ಸರಗಳ್ಳರ ಹಾವಳಿಗೆ ಮಹಿಳೆಯ ಕಿವಿ ಕಟ್; ಹೊಲಿಗೆ ಹಾಕಿದ ವೈದ್ಯರು: ಆಗಿದ್ದೇನು?

ವಿಜಯಪುರ ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ದಿವಟಗೇರಿ ಗಲ್ಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ದಾಳಿ ನಡೆಸಿ ಕಿವಿ ಕತ್ತರಿಸಿ ಚಿನ್ನದ ಮಾಂಗಲ್ಯ ಮತ್ತು ಕಿವಿಯೋಲೆಯನ್ನು ಮುಸುಕುಧಾರಿಗಳು ಕಳವು ಮಾಡಿರುವಂತಹ ಘಟನೆ ನಡೆದಿದೆ. ಆ ಮೂಲಕ ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಮುಂದುವರಿದಿದೆ.

ಸರಗಳ್ಳರ ಹಾವಳಿಗೆ ಮಹಿಳೆಯ ಕಿವಿ ಕಟ್; ಹೊಲಿಗೆ ಹಾಕಿದ ವೈದ್ಯರು: ಆಗಿದ್ದೇನು?
ಹಲ್ಲೆಗೊಳಗಾದ ಮಹಿಳೆ
Edited By:

Updated on: Dec 27, 2025 | 4:55 PM

ವಿಜಯಪುರ, ಡಿಸೆಂಬರ್​ 27: ವಿಜಯಪುರ ನಗರದಲ್ಲಿ ಸರಗಳ್ಳರ (Chain Snatching) ಹಾವಳಿ ಮುಂದುವರಿದಿದೆ. ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಮಹಿಳೆ (woman) ಮೇಲೆ ಹಲ್ಲೆ ಮಾಡಿ ಇಬ್ಬರು ಮುಸುಕುಧಾರಿಗಳು ಮಾಂಗಲ್ಯ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿರುವಂತಹ ಘಟನೆ ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿ ಶುಕ್ರವಾರ ನಡೆದಿದೆ. ಕಲಾವತಿ ಗಾಯಕವಾಡ್(45) ಹಲ್ಲೆಗೊಳಗಾದ ಮಹಿಳೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ನಡೆದದ್ದೇನು?

ಕಲಾವತಿ ಗಾಯ್ಕವಾಡ್​​ ಹಾಲು ತರಲು ಅಂಗಡಿಗೆ ತೆರಳುತ್ತಿದ್ದರು. ಈ ವೇಳೆ ಮಹಿಳೆ ಮೇಲೆ ಹಲ್ಲೆ ಮಾಡಿ ಇಬ್ಬರು ಮುಸುಕುಧಾರಿಗಳು ಮಾಂಗಲ್ಯ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕಿವಿಯೋಲೆ ಕಿತ್ತುಕೊಳ್ಳುವ ವೇಳೆ ಕಲಾವತಿ ಅವರ ಕಿವಿ ಕತ್ತರಿಸಿದೆ. ಮುಖ, ಬಾಯಿಗೂ ಹಲ್ಲೆ ಮಾಡಿರುವ ಕಳ್ಳರು 10 ಗ್ರಾಂ ಚಿನ್ನದ ಮಾಂಗಲ್ಯ ಸರ, 1 ಗ್ರಾಂ ಚಿನ್ನದ ಕಿವಿಯೋಲೆ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Video: 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್

ಗಾಂಜಾ ಮತ್ತಿನಲ್ಲಿ ಇಬ್ಬರು ಯುವಕರು ಮುಖಕ್ಕೆ ಮುಖವಾಡ ಹಾಕಿಕೊಂಡು ಕಲಾವತಿ ಅವರ ಮೇಲೆ ಅಮಾನುಷ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕಲಾವತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕತ್ತರಿಸಿದ ಕಿವಿಗೆ ಸ್ಟಿಚ್ ಹಾಕಿ ಚಿಕಿತ್ಸೆ ನೀಡಲಾಗಿದೆ.

ಖೋಟಾನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳ ಸೆರೆ

ಖೋಟಾನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನರೇಂದ್ರ ಪ್ರಸಾದ್(32), ಬಿ.ಬಾಬು(28), ಟಿ.ಕುಮಾರಸ್ವಾಮಿ(40), ಮೊಹಮ್ಮದ್ ಅಖಿಲ್(21) ಮತ್ತು ಮೊಹಮ್ಮದ್ ರಿಯಾನ್(22) ಬಂಧಿತರು.

ಅರಸೀಕೆರೆ ಪೊಲೀಸರಿಂದ ಖೋಟಾನೋಟು ಅಡ್ಡೆಯ ಮೇಲೆ ಕಾರ್ಯಾಚರಣೆ ಮಾಡಲಾಗಿದೆ. 500 ರೂ. ಮುಖಬೆಲೆಯ 92 ಖೋಟಾನೋಟು ಹಾಗೂ ಒಂದು ಆಟೋ ವಶಕ್ಕೆ ಪಡೆಯಲಾಗಿದೆ. ಯುವಕರೇ ಹೆಚ್ಚಾಗಿ ಭಾಗಿಯಾಗಿದ್ದು, ಜಾತ್ರೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಹೀಗಾಗಿ ಇನ್ನಷ್ಟು ಸ್ಥಳಗಳ ಮೇಲೆ ಪೊಲೀಸರು ದಾಳಿ‌ ಮಾಡಿದ್ದಾರೆ.

ಇದನ್ನೂ ಓದಿ: ಕಾಕನೂರು SBI ದರೋಡೆ ಕೇಸ್​​: ಮತ್ತಿಬ್ಬರು ಆರೋಪಿಗಳು ಲಾಕ್​​; ಹಣ, ಬಂಗಾರ ಜಪ್ತಿ

ಅರಸೀಕೆರೆ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ಆರೋಪಿಗಳು ಖೋಟಾನೋಟು ಚಲಾವಣೆ ಮಾಡಿದ್ದಾರೆ.  ಖೋಟಾನೋಟು ಚಲಾವಣೆ ಮಾಡುತ್ತಿದ್ದರು ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.