
ವಿಜಯಪುರ, ಫೆಬ್ರವರಿ 12: ಚಂದಪ್ಪನ (Chandappa Harijan) ಶಿಷ್ಯ, ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ನ (Bagappa Harijan) ಕೊಲೆಯಾಗಿದೆ. ವಿಜಯಪುರ (Vijayapura) ನಗರದ ರೆಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ಮಂಗಳವಾರ ಬಾಗಪ್ಪ ಹರಿಜನ್ನ್ನು ಕೊಲೆ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿದೆ. ದಶಕಗಳ ಹಿಂದೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಭೀಮಾತೀರದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ್ದ ಬಾಗಪ್ಪ ಹರಿಜನ್ ಯಾರು? ಈತನ ಮೇಲಿದ್ದ ಅಪರಾಧ ಪ್ರಕರಣಗಳು ಯಾವ್ಯಾವು? ಇಲ್ಲಿದೆ ಓದಿ
ಕೊಲೆಯಾದ ಬಾಗಪ್ಪ ಹರಿಜನ್ ಭೀಮಾತೀರದ ಹಂತಕ ಎಂದೇ ಕುಖ್ಯಾತಿಯಾಗಿದ್ದ ಚಂದಪ್ಪ ಹರಿಜನ್ ಶಿಷ್ಯನಾಗಿದ್ದನು. ಬಾಗಪ್ಪ ಹರಿಜನ್ ಕಲಬುರ್ಗಿ, ವಿಜಯಪುರ ಭಾಗದ ಭೀಮಾತೀರದಲ್ಲಿ ಹಲವು ಅಪರಾಧ ಕೃತ್ಯಗಳನ್ನು ಎಸಗಿದ್ದನು.
ಬಾಗಪ್ಪ ಹರಿಜನ್ ಮೇಲೆ ಒಟ್ಟು 10 ಪ್ರಕರಣಗಳಿವೆ, ಈ ಪೈಕಿ 6 ಕೊಲೆ ಪ್ರಕರಣಗಳು ಇವೆ. 1998 ರಲ್ಲಿ ಸಿಂದಗಿಯಲ್ಲಿ ಸ್ಟನ್ಗನ್ ಬಳಸಿ ಗುಂಡು ಹಾರಿಸಿದ್ದ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತನ ಹೆಸರಿದೆ. ಚಂದಪ್ಪ ಹರಿಜನ್ ಸಹೋದರ ಬಸಪ್ಪ ಹಾಗೂ ಸಂಬಂಧಿ ಮುತ್ತುರಾಜ ಕೊಲೆ ಪ್ರಕರಣ ಈತನ ಮೇಲಿದೆ.
ಕಳೆದ 2018 ಆಗಷ್ಟ್ 8 ರಂದು ವಿಜಯಪುರ ನಗರದ ನ್ಯಾಯಾಲಯದ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಪೀರಪ್ಪ ಹಡಪದ್ ಎಂಬಾತ ಫೈರಿಂಗ್ ಮಾಡಿದ್ದನು. ಚಂದಪ್ಪ ಹರಿಜನ ಸಹೋದರನ ಪುತ್ರ ಭೀಮಸ್ಯಾ ಹಾಗೂ ಇತರರು ಪೀರಪ್ಪ ಹಡಪದಗೆ ಬಾಗಪ್ಪ ಕೊಲೆಗೆ ಸುಪಾರಿ ನೀಡಿದ್ದರು. ಪ್ರಕರಣದ ವಿಚಾರಣೆಗೆ ಬಾಗಪ್ಪ ಹರಿಜನ್ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಬಳಿಕ, ಹೈದ್ರಾಬಾದ್ನಲ್ಲಿ ಚಿಕಿತ್ಸೆ ಪಡೆದು ಬಾಗಪ್ಪ ಹರಿಜನ್ ಗುಣ ಮುಖನಾಗಿದ್ದನು.
ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ
ಪ್ರಕರಣ ಸಂಬಂಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹರಿಜನ್ನನ್ನು ಕೊಲೆ ಮಾಡಿರುವ ಹಂತಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ತನಿಖೆ ಮುಂದುವರೆದಿದೆ. ಬಾಗಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ,
ಬಾಗಪ್ಪ ಹರಿಜನ್ ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದನು. ಊಟ ಮಾಡಿ ಮನೆಯ ಮುಂದೆ ಬಾಗಪ್ಪ ವಾಕಿಂಗ್ ಮಾಡುತ್ತಿದ್ದ ವೇಳೆ ಆಟೋದಲ್ಲಿ ಬಂದ ನಾಲ್ಕೈದು ಜನರು ಕೊಡಲಿ ಸೇರಿ ವಿವಿಧ ಮಾರಕಾಸ್ತ್ರ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 am, Wed, 12 February 25