ವಿಜಯಪುರ: ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು 14 ಲಕ್ಷ ರೂ. ಕಳೆದುಕೊಂಡ ನಿವೃತ್ತ ನೌಕರ

ವಿಜಯಪುರದ ಸಿಂದಗಿಯ ನಿವೃತ್ತ ನೌಕರ ಬಸವರಾಜ ಹವಾಲ್ದಾರ್ ಅವರು ತಮ್ಮ ಮೊಮ್ಮಕ್ಕಳಿಗೆ ಮೊಬೈಲ್ ನೀಡಿದ್ದರಿಂದ 14 ಲಕ್ಷ ರೂಪಾಯಿಗಳನ್ನು ಸೈಬರ್ ವಂಚಕರಿಂದ ಕಳೆದುಕೊಂಡಿದ್ದಾರೆ. ಎಪಿಕೆ ಫೈಲ್ ಮೂಲಕ ಡೌನ್‌ಲೋಡ್ ಆದ ಅಪ್ಲಿಕೇಶನ್ ಮೂಲಕ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಮಕ್ಕಳಿಗೆ ಮೊಬೈಲ್ ನೀಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ವಿಜಯಪುರ: ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು 14 ಲಕ್ಷ ರೂ. ಕಳೆದುಕೊಂಡ ನಿವೃತ್ತ ನೌಕರ
ವಿಜಯಪುರ ಸಿಇಎನ್ ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: Nov 18, 2024 | 4:14 PM

ವಿಜಯಪುರ, ನವೆಂಬರ್​ 18: ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಿವೃತ್ತ ನೌಕರರೊಬ್ಬರು 14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಿಂದಗಿ ಪಟ್ಟಣದ (Sindagi) ಬಸವರಾಜ್ ಹವಾಲ್ದಾರ್‌ ಅವರ ಖಾತೆಯಿಂದ ಸೈಬರ್ ಖದೀಮರು (Cyber Crime)  14 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಬಸವರಾಜ ಹವಾಲ್ದಾರ್ ಮತ್ತು ಅವರ ಪತ್ನಿಯ ಜಂಟಿ ಖಾತೆಯಲ್ಲಿದ್ದ 14 ಲಕ್ಷ ರೂ. ವಂಚಕರು ದೋಚಿದ್ದಾರೆ.

ಇವರ ಮೊಬೈಲ್​ನಲ್ಲಿದ್ದ ಆನ್​ಲೈನ್ ಬ್ಯಾಂಕಿಗ್​ಗೆ ಬೆನಿಫೀಷರ್ ಆ್ಯಡ್ ಮಾಡಿ ಅದರ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಯಾವಾಗ ಖಾತೆಯಲ್ಲಿದ್ದ ಲಕ್ಷ ಲಕ್ಷ ಹಣ ಮಾಯವಾಯ್ತು, ಬಸವರಾಜ ಅವರು ವಿಜಯಪುರ ಸಿಇಎನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ, ಬ್ಯಾಂಕ್​ ಖಾತೆಯನ್ನು ಲಾಕ್ ಮಾಡಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿದ ಸಿಇಎನ್ ಪೊಲೀಸರು, ಬಸವರಾಜ ಅವರ ಮೊಬೈಲ್​ ಪರಿಶೀಲಿಸಿದಾಗ ಎಪಿಕೆ ಪೈಲ್ ಮೂಲಕ ಆ್ಯಪ್ ಡೌನ್​ಲೋಡ್​ ಮಾಡಿದ್ದನ್ನು ಕಂಡಿದ್ದಾರೆ. ನಂತರ, ತಜ್ಞರಿಂದ ಪರಿಶೀಲನೆ ನಡೆಸಿದಾಗ, ಎಪಿಕೆಯಿಂದ ಡೌನ್​ಲೋಡ್​ ಮಾಡಿಕೊಂಡ ಆ್ಯಪ್​ನಿಂದಲೇ ಹಣ ದೋಚಲಾಗಿದೆ ಎಂಬುವುದನ್ನು ತಿಳಿದಿದ್ದಾರೆ.

ಇದನ್ನೂ ಓದಿ: ವಿಜಯಪುರದ ಸೈಬರ್ ಕ್ರೈಂ ಉಲ್ಲೇಖಿಸಿ ಕೀ ಬಾತ್ ಮೂಲಕ ಜಾಗೃತಿ ಮೂಡಿಸಿದ ಮೋದಿ

ಪೊಲೀಸ್ ಆಧಿಕಾರಿಗಳ ಪ್ರಕಾರ ಎಪಿಕೆ ಫೈಲ್ ಮೂಲಕ ಹ್ಯಾಕರಗಳು ಆ್ಯಪ್​ಗಳನ್ನು ಕಳುಹಿಸುತ್ತಾರೆ. ಎಪಿಕೆ ಪೈಲ್ ಓಪನ್ ಮಾಡಿ ಅದರಲ್ಲಿರುವ ಆ್ಯಪ್ ಡೌನ್​ಲೋಡ್ ಮಾಡಿದರೆ ಮುಗಿಯುತು ಕಥೆ. ಅದರಲ್ಲಂತೂ, ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದಾಗ ಅಪಾಯಕಾರಿ ಎಪಿಕೆ ಫೈಲ್​ಗಳು ಆನಲೈನ್​ ಮೂಲಕ ಬರುತ್ತವೆ. ಗೇಮ್ ಆಡುವಾಗ ವಿಡಿಯೋ ನೋಡುವಾಗ, ಬರುವ ಎಪಿಕೆ ಫೈಲ್​ಗಳನ್ನು ಮಕ್ಕಳು ಡೌನ್​ಲೋಡ್ ಮಾಡುತ್ತಾರೆ. ಮುಂದೆ ನಡೆಯುವುದೇ ಅನಾಹುತಕಾರಿ ಸಂಗತಿ.

ಆ್ಯಪ್​ ಡೌನ್​ಲೋಡ್​ ಆಗಿದ್ದು ಹೇಗೆ?

ಬಸವರಾಜ ಹವಾಲ್ದಾರ್ ಪ್ರಕರಣದಲ್ಲೂ ಇದೇ ಆಗಿದ್ದು. ಮನೆಯಲ್ಲಿ ಮೊಮ್ಮಕ್ಕಳ ಕೈಯ್ಯಲ್ಲಿ ಮೊಬೈಲ್ ಕೊಟ್ಟಾಗ ಎಪಿಕೆ ಪೈಲ್​ನಲ್ಲಿರುವ ಆ್ಯಪ್​ ಡೌನ್​ಲೋಡ್ ಆಗಿದೆ. ಬಸವರಾಜ ಹವಾಲ್ದಾರ್​ ಅವರ ಮೊಬೈಲ್ ಸೈಬರ್ ವಂಚಕರ ವಶವಾಗಿದೆ. ಆಗ, ಇವರ ಅಕೌಂಟ್​ನಲ್ಲಿರುವ ಹಣವನ್ನೆಲ್ಲ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಸಿಇಎನ್ ಪೊಲೀಸರು ಸೈಬರ್ ಖದೀಮರ ಪತ್ತೆಗೆ ಮುಂದಾಗಿದ್ದಾರೆ.

ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಎಪಿಕೆ ಪೈಲ್​​ಗಳು ಡೌನ್‌ಲೋಡ್ ಆಗುವ ಸಾಧ್ಯತೆ ಇರುತ್ತದೆ. ಬಳಿಕ ನಿಮ್ಮ ಮೊಬೈಲ್, ಬ್ಯಾಂಕ್‌ಗಳು ಹ್ಯಾಕ್ ಆಗುವ ಸಾಧ್ಯತೆ ಇರುತ್ತವೆ. ಹೀಗಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:45 pm, Mon, 18 November 24

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us