ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯೊಂದಿಗೆ ಮಾತನಾಡುತ್ತ ಚಿನ್ನದ ಸರ ಕದ್ದು ಪರಾರಿ

ಜುಲೈ 30ರಂದು ವಿಜಯಪುರದ ಕಾಳಿಕಾನಗರದ ಪಾಟೀಲ್ ಕ್ಲಿನಿಕ್​ನಲ್ಲಿ ರೋಗಿ ನೆಪದಲ್ಲಿ ಆಸ್ಪತ್ರೆಗೆ ಬಂದು ವೈದ್ಯೆಯ 11 ಗ್ರಾಂ ಚಿನ್ನದ ಮಾಂಗಲ್ಯ ಸರ ಎಗರಿಸಿ ಖದೀಮರು ಪರಾರಿಯಾಗಿರುವಂತಹ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯೊಂದಿಗೆ ಮಾತನಾಡುತ್ತ ಚಿನ್ನದ ಸರ ಕದ್ದು ಪರಾರಿ
ಹಲ್ಲು ನೋವೆಂದು ಆಸ್ಪತ್ರೆಗೆ ಬಂದ ಕಳ್ಳರು: ವೈದ್ಯೆಯೊಂದಿಗೆ ಮಾತನಾಡುತ್ತ ಚಿನ್ನದ ಸರ ಕದ್ದು ಪರಾರಿ
Edited By:

Updated on: Aug 02, 2024 | 10:23 PM

ವಿಜಯಪುರ, ಆಗಸ್ಟ್​ 2: ರೋಗಿ ವೇಶದಲ್ಲಿ ಆಸ್ಪತ್ರೆಗೆ ತೆರಳಿ ವೈದ್ಯೆಯ (doctor) ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಹೊಂಡು ಖದೀಮರು (Thieves) ಪರಾರಿ ಆಗಿರುವಂತಹ ಘಟನೆ ಕಳೆದ ಜುಲೈ 30 ರಂದು ಕಾಳಿಕಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಪತ್ತೆಗೆ ಬಲೆ ಬಿಸಿದ್ದಾರೆ.

ಜುಲೈ 30 ರಂದು ಇಬ್ಬರು ಖದೀಮರು ಬೈಕ್ ಮೇಲೆ ಆಸ್ಪತ್ರೆಯ ಬಳಿ ಬಂದಿದ್ದು, ಇಬ್ಬರ ಪೈಕಿ ಓರ್ವನು ಆಸ್ಪತ್ರೆಯೊಳಗೆ ಹೋದರೆ ಮತ್ತೋರ್ವ ಬೈಕ್ ಮೇಲೆ ಕಾಯುತ್ತಾ ನಿಂತಿದ್ದ. ಹಲ್ಲು ನೋವು ಎಂದು ರೋಗಿಯ ಸೋಗಿನಲ್ಲಿ ಖದೀಮ ಎಂಟ್ರಿ ಕೊಟ್ಟಿದ್ದು, ಇಂಗ್ಲಿಷ್​​ನಲ್ಲಿ ಮಾತನಾಡುತ್ತ ಪಾಟೀಲ್ ಕ್ಲಿನಿಕ್ ವೈದ್ಯೆ ಡಾ.ಸರೋಜಿನಿ ಪಾಟೀಲ್ ಎಂಬುವರ 11 ಗ್ರಾಂ ಚಿನ್ನದ ಸರ ಕಸಿದು ಎಸ್ಕೇಪ್ ಆಗಿದ್ದಾನೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ; ಕಾರಣವೇನು ಗೊತ್ತಾ?

ವೈದ್ಯೆಯ ಸರ ಕಿತ್ತುಕೊಂಡು ಓಡಿದ ಓರ್ವ ಕಳ್ಳತನನ್ನು ಮತ್ತೋರ್ವ ಆತನನ್ನು ಬೈಕ್​ನಲ್ಲಿ ಪಿಕ್​ಅಪ್ ಮಾಡಿಕೊಂಡು ಪರಾರಿ ಆಗಿದ್ದಾರೆ. ವೈದ್ಯೆ ಸರೋಜಿನಿ ಕೂಗುತ್ತಾ ಹೊರಗಡೆ ಬರುವಷ್ಟರಲ್ಲಿ ಇಬ್ಬರು ಪರಾರಿ ಆಗಿದ್ದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ಆಟೋ ಕದ್ದೊಯ್ದ ಕಳ್ಳರು

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪ್ರಗತಿನಗರ 7ನೇ ಕ್ರಾಸ್ ನಿವಾಸಿ ಪುಟ್ಟರಾಜು ಎಂಬುವವರು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಆಟೋ ಬೆಳಗಾಗುವುದರೊಳಗೆ ಮಾಯವಾಗಿತ್ತು. ಸಮೀಪದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ ನಡೆಸಿದಾಗ ಕಳ್ಳರ ಕೈಚಳಕ ಪತ್ತೆಯಾಗಿತ್ತು.

ಇದನ್ನೂ ಓದಿ: ಗಂಡನ ಮೇಲಿನ ಸಿಟ್ಟಿಗೆ ಸ್ನೇಹಿತನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ

ಬಾಡಿಗೆಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೆ. ಇದೀಗ ಜೀವನಕ್ಕೆ ಆಧಾರವಾಗಿದ್ದ ಆಟೋ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪೊಲೀಸರ ಆದಷ್ಟು ಬೇಗ ಹುಡುಕಿ ಕೊಟ್ಟರೆ ಜೀವನಕ್ಕೆ ನೆರವಾಗುತ್ತದೆ ಎಂದು ಆಟೋ ಕಳೆದುಕೊಂಡ ಪುಟ್ಟರಾಜು ತನ್ನ ಅಳಲು ತೋಡಿಕೊಂಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:18 pm, Fri, 2 August 24

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us