Hindu-Muslim Jatre: ಮೂರು ದಿನ ನಡೆಯೋ ಉರುಸ್ ಆಚರಣೆಯನ್ನು ಇಲ್ಲಿ ಹಿಂದೂಗಳ ಹಬ್ಬವೆಂದು ಕರೆಯುತ್ತಾರೆ! ಸಹಬಾಳ್ವೆ ಅಂದ್ರೆ ಇದೇ ಅಲ್ಲವಾ?

ಮೂರು ದಿನಗಳ ಕಾಲ ನಡೆಯೋ ಉರುಸ್ ಆಚರಣೆಯ ವಿಧಿ ವಿಧಾನಗಳನ್ನು, ಸಾಂಪ್ರದಾಯಿಕ ಆಚರಣೆಗಳನ್ನು ಹಿಂದೂ ಸಮುದಾಯದ ಜನರು ಮಾಡುತ್ತಾರೆ. 900 ಕ್ಕೂ ಆಧಿಕ ವರ್ಷಗಳಿಂದ ನಡೆದುಕೊಂಡು ಬಂದಿರೋ ಇಲ್ಲಿನ ಉರುಸ್ ಕಾರ್ಯಕ್ಕೆ ಯಾವುದೇ ಜಾತಿ ಬೇಧಭಾವವಿಲ್ಲಾ.

Hindu-Muslim Jatre: ಮೂರು ದಿನ ನಡೆಯೋ ಉರುಸ್ ಆಚರಣೆಯನ್ನು ಇಲ್ಲಿ ಹಿಂದೂಗಳ ಹಬ್ಬವೆಂದು ಕರೆಯುತ್ತಾರೆ! ಸಹಬಾಳ್ವೆ ಅಂದ್ರೆ ಇದೇ ಅಲ್ಲವಾ?
ಸಹಬಾಳ್ವೆ ಅಂದ್ರೆ ಇದೇ ಅಲ್ಲವಾ?
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಸಾಧು ಶ್ರೀನಾಥ್​

Updated on: Jul 11, 2023 | 2:44 PM

ಕೋಮುಸೌಹಾರ್ಧತೆಗೆ ಧಕ್ಕೆ ತರೋ ಘಟನೆಗಳು ದಿನ ಬೆಳಗಾದರೆ ಸಾಕು ಒಂದಿಲ್ಲಾ ಒಂದೆಡೆ ನಡೆಯುತ್ತವೆ. ಅದರಲ್ಲೂ ಹಿಂದೂ ಮುಸ್ಲಿಂ ಹೆಸರಿನಲ್ಲಿ ಸಂಘರ್ಷ ನಡೆಯುತ್ತಿರುವುದನ್ನು ಈಗೀಗ ನಾವೆಲ್ಲಾ ಹೆಚ್ಚಾಗಿ ಕೇಳಿದ್ದೇವೆ, ನೋಡಿದ್ದೇವೆ. ಸಮಾಜದಲ್ಲಿ ಸಹಬಾಳ್ವೆ ಎಂಬುದು ಕುಸಿಯುತ್ತಾ ಹೋಗುತ್ತಿದೆ. ಅಂತಹದ್ದರಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆಯೋ ಹಾಜಿ ಮಸ್ತಾನ್ ಹಾಗೂ ಬಡಕಲ್ ಸಾಬ್ ಉರುಸ್ ಕಾರ್ಯಕ್ರಮ (Urus celebration) ಭಾವೈಕ್ಯತೆಯನ್ನು (coexistence) ನಿರಂತರವಾಗಿ ಬೆಸೆಯೋ ಕೆಲಸ ಮಾಡುತ್ತಿದೆ. ಒಂದಲ್ಲಾ ಎರಡಲ್ಲಾ ನೂರಾರು ವರ್ಷಗಳಿಂದ ಇಲ್ಲಿ ನಡೆಯೋ ಉರುಸ್ ಕೇವಲ ಮುಸ್ಲಿಂ ಸಮುದಾಯದ ಜನರ ಆಚರಣೆಯಾಗದೇ ಅದು ಹಿಂದೂಗಳ ಆರಾಧನೆಯ ಮೂಲವಾಗಿದೆ. ಇದನ್ನು ಹಿಂದೂಗಳ ಉರುಸ್ ಎಂದೂ ಕರೆಯುತ್ತಾರೆ. ಭಾವೈಕ್ಯತೆಯ ಉರುಸ್ ಕುರಿತ ವರದಿ ಇಲ್ಲಿದೆ ನೋಡಿ. ವಿಜಯಪುರ ಜಿಲ್ಲೆಯಲ್ಲಿ ಅದ್ದೂರಿ ಉರುಸ್…. ಹಾಜಿ ಮಸ್ತಾನ್ ಹಾಗೂ ಬಡಕಲ್ ಸಾಬ್ ಉರುಸ್ ಸಡಗರ…. ಹಿಂದೂ ಸಮುದಾಯದವರ ನೇತೃತ್ವದಲ್ಲಿ ನಡೆಯೋ ಉರುಸ್ ಕಾರ್ಯಗಳು….ಹಿಂದೂ ಮುಸ್ಲೀಂ ಬೇಧಭಾವವಿಲ್ಲದೇ ನಡೆಯೋ ಧಾರ್ಮಿಕ ಕಾರ್ಯಕ್ರಮ… ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿ (Thikota in Vijayapur) ಸಡಗರ ಮನೆ ಮಾಡಿದೆ. ಪ್ರತಿ ವರ್ಷದಂತೆ ನಡೆಯೋ ಹಾಜಿ ಮಸ್ತಾನ್ ಹಾಗು ಬಡಕಲ್ ಸಾಬ್ ಅವರ ಉರುಸ್ ಕಾರ್ಯಕ್ರಮ ಈ ಸಡಗರಕ್ಕೆ ಕಾರಣವಾಗಿದೆ.

ಹಾಜಿ ಮಸ್ತಾಬ್ ಹಾಗೂ ಬಡಕಲ್ ಸಾಬ್ ಉರುಸ್ ಆಚರಣೆಯನ್ನು ಹಿಂದೂಗಳ ಹಬ್ಬವೆಂದು ಇಲ್ಲಿ ಕರೆಯುತ್ತಾರೆ. ಕಾರಣ ಮೂರು ದಿನಗಳ ಕಾಲ ನಡೆಯೋ ಉರುಸ್ ಆಚರಣೆಯ ವಿಧಿ ವಿಧಾನಗಳನ್ನು, ಸಾಂಪ್ರದಾಯಿಕ ಆಚರಣೆಗಳನ್ನು ಹಿಂದೂ ಸಮುದಾಯದ ಜನರು ಮಾಡುತ್ತಾರೆ. 900 ಕ್ಕೂ ಆಧಿಕ ವರ್ಷಗಳಿಂದ ನಡೆದುಕೊಂಡು ಬಂದಿರೋ ಇಲ್ಲಿನ ಉರುಸ್ ಕಾರ್ಯಕ್ಕೆ ಯಾವುದೇ ಜಾತಿ ಬೇಧಭಾವವಿಲ್ಲಾ.

ಎಲ್ಲಾ ಕೋಮಿನವರೂ ಖುಷಿ ಖುಷಿಯಿಂದಲೇ ಉರುಸ್ ಆಚರಣೆ ಮಾಡುತ್ತಾರೆ. ಬಡಕಲ್ ಸಾಬ್ ಹಾಗೂ ಹಾಜಿ ಮಸ್ತಾನ್ ಉರುಸ್ ಗೆ ಬ್ರಾಹ್ಮಣ ಸಮುದಾಯದ ದೇಸಾಯಿ ಮನೆತನದವರಿಂದ ಸಂದಲ್ ಅಂದರೆ ಗಂಧ ಹಾಗೂ ಲಿಂಗಾಯತ ಸಮುದಾಯದ ಪಾಟೀಲರ ಮನೆತನದಿಂದ ಗಲೀಫ್ ಅಂದರೆ ಗದ್ದುಗೆಗೆ ಹಾಕುವ ಬಟ್ಟೆ ಬರುತ್ತವೆ. ಈ ಆಚರಣೆಯ ಮೂಲಕ ಉರುಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದಂತಾಗುತ್ತದೆ. ಹಿಂದೂ ಮುಸ್ಲೀಂ ಸಮುದಾಯದ ಜನರು ಉರುಸ್ ಗೆ ಸಾಕ್ಷಿಯಾಗುತ್ತಾರೆ. ಹಾಗೆ ನೋಡಿದರೆ ಹಿಂದೂ ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ.

ಪ್ರತಿ ವರ್ಷ ನಡೆಯೋ ಉರುಸ್ ಗೆ ಹಿಂದೂ ಸಮುದಾಯದ ಜನರು ಉರುಸ್ ನಡೆಯೋ 20 ದಿನಗಳ ಮುಂಚೆ ಉಪವಾಸ ವ್ರತಾಚರಣೆ ಮಾಡುತ್ತಾರೆ. ಮುಸ್ಲಿಂ ಸಮುದಾಯದವರು ರಂಜಾನ್ ಮಾಸದಲ್ಲಿ ಯಾವ ರೀತಿ ಕಟ್ಟುನಿಟ್ಟಿನ ಉಪವಾಸ ವ್ರತಾಚರಣೆ ಮಾಡುತ್ತಾರೋ ಅದೇ ಮಾದರಿಯಲ್ಲಿ ಹಿಂದೂ ಸಮುದಾಯದ ಜನರು ಉರುಸ್ ಆರಂಭಕ್ಕೂ ಮುನ್ನ 20 ದಿನಗಳಿಂದ ಉಪವಾಸ ವ್ರತ ಮಾಡುತ್ತಾರೆ. ಉರುಸ್ ಆರಂಭವಾಗತ್ತಿದ್ದಂತೆ ಹಿಂದೂ ಸಮುದಾಯದ ಜನರು ವಿವಿಧ ಭಕ್ಷ್ಯ ಭೋಜನಗಳ ನೈವೇದ್ಯವನ್ನು ಅರ್ಪಿಸುತ್ತಾರೆ.

ಅದರಲ್ಲೂ ವಿಶೇಷವಾಗಿ ಮಾದಲಿ, ಸಜ್ಜಿ ರೊಟ್ಟಿ, ಕಾಳು ಪಳ್ಯೆ, ಮೊಸರನ್ನ, ತರಕಾರಿ ಪಲ್ಯವನ್ನು ಶ್ರದ್ಧಾ ಭಕ್ತಿಯಿಂದ ಮಾಡಿಕೊಂಡು ಅದನ್ನು ತಲೆ ಮೇಲೆ ಹೊತ್ತುಕೊಂಡು ಹಾಜಿ ಮಸ್ತಾನ್ ಹಾಗೂ ಬಡಕಲ್ ಸಾಬ್ ಗದ್ದುಗೆಗಳಿಗೆ ಅರ್ಪಿಸಿ ಪ್ರಾರ್ಥನೆ ಮಾಡುತ್ತಾರೆ. ಹೀಗೆ ನೈವೇದ್ಯ ಅರ್ಪಿಸಿದ ಬಳಿಕ ಉಪವಾಸ ವ್ರತಾಚರಣೆಯನ್ನು ಮುಕ್ತಾಯ ಮಾಡುತ್ತಾರೆ. ಇನ್ನು ಮುಸ್ಲೀಂ ಸಮುದಾಯದ ಜನರು ಕುರಿ ಮೇಕೆ ಟಗರು ಮಾಂಸದಿಂದ ಮಾಡಿರೋ ಅಡುಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಎಲ್ಲಾ ಸಮಾಜದವರು ತಾವು ತಂದಿದ್ದ ನೈವೇದ್ಯವನ್ನು ದರ್ಗಾದಲ್ಲಿಟ್ಟು ಪುನೀತರಾಗುತ್ತಾರೆ. ಹಾಜಿ ಮಸ್ತಾನ್ ಹಾಗೂ ಬಡಕಲ್ ಸಾಬ್ ದರ್ಗಾಗಳಲ್ಲಿ ಪ್ರಾರ್ಥನೆ ಮಾಡಿ ಬೇಡಿಕೊಂಡರೆ ಆ ಬೇಡಿಕೆಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಮೂರು ದಿನಗಳ ಕಾಲ ನಡೆಯೋ ಹಾಜಿ ಮಸ್ತಾನ್ ಹಾಗೂ ಬಡಕಲ್ ಸಾಬ್ ಉರುಸ್ ಆಚರಣೆಗೆ ಜಿಲ್ಲೆಯ ಭಕ್ತರಷ್ಟೇ ಅಲ್ಲಾ ಸುತ್ತಮುತ್ತಲ ಜಿಲ್ಲೆಗಳಾದ ಬೆಳಗಾವಿ ಕಲಬುರಗಿ, ಬಾಗಲಕೋಟೆ ಜಿಲ್ಲೆಗಳ ಹಾಗೂ ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಸೊಲ್ಲಾಪುರ ಜಿಲ್ಲೆಗಳ ಭಕ್ತರೂ ಪ್ರತಿ ವರ್ಷ ತಪ್ಪದೇ ಆಗಮಿಸುತ್ತಾರೆ. ಮೂರು ದಿನಗಳ ಕಾಲ ನಡೆಯೋ ಉರುಸ್ ನಲ್ಲಿ ಸಾವಿರಾರು ಜನರು ಭಾಗಿಯಾಗುತ್ತಾರೆ. ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಒಟ್ಟಾರೆ ಹಿಂದೂ ಮುಸ್ಲೀಂ ಸಾಮರಸ್ಯದ ಪ್ರತೀಕವಾಗಿ ನಡೆಯೋ ಉರುಸ್ ಇಂದಿನ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗಿದೆ.

ವಿಜಯಪುರ ಕುರಿತಾದ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಓದಿ

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು