ ಮುತ್ಯಾ ಭವಿಷ್ಯ ನುಡಿದಿದ್ದಾರೆ.

ರಾಜಕಾರಣದಲ್ಲಿ ಹೊಸ ತಿರುವು ಉಂಟಾದಿತು: 2023ರ ಕಾಲಜ್ಞಾನ ಭವಿಷ್ಯ ನುಡಿದ ಸದಾಶಿವ ಮಠದ ಸಿದ್ದರಾಮಯ್ಯ ಮುತ್ಯಾ
ಸಿದ್ದರಾಮಯ್ಯ ಮುತ್ಯಾ
Follow us on

ವಿಜಯಪುರ: ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮಠದ ಸಿದ್ದರಾಮಯ್ಯ ಮುತ್ಯಾ ಅವರು 2023ರ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ ಮೂಲೆಗಳಲ್ಲಿ ಭೂಮಿ ಕುಪ್ಪಳಿಸಿತ್ತೋ ಮಕ್ಕಳ್ಯಾರ್ಯಾ ಎಂದು ಹೇಳುವ ಮೂಲಕ ಮತ್ತೆ ಭೂಕಂಪದ ಭವಿಷ್ಯ ನುಡಿದಿರುವ ಸಿದ್ದರಾಮಯ್ಯ ಮುತ್ಯಾ, ರಾಜಕಾರಣದಲ್ಲಿ ಹೊಸ ತಿರುವು ಉಂಟಾದಿತು ಮಕ್ಕಳ್ಯಾರ್ಯಾ. ಪ್ರಜೆಗಳಲ್ಲಿ ಏರುಪೇರು ಆಗುತ್ತೆ. ಆದರೂ ಆಳುವ ಪ್ರಭುಗಳಿಗೆ ಸುಭಿಕ್ಷೆ ಇದೆ ಎಂದು ರಾಜಕೀಯ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್’; ಗೊರವಯ್ಯ ನುಡಿದ ಮೈಲಾರಲಿಂಗೇಶ್ವರನ ಕಾರ್ಣಿಕ ವಾಣಿ ಅರ್ಥವೇನು? ಇಲ್ಲಿದೆ ವಿಶ್ಲೇಷಣೆ

ಸಜ್ಜನರು ಕೂಡ ದುರ್ಜನರು ಆಗುತ್ತಾರೆ. ಹಿಂಗಾರಿ-ಮುಂಗಾರಿ ಮಳೆಗಳು ಉತ್ತಮವಾಗಿ ಆಗಲಿವೆ. ನಮ್ಮ ನಮ್ಮಲ್ಲಿ ಜಗಳ, ಹೊಡೆದಾಟ ನಡೆಯುತ್ತೇವೆ. ರಾಜ್ಯದಲ್ಲಿ ಕೊಲೆ, ಸುಲಿಗೆ ಹಾಗೂ ದರೋಡೆ ಪ್ರಕರಣ ಹೆಚ್ಚಾಗಲಿವೆ. ವೈಶಾಖ-ಜೇಷ್ಠ ಮಾಸದಲ್ಲಿ ಸುಖ ಹಾಗೂ ಶಾಂತಿ ಸಿಗಲಿದೆ ಎಂದು 2023ರ ಕಾಲಜ್ಞಾನ ಭವಿಷ್ಯದಲ್ಲಿ ಹೇಳಿದ್ದಾರೆ.

ರಾಮಲಿಂಗೇಶ್ವರ ಸ್ವಾಮೀಜಿ ಭವಿಷ್ಯ

ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು‌ ಉದುರ್ಯಾವೋ. ಅಂತರಂಗದ ಹಕ್ಕಿ ಹಾರಿತೋ ಎಂದು ರಾಮಲಿಂಗೇಶ್ವರ ಸ್ವಾಮೀಜಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ- ಕೆಂಗಾಪುರ ರಾಮಲಿಂಗೇಶ್ವರ ಕ್ಷೇತ್ರದ ಮುಳ್ಳುಗದ್ದಿಗೆ ಉತ್ಸವದಲ್ಲಿ ಕಾರ್ಣಿಕ ನುಡಿ ನುಡಿದಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಏಕೆಂದರೆ ಈ ಕಾರ್ಣಿಕ ನುಡಿಯ ವಿಶ್ಲೇಷಣೆ ಪ್ರಕಾರ ಬರುವ ಕಾಲದಲ್ಲಿ ಇನ್ನಷ್ಟು ಆಪತ್ತುಗಳು ಬರಲಿವೆ ಎಂದು ಹೇಳಲಾಗಿದ್ದು ಇದುವರೆಗೂ ಹರನಹಳ್ಳಿ-ಕೆಂಗಾಪುರ ರಾಮಲಿಂಗೇಶ್ವರದ ಮುಳ್ಳುಗದ್ದಿಗೆ ಉತ್ಸವದಲ್ಲಿ ಹೇಳಲಾದ ಕಾರ್ಣಿಕ ಸುಳ್ಳಾಗಿಲ್ಲ ಎಂಬುವುದು ಭಕ್ತರ ನಂಬಿಕೆಯಾಗಿದೆ.

ಕೋಡಿಮಠದ ಶ್ರೀ ಭವಿಷ್ಯ ವಾಣಿ

ಇನ್ನು ಕೋಡಿಮಠದ ಶ್ರೀ ಜನವರಿಯಲ್ಲಿ ಭವಿಷ್ಯ (Prediction) ನುಡಿದಿದ್ದು, ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದಿದ್ದಾರೆ. ಇದೇ ವರ್ಷ 2023ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಮಸ್ಯೆ ಎದುರಾಗಲಿದೆ. ಸಾಧು ಸಂತರಿಗೆ ಸಮಸ್ಯೆಯಾಗೋದಿದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ ಎಂದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ‌ ಸಂಯುಕ್ತ ಅವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದ ಬಳಿಕ ಶ್ರೀಗಳು (Kodi Mutt Seer) ಈ ಹೇಳಿಕೆ ನೀಡಿದ್ದರು.

ಇನ್ನು ರಾಜಕೀಯವಾಗಿಯೂ ಮಾತನಾಡಿರುವ ಕೋಡಿ ಶ್ರೀ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ (Karnataka Assembly Elections 2023). ಸಮ್ಮಿಶ್ರ ಸರ್ಕಾರ ಅಧಿಕಾರ‌ ಮಾಡಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ ಎಂದು ಭವಿಷ್ಯ ನುಡಿದಿದ್ದರು.

‘ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್’

ಹೂವಿನಹಡಗಲಿ ತಾಲೂಕಿನ ಮೈಲಾರದ ಡಂಕನಮರಡಿ ಕಾರ್ಣಿಕೋತ್ಸವದಲ್ಲಿ (Mylara lingeshwara karnika 2023) ‘ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್’ಎಂದು ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಪ್ರಾಮಾಣಿಕವಾಗಿ,ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂದು ವಿಶ್ಲೇಷಣೆ ಮಾಡಲಾಗಿದ್ದು, ಇದನ್ನು ನೋಡಿದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಸಿಎಂ ಪಟ್ಟ ಒಲಿಯಲಿದೆ ಎನ್ನಬಹುದು. ಹಾಗಾದ್ರೆ, ಈ ಮೂರು ಪಕ್ಷದಲ್ಲಿ ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿ ಯಾರು? ಎನ್ನುವುದೇ ಕುತೂಹಲ ಮೂಡಿಸಿದೆ. ಹೀಗೆ ರಾಜಕೀಯ ಪಕ್ಷಗಳಲ್ಲಿ ಮೈಲಾರಲಿಂಗನ ಕಾರ್ಣಿಕ ನುಡಿ ತೀವ್ರ ಕುತೂಹಲ ಹಾಗೂ ಚರ್ಚೆ ಹುಟ್ಟು ಹಾಕಿದೆ ಎಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗಿದೆ.

Published On - 7:09 pm, Wed, 22 February 23