AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಕನೂರು SBI ದರೋಡೆ ಕೇಸ್​​: ಮತ್ತಿಬ್ಬರು ಆರೋಪಿಗಳು ಲಾಕ್​​; ಹಣ, ಬಂಗಾರ ಜಪ್ತಿ

ಬಾಗಲಕೋಟೆಯ ಕಾಕನೂರು ಎಸ್‌ಬಿಐ ದರೋಡೆ ಪ್ರಕರಣದಲ್ಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳಿಂದ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ಹಣ ಹಾಗೂ ದರೋಡೆಗೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, 62 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ಹಣ ವಶಪಡಿಸಿಕೊಳ್ಳಲಾಗಿದೆ.

ಕಾಕನೂರು SBI ದರೋಡೆ ಕೇಸ್​​: ಮತ್ತಿಬ್ಬರು ಆರೋಪಿಗಳು ಲಾಕ್​​; ಹಣ, ಬಂಗಾರ ಜಪ್ತಿ
SBI ಶಾಖೆ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Dec 25, 2025 | 3:34 PM

Share

ಬಾಗಲಕೋಟೆ, ಡಿಸೆಂಬರ್​​ 25: ಕಾಕನೂರು ಗ್ರಾಮದಲ್ಲಿ ಎಸ್​​ಬಿಐ ದರೋಡೆ ಪ್ರಕರಣ ಸಂಬಂಧ ಇಬ್ಬರು ಖತರ್ನಾಕ್​​ ಕಳ್ಳರನ್ನು ಬಾದಾಮಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಚಿಕಲಿ ತಾಲೂಕಿನ ನಯಗಾಂವ್ ನಿವಾಸಿಗಳಾದ ಅಕ್ಷಯ್ ಅಂಬೋರೆ ಮತ್ತು ಕುನಾಲ್ ಚವ್ಹಾಣ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣ, ಚಿನ್ನಾಭರಣ, ವಾಹನ ಸೇರಿ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಘಟನೆ ಏನು?

2025ರ ಸೆಪ್ಟೆಂಬರ್​​ 2ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕಾಕನೂರಿನ ಎಸ್​​ಬಿಐ ಲಾಕರ್​​ ಒಡೆದು ಚಿನ್ನಾಭರಣ ಮತ್ತು ಹಣ ದರೋಡೆ ಮಾಡಲಾಗಿತ್ತು. ಸಿಸಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು, ಮೊಬೈಲ್​​ ಬಳಕೆ ಮಾಡದೆ, ಫಿಂಗರ್​​ ಪ್ರಿಂಟ್​​ ಕೂಡ ಸಿಗದ ರೀತಿಯಲ್ಲಿ ಆರೋಪಿಗಳು ಬ್ಯಾಂಕ್​​ನಲ್ಲಿ ಕಳವು ಮಾಡಿದ್ದರು. ಕಳ್ಳತನ ನಡೆಸುವ ಆರು ತಿಂಗಳ ಹಿಂದೆಯೇ ಬ್ಯಾಂಕ್​​ಗೆ ಬಂದು ಹೇಗೆ ಕನ್ನ ಹಾಕಬಹುದು ಎಂದು ತಂತ್ರ ರೂಪಿಸಿದ್ದರು.

ಇದನ್ನೂ ಓದಿ: ಬ್ಯಾಂಕ್​ಗಳ​ ರಾಬರಿ ಪ್ರಕರಣ; ಅಂತಾರಾಜ್ಯ ಕಳ್ಳರು ಅಂದರ್​

ಈವರೆಗೆ ನಾಲ್ವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳಿಂದ 25 ಲಕ್ಷ 90 ಸಾವಿರ ಮೌಲ್ಯದ ಚಿನ್ನಾಭರಣ, ಹಣ, ಕಳ್ಳತನಕ್ಕೆ ಬಳಸಿದ್ದ ಕಾರು, ಗ್ಯಾಸ್ ಕಟರ್, ಕಂಟ್ರಿಮೇಡ್ ಗನ್, ಎರಡು ಜೀವಂತ‌ಗುಂಡು, ರಾಡ್ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣ ಸಂಬಂಧ ಈ ಹಿಂದೆ ಬಾಗಲಕೋಟೆ ಜಿಲ್ಲಾ ಪೊಲೀಸರು ಉತ್ತರ‌ ಪ್ರದೇಶದ ಕಕ್ರಾಳ ಗ್ರಾಮದ ಮಹಮ್ಮದ ನವಾನ್ ಹಾಗೂ ಕಮರುಲ್‌ಖಾನ್ ಎಂಬವರನ್ನು ಬಂಧಿಸಿದ್ದರು. ಒಟ್ಟು ನಾಲ್ವರು ಆರೋಪಿಗಳಿಂದ 62 ಲಕ್ಷ 20 ಸಾವಿರ ಮೌಲ್ಯದ 472.20 ಗ್ರಾಂ ಚಿನ್ನಾಭರಣ ಸೇರಿ ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಗೆ ಜೈಲಿನಲ್ಲಿ ಪರಸ್ಪರ ಪರಿಚಯವಾಗಿತ್ತು ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ
ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಪೋಷಕರ ಗೋಳಾಟ
ಹೋಟೆಲ್ ರೆಸ್ಟೋರೆಂಟ್, ಬೇಕರಿ ತಿಂಡಿ ತಿನ್ನುವ ಮೊದಲು ಎಚ್ಚರ
ಹೋಟೆಲ್ ರೆಸ್ಟೋರೆಂಟ್, ಬೇಕರಿ ತಿಂಡಿ ತಿನ್ನುವ ಮೊದಲು ಎಚ್ಚರ
ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮೂವರು ನಾಪತ್ತೆ
ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮೂವರು ನಾಪತ್ತೆ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
ಕ್ಯಾಥೆಡ್ರಲ್ ಚರ್ಚ್​ನಲ್ಲಿ ಕ್ರಿಸ್ಮಸ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮೋದಿ
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
‘10 ಬಾರಿ ನೋಡಿದ್ರೂ ಬೇಸರ ಬರಲ್ಲ’; ‘ಮಾರ್ಕ್’ ನೋಡಿ ಫ್ಯಾನ್ಸ್ ರಿಯಾಕ್ಷನ್
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಡಿವೈಡರ್ ಹಾರಿ ಬಸ್​ಗೆ ಗುದ್ದಿದ ಲಾರಿ: ಪ್ರತ್ಯಕ್ಷದರ್ಶಿ ಹೇಳಿದ್ದೇನು ನೋಡಿ
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!
ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..!