AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

40 ಡಿಗ್ರಿ ದಾಟಿದ ಬಿಸಿಲ ಧಗೆಗೆ ಹೈರಾಣದ ವಿಜಯಪುರ ಮಂದಿಗೆ ನೆರಳು ನೀಡಲು ಪಾಲಿಕೆ ಹೊಸ ಪ್ಲ್ಯಾನ್; ಸವಾರರು ಫುಲ್ ಖುಷ್

ಬೆಳಗ್ಗೆ 10 ಗಂಟೆಯಾಗ್ತಿದ್ದಂತೆ ಬಿಸಿಲು ಮೈಸುಡ್ತಿದ್ದು, ಬೈಕ್‌ ಸವಾರರು ರಸ್ತೆಗೆ ಇಳಿಯೋಕು ಹೆದರಿಸುತ್ತಿದ್ದಾರೆ. ಇಂಥಾ ತಾಪದ ನಡುವೆ ರಸ್ತೆ ರಸ್ತೆಗಳಲ್ಲೂ ಇರೋ ಸಿಗ್ನಲ್‌ಗಳಲ್ಲಿ ಒಂದೆರಡು ನಿಮಿಷ ವಾಹನ ನಿಲ್ಲಿಸೋಕೆ ಪರದಾಡ್ತಿದ್ದಾರೆ. ಈ ಪರದಾಟ ಗಮನಿಸಿದ ವಿಜಯಪುರ ಮಹಾನಗರ ಪಾಲಿಕೆ ಗ್ರೀನ್‌ಟೆಂಟ್‌ ಐಡಿಯಾ ಮಾಡಿದೆ.

40 ಡಿಗ್ರಿ ದಾಟಿದ ಬಿಸಿಲ ಧಗೆಗೆ ಹೈರಾಣದ ವಿಜಯಪುರ ಮಂದಿಗೆ ನೆರಳು ನೀಡಲು ಪಾಲಿಕೆ ಹೊಸ ಪ್ಲ್ಯಾನ್; ಸವಾರರು ಫುಲ್ ಖುಷ್
40 ಡಿಗ್ರಿ ದಾಟಿದ ಬಿಸಿಲ ಧಗೆಗೆ ಹೈರಾಣದ ವಿಜಯಪುರ ಮಂದಿಗೆ ನೆರಳು ನೀಡಲು ಪಾಲಿಕೆ ಹೊಸ ಪ್ಲ್ಯಾನ್; ಸವಾರರು ಫುಲ್ ಖುಷ್
TV9 Web
| Updated By: ಆಯೇಷಾ ಬಾನು|

Updated on: Apr 14, 2022 | 9:34 PM

Share

ವಿಜಯಪುರ: ಮನೆಯೊಳಗೆ ಇದ್ರೆ ಶಕೆ. ರಸ್ತೆಗೆ ಇಳಿದ್ರೆ ಬಿಸಿಲ ಧಗೆ. ರಸ್ತೆಯಲ್ಲಿ ಸಾಗೋ ಬೈಕ್‌ ಸವಾರರಂತೂ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದಾರೆ. ಅದ್ರಲ್ಲೂ ಸಿಗ್ನಲ್‌ಗಳಲ್ಲಿ ಎರಡ್ಮೂರು ನಿಮಿಷ ಬೈಕ್‌ಗಳನ್ನ ನಿಲ್ಲಿಸಿ ಸಾಕ್‌ ಸಾಕಾಗಿ ಹೋಗಿದ್ರು. ಈ ಸಂಕಷ್ಟ ನೋಡಿದ ಅಲ್ಲಿನ ಪಾಲಿಕೆ ಹೊಸ ಐಡಿಯಾ ಮಾಡಿದೆ. ಸಿಗ್ನಲ್ಸ್‌ಗಳಲ್ಲಿ ಗ್ರೀನ್‌ಟೆಂಟ್ ಹಾಕುವ ಮೂಲಕ ಪಾಲಿಕೆ ಜನರಿಗೆ ನೆರಳು ನೀಡಿ ಸಹಾಯ ಮಾಡಿತ್ತಿದೆ.

40 ಡಿಗ್ರಿ ದಾಟಿದ ಬಿಸಿಲ ಧಗೆಗೆ ಜನ ಹೈರಾಣ ಬಳ್ಳಾರಿಯಿಂದ ಹಿಡಿದು ವಿಜಯಪುರದ ವರೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ಏಪ್ರಿಲ್‌ ತಿಂಗಳಲ್ಲೇ ಉಷ್ಣಾಂಶ 40 ಡಿಗ್ರಿ ತಲುಪಿದೆ. ಮೇ ತಿಂಗಳಲ್ಲಿ ಇರಬೇಕಿದ್ದ ಹೆಚ್ಚು ಬಿಸಿಲು ಈಗ್ಲೇ ಶುರುವಾಗಿದೆ. ಇದೇ ಬಿಸಿಲಿನ ತಾಪಕ್ಕೆ ವಿಜಯಪುರ ನಗರದ ಜನತೆ ಹೈರಾಣಾಗಿದ್ದಾರೆ. ಬೆಳಗ್ಗೆ 10 ಗಂಟೆಯಾಗ್ತಿದ್ದಂತೆ ಬಿಸಿಲು ಮೈಸುಡ್ತಿದ್ದು, ಬೈಕ್‌ ಸವಾರರು ರಸ್ತೆಗೆ ಇಳಿಯೋಕು ಹೆದರಿಸುತ್ತಿದ್ದಾರೆ. ಇಂಥಾ ತಾಪದ ನಡುವೆ ರಸ್ತೆ ರಸ್ತೆಗಳಲ್ಲೂ ಇರೋ ಸಿಗ್ನಲ್‌ಗಳಲ್ಲಿ ಒಂದೆರಡು ನಿಮಿಷ ವಾಹನ ನಿಲ್ಲಿಸೋಕೆ ಪರದಾಡ್ತಿದ್ದಾರೆ. ಈ ಪರದಾಟ ಗಮನಿಸಿದ ವಿಜಯಪುರ ಮಹಾನಗರ ಪಾಲಿಕೆ ಗ್ರೀನ್‌ಟೆಂಟ್‌ ಐಡಿಯಾ ಮಾಡಿದೆ.

ವಿಜಯಪುರ ನಗರದ ವಾಟರ್ ಟ್ಯಾಂಕ್ ಸರ್ಕಲ್, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಕೇಂದ್ರ ಬಸ್ ನಿಲ್ದಾಣ ಬಳಿಯ ಸಿಗ್ನಲ್ಸ್‌ಗಳಲ್ಲಿ ಗ್ರೀನ್‌ಟೆಂಟ್ ಗಳನ್ನು ಹಾಕಲಾಗಿದೆ. ಟ್ರಾಫಿಕ್ ಸಿಗ್ನಲ್ ಗಳು ಇರೋ ರಸ್ತೆಯ ಎರಡೂ ಬದಿಯಲ್ಲಿ ವಿವಿಧ ಅಳತೆಯ ಗ್ರೀನ್ ಟೆಂಟ್ ಗಳನ್ನು ಹಾಕಲಾಗಿದೆ. ಗಾಳಿ ಮಳೆಗೆ ಟೆಂಟ್ ಹಾಳಾಗಬಾರದೆಂಬ ನಿಟ್ಟಿನಲ್ಲಿ ಕಬ್ಬಿಣ ಕಂಬಗಳ ಹಾಗೂ ಆ್ಯಂಗಲ್ ಗಳನ್ನು ಜೋಡಿಸಿ ಟೆಂಟ್‌ ಅಳವಡಿಸಲಾಗಿದೆ. ಏಪ್ರಿಲ್ ಮೊದಲ ವಾರದಿಂದ ಜೂನ್ ತಿಂಗಳ ಮೊದಲ ವಾರದವರೆಗೂ ಈ ಗ್ರೀನ್ ಟೆಂಟ್ ಇರಲಿದ್ದು, ಇದಕ್ಕಾಗಿ 6 ಲಕ್ಷ ವೆಚ್ಚ ಮಾಡಲಾಗಿದೆ. ಪಾಲಿಕೆಯ ಈ ಯೋಜನೆ ಸವಾರರಿಗೆ ಖುಷಿ ನೀಡಿದೆ. ಒಟ್ನಲ್ಲಿ ಬಿಸಿಲಿನ ಧಗೆಯಲ್ಲಿ ನರಳುತ್ತಿರೋ ಸವಾರರಿಗೆ ಪಾಲಿಕೆ ಟೆಂಟ್‌ ನೆರಳು ನೀಡಿದೆ. ಪಾಲಿಕೆಯ ಇದೇ ಕೆಲಸ ಸವಾರರ ಖುಷಿಗೆ ಕಾರಣವಾಗಿದೆ.

ವರದಿ: ಅಶೋಕ್‌ ಯಡಳ್ಳಿ, ಟಿವಿ9 ವಿಜಯಪುರ

Green Tent

ಗ್ರೀನ್‌ಟೆಂಟ್

ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಮುನ್ನ ನಡುವೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಸಂತೋಷ ಪಾಟೀಲ ಕುಟುಂಬಸ್ಥರ ಕಾದಾಟ

ಆರ್​​ಎಸ್​ಎಸ್ ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ? ರತನ್ ಟಾಟಾ ಕೇಳಿದ ಪ್ರಶ್ನೆಗೆ ನಿತಿನ್ ಗಡ್ಕರಿ ಉತ್ತರ ಹೀಗಿತ್ತು