ವಿಜಯಪುರದಲ್ಲಿ ಸಂಭ್ರಮ ಮನೆ ಮಾಡಿದ ಸಿದ್ದೇಶ್ವರ ದೇವಸ್ಥಾನದ ಜಾತ್ರೆ: ಸರಳ ಆಚರಣೆಗೆ ಕರೆ ನೀಡಿದ್ದರೂ ಹರಿದು ಬಂದ ಭಕ್ತ ಸಾಗರ 

ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ಸಂಭಮ ಮನೆ ಮಾಡಿದೆ. ಅದ್ದೂರಿಗೆ ಸಾಕ್ಷಿಯಾಗಬೇಕಿದ್ದ ಜಾತ್ರೆ ಈ ಬಾರಿಯೂ ಸಹ ಸರಳ ಹಾಗೂ ಸಾಂಕೇತಿಕತೆಗೆ ಒಳಗಾಗಿದೆ.

ವಿಜಯಪುರದಲ್ಲಿ ಸಂಭ್ರಮ ಮನೆ ಮಾಡಿದ ಸಿದ್ದೇಶ್ವರ ದೇವಸ್ಥಾನದ ಜಾತ್ರೆ: ಸರಳ ಆಚರಣೆಗೆ ಕರೆ ನೀಡಿದ್ದರೂ ಹರಿದು ಬಂದ ಭಕ್ತ ಸಾಗರ 
ಸಿದ್ದೇಶ್ವರ ದೇವಸ್ಥಾನದ ಜಾತ್ರೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 14, 2023 | 6:43 PM

ವಿಜಯಪುರ: ಪ್ರತಿ ವರ್ಷ ಸಂಕ್ರಾಂತಿಯಲ್ಲಿ ಎಂಟು ದಿನಗಳ ಕಾಲ ನಡೆಯೋ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆಗೆ (Sri Siddheshwara Temple Fair) ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದರು. ಮಹಾಮಾರಿ ಕೊರೊನಾ ವೈರಸ್ ಅದ್ದೂರಿ ಜಾತ್ರೆಗೆ ಅಡ್ಡಿಯಾಗಿತ್ತು. ಈ ಬಾರಿ ಕೊರೊನಾ ಕಾಟವಿಲ್ಲಾ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ಮಾಡಲು ಜಾತ್ರಾ ಕಮೀಟಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಈ ಬಾರಿಯೂ ಸರಳ ಜಾತ್ರೆ ಮಾಡಲಾಗುತ್ತಿದೆ. ಸರಳ ಜಾತ್ರೆ ಆಚರಣೆಗೆ ಕರೆ ಕೊಟ್ಟರೂ ಸಹ ಸಾವಿರಾರು ಭಕ್ತರು ಇಂದು(ಜ. 14) ನಡೆದ ಬೋಗಿ ಉತ್ಸವದಲ್ಲಿ ಭಾಗಿಯಾಗಿದ್ದರು.

ಜಿಲ್ಲೆಯಲ್ಲಿ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ಸಂಭಮ

ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ಸಂಭಮ ಮನೆ ಮಾಡಿದೆ. ಅದ್ದೂರಿಗೆ ಸಾಕ್ಷಿಯಾಗಬೇಕಿದ್ದ ಜಾತ್ರೆ ಈ ಬಾರಿಯೂ ಸಹ ಸರಳ ಹಾಗೂ ಸಾಂಕೇತಿಕತೆಗೆ ಒಳಗಾಗಿದೆ. ಕಾರಣ ಕಳೆದ ಜ 2 ರಂದು ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದು. ಹಾಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಪದ್ದತಿಗಳ ಆಚರಣೆ ಮೂಲಕ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಇಂದು ಜಾತ್ರೆಯ ಪ್ರಮುಖ ಘಟ್ಟವಾದ ವಿಶೇಷ ಪೂಜೆ ಪುನಸ್ಕಾರ ಮಹಾಮಂಗಳಾರತಿ ಹಾಗೂ ಬೋಗಿ ಕಾರ್ಯಕ್ರಮ ಮಾಡಲಾಯಿತು.

ಇದನ್ನೂ ಓದಿ: Siddeshwara Swamiji: ಕೃಷ್ಣ, ಮಲಪ್ರಭಾ ಹಾಗೂ ಘಟಪ್ರಭಾ ಮಡಿಲಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲೀನ

ಹರಿದು ಬಂದ ಸಾವಿರಾರು ಭಕ್ತರು  

ಸರಳ ಜಾತ್ರೆಗೆ ಕರೆ ಕೊಟ್ಟರೂ ಸಹ ಸಾವಿರಾರು ಭಕ್ತರು ನೆರೆದಿದ್ದರು. ಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್​ ಪತ್ನಿ ಶೈಲಜಾ ಯತ್ನಾಳ್​ ಹಾಗೂ ಇತರೆ ಮುಖಂಡರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಜ್ಜಿ ರೊಟ್ಟಿ ವಿವಿಧ ಕಾಳುಗಳ ಪಲ್ಯ, ಹುಗ್ಗಿ, ಅಣ್ಣ ಸೇರಿದಂತೆ ಇತರೆ ಪದಾರ್ಥಗಳ ನೈವೈಧ್ಯವನ್ನು ಸಮರ್ಪನೆ ಮಾಡಲಾಯಿತು. ಬಳಿಕ ವಿಶೇಷವಾಗಿ ಅಲಂಕಾರ ಮಾಡಿದ ನಂದಿಕೋಲುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಐತಿಹ್ಯ ಹೊಂದಿರುವ ಸಿದ್ದೇಶ್ವರ ಜಾತ್ರೆ

ಸೊಲ್ಲಾಪುರದ ಸಿದ್ದೇಶ್ವರ ದೇವರ ಪ್ರತೀಕವಾಗಿ ಶತಮಾನದ ಐತಿಹ್ಯವನ್ನು ಹೊಂದಿರುವ ಸಿದ್ದೇಶ್ವರ ಜಾತ್ರೆ ನೂರಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸಿದ್ದೇಶ್ವರ ದೇವರು ಯೋಗ ದಂಡದೊಂದಿಗೆ ಮದುವೆಯಾದ ಐತಿಹ್ಯವಿರೋ ಕಾರಣ ಅಕ್ಷತಾ ದಿವಸವೇ ಯೋಗದಂಡದೊಂದಿಗೆ ಮದುವೆ ಮಾಡುವ ಶಾಸ್ತ್ರವೇ ಅಕ್ಷತಾ ಕಾರ್ಯಕ್ರಮ. ಇಲ್ಲಿ ಬಾಸಿಂಗವನ್ನು ತಂದು ಅಕ್ಷತಾ ಕಾರ್ಯದಲ್ಲಿ ಇಟ್ಟು ನಂದಿಕೋಲುಗಳಳಿಗೆ ಸ್ಪರ್ಶ ಮಾಡಿಸಿಕೊಂಡು ಹೋದರೆ ಮದುವೆಯಾಗುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: Siddeshwar Swamiji: ಜ.8 ರಂದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ, ಎಲ್ಲೆಲ್ಲಿ…?

ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್

ನಾಳೆ(ಜ.15) ಸಾಂಪ್ರದಾಯಿಕವಾಗಿ ನಂದಿಕೋಲುಗಳ ಮೆರವಣಿಗೆ ಹಾಗೂ ಇತರೆ ಕಾರ್ಯಕ್ರಮ ನಡೆಯಲಿವೆ. ಆದರೆ ಮದ್ದು ಸುಡುವ ಕಾರ್ಯಕ್ರಮ ಸೇರಿದಂತೆ ಇತರೆ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಸರಳ ಜಾತ್ರೆ ಆಚರಣೆ ಮಾಡಲಾಗುತ್ತಿದೆ. ಜಾತ್ರೆಗೆ ಆಗಮಿಸುವ ಎಲ್ಲಾ ಭಕ್ತರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸಿದ್ದೇಶ್ವರ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ