ವಿಜಯಪುರ ಡಿಡಿಪಿಐ ಮತ್ತೆ ಸಸ್ಪೆಂಡ್: ಸತತ 3 ಬಾರಿ ಅಮಾನತ್ತಾಗಿ ಹ್ಯಾಟ್ರಿಕ್ ಸಾಧನೆ
ವಿಜಯಪುರ ಡಿಡಿಪಿಐ ಎನ್.ಎಚ್.ನಾಗೂರು ಮತ್ತೆ ಸಸ್ಪೆಂಡ್(suspended) ಆಗಿದ್ದು, ಈ ಮೂಲಕ ಸತತ ಮೂರು ಬಾರಿ ಅಮಾನತಾಗಿದ್ದಾರೆ. ಈ ಹಿಂದೆ 2024 ಜನವರಿ 30 ರಂದು EDSS ಯೋಜನೆ ಅನುಷ್ಠಾನದ ವೇಳೆ ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಸಸ್ಪೆಂಡ್ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅಮಾನತಾಗಿದ್ದಾರೆ.
ವಿಜಯಪುರ, ಅ.15: ಕರ್ತವ್ಯಲೋಪ ಹಿನ್ನೆಲೆ ವಿಜಯಪುರ ಡಿಡಿಪಿಐ ಎನ್.ಎಚ್.ನಾಗೂರು ಮತ್ತೆ ಸಸ್ಪೆಂಡ್(suspended) ಆಗಿದ್ದು, ಈ ಮೂಲಕ ಸತತ ಮೂರು ಬಾರಿ ಅಮಾನತಾಗಿದ್ದಾರೆ. ವಿಜಯಪುರ(Vijayapura)ಜಿಲ್ಲೆಯಲ್ಲಿ 2024-25ರಲ್ಲಿ ಹೊಸ ಶಾಲೆಯ ನೊಂದಣಿ ಪ್ರಕ್ರಿಯೆಯಲ್ಲಿ ನಿಯಮಬಾಹಿರ ಅನುಮೋದನೆ ಮಾಡಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಮೊದಲ ಬಾರಿ ಅಮಾನತು
2024 ಜನವರಿ 30 ರಂದು EDSS ಯೋಜನೆ ಅನುಷ್ಠಾನದ ವೇಳೆ ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಡಿಡಿಪಿಐ ಹಾಗೂ ಇಬ್ಬರು ಹಿರಿಯ ಉಪನ್ಯಾಸಕರನ್ನು ಅಮಾನತು ಮಾಡಲಾಗಿತ್ತು. ಡಿಡಿಪಿಐ ಎನ್.ಹೆಚ್.ನಾಗೂರ ಹಾಗೂ ಡಯಟ್ನ ಹಿರಿಯ ಉಪನ್ಯಾಸಕರಾದ ಎಸ್.ಎ.ಮುಜಾವರ ಮತ್ತು ಎ.ಎಸ್.ಹತ್ತಳ್ಳಿ ಅವರನ್ನು ವಿಚಾರಣೆ ಕಾಯ್ದಿರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.
ಇದನ್ನೂ ಓದಿ:ಕರ್ತವ್ಯ ನಿರ್ಲಕ್ಷ್ಯ ಆರೋಪ: ಡಿಡಿಪಿಐ ಹಾಗೂ ಇಬ್ಬರು ಹಿರಿಯ ಉಪನ್ಯಾಸಕರ ಅಮಾನತು
ಎರಡನೇ ಬಾರಿ ಅಮಾನತು
ಇದಾದ ಬಳಿಕ ಅಂದರೆ 2024 ಎಪ್ರಿಲ್ 16 ರಂದು ಎಸ್ಎಸ್ಎಲ್ಸಿ ಪರೀಕ್ಷೆ ವೇಳೆ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಿಲ್ಲ, ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಜನ ಜಂಗುಳಿ ನಿಯಂತ್ರಿಸುವಲ್ಲಿ ವಿಫಲಾರಾಗಿದ್ದಾರೆ. ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡದೇ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗಿದೆ ಎಂಬ ಕರ್ತವ್ಯ ಲೋಪದ ಆರೋಪದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಡಿಡಿಪಿಐ ಎನ್.ಎಚ್.ನಾಗೂರು ಅವರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ