ವಿಜಯಪುರದ ಸೈಬರ್ ಕ್ರೈಂ ಉಲ್ಲೇಖಿಸಿ ಕೀ ಬಾತ್ ಮೂಲಕ ಜಾಗೃತಿ ಮೂಡಿಸಿದ ಮೋದಿ

ಡಿಜಿಟಲ್ ಅರೆಸ್ಟ್. ಇದು ಸೈಬರ್ ಲೋಕದಲ್ಲಿ ಶುರುವಾದ ಹೊಸ ಪಿಡುಗು. ಕರ್ನಾಟಕದ ವಿಜಾಪುರದಿಂದ ಬೆಳಕಿಗೆ ಬಂದ ಈ ವಂಚನೆ ದೇಶದಲ್ಲಿ ಸದ್ದು ಮಾಡಿತ್ತು. ಅಂತಿಮವಾಗಿ ಇದು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ಬಂದಿದ್ದು, ಅವರು ತಮ್ಮ ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ದೇಶದ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಷ್ಟಕ್ಕೂ ಏನಿದು ಡಿಜಿಟಲ್ ಅರೆಸ್ಟ್? ಎನ್ನುವುದನ್ನು ತಿಳಿದುಕೊಳ್ಳಿ.

ವಿಜಯಪುರದ ಸೈಬರ್ ಕ್ರೈಂ ಉಲ್ಲೇಖಿಸಿ  ಕೀ ಬಾತ್ ಮೂಲಕ ಜಾಗೃತಿ ಮೂಡಿಸಿದ ಮೋದಿ
ಪ್ರಧಾನಿ ಮೋದಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ರಮೇಶ್ ಬಿ. ಜವಳಗೇರಾ

Updated on:Oct 27, 2024 | 3:11 PM

ಬೆಂಗಳೂರು/ವಿಜಯಪುರ, (ಅಕ್ಟೋಬರ್ 27): ಇಡೀ ಸಿಬಿಐ ಪೊಲೀಸ್ ಬಂಧನ ಭೀತಿಯಲ್ಲಿ ಜನರು ತಮ್ಮ ಲಕ್ಷ ಲಕ್ಷ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ವಿಜಾಪುರದಲ್ಲಿ ನಡೆದ ಇಂತಹದೇ ಒಂದು ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು.  ಸೈಬರ್​​ ವಂಚಕನೋರ್ವ ವಿಜಯಪುರ ಸಂತೋಷ್ ಚೌದರಿಗೆ ಕರೆ ಮಾಡಿ ಹಣಕ್ಕೆ ಬ್ಲ್ಯಾಕ್​ಮೇಲ್​ ಮಾಡಿದ್ದ. ಆ ವರದಿ ಪ್ರಧಾನಿ ನರೇಂದ್ರ ಅವರಿಗೆ ತಲುಪಿದ್ದು,ಇದೀಗ ಮೋದಿ ಅವರು ಇಂದಿನ(ಅಕ್ಟೋಬರ್ 27) 115ನೇ ತಮ್ಮ ಮನ್ ಕೀ ಬಾತ್​ನಲ್ಲಿ ಉದಾಹರಣೆ ಮೂಲಕ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಹೌದು..ಇಂದಿನ ತಮ್ಮ 115 ನೇ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಡಿಯೋ ಕಾಲ್ ಮೂಲಕ ಪೊಲೀಸ್ ತನಿಖೆ ನೆಪ ಅಥಾವ ಡಿಜಿಟಲ್ ಅರೆಸ್ಟ್ ಮಾಡುವ ವಂಚನೆಯ ಬಗ್ಗೆ ಮೋದಿ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ದೇಶದಲ್ಲೇ ಸುದ್ದಿ ಮಾಡಿದ್ದ ರಾಜ್ಯದ ವಿಜಯಪುರದ ಸಂತೋಷ್ ಚೌದರಿ ಪ್ರಕರಣವನ್ನು ಉದಾಹರಣೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಅನ್ನೋ ಕಾನೂನೇ ಇಲ್ಲ, ಹುಷಾರಾಗಿರಿ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರ ಸಂದೇಶ

ಸೈಬರ್ ವಂಚನೆ ಹೊಸ ರೂಪ ಪಡೆದುಕೊಂಡಿದೆ. ಪೊಲೀಸ್, ಸಿಬಿಐ, ಇಡಿ ನೆಪದಲ್ಲಿ ಕರೆ ಮಾಡುತ್ತಾರೆ. ಇದಕ್ಕೆ ಡಿಜಿಟಲ್ ಅರೆಸ್ಟ್ ಅಂತಾರೆ. ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಮಾಡಲಾಗುತ್ತಿದೆ. ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕಿ ಬಹಳಷ್ಟು ಕಾನ್ಫಡೆನ್ಸ್ ಮೂಲಕ ಮಾತನಾಡುವ ವಂಚಕರು ಭಯದ ವಾತಾವರಣ ನಿರ್ಮಾಣ ಮಾಡಿ, ನಿಮ್ಮನ್ನು ಹೆದರಿಸುತ್ತಾರೆ. ಸಮಯದ ಒತ್ತಡ ಹಾಕಿ ಬಂಧನದ ಆತಂಕ ನಿರ್ಮಿಸುತ್ತಾರೆ. ಡಿಜಿಟಲ್ ಅರೆಸ್ಟ್ ವಂಚನೆಗೆ ಎಲ್ಲ ವಯಸ್ಸಿನ ಜನರು ಬಲಿಯಾಗುತ್ತಿದ್ದಾರೆ. ತಮ್ಮ ದುಡಿಮೆ ಹಣವನ್ನು ಕಳೆದುಕೊಳ್ತಿದ್ದಾರೆ. ಇಂತಹ ಕಾಲ್ ಬಂದರೆ ಆತಂಕಗೊಳ್ಳದೇ ನಿಮ್ಮ ಯಾವುದೇ ಮಾಹಿತಿ ನೀಡಬೇಡಿ ಎಂದು ದೇಶದ ಜನರಿಗೆ ತಿಳಿಸಿದರು.

ವಂಚಕರು ಮಾಡುವ ಕರೆ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿಟ್ಟಿಕೊಳ್ಳಿ, ಸರ್ಕಾರಿ ತನಿಖಾ ಸಂಸ್ಥೆಗಳು ಹೀಗೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕಲ್ಲ, ಇಂತಹ ಘಟನೆ ನಡೆದರೆ ರಾಷ್ಟ್ರೀಯ ಸೈಬರ್ ಕ್ರೈಂಗೆ ದೂರು ನೀಡಿ, ಡಿಜಿಟಲ್ ಅರೆಸ್ಟ್ ಎನ್ನುವ ವ್ಯವಸ್ಥೆ ಕಾನೂನಿನಲ್ಲಿಲ್ಲ ಎಂದು ಮೋದಿ ಹೇಳಿದ್ದಾರೆ.

ಇಂತಹ ಸಮಸ್ಯೆ ಸರಿಪಡಿಸಲು ರಾಜ್ಯ ಸರ್ಕಾರದ ಜೊತೆಗೆ ಕೇಂದ್ರದ ಸಂಸ್ಥೆಗಳ ತನಿಖೆ ಮಾಡುತ್ತಿವೆ. ಇಂತಹ ಕಾಲ್ ಮಾಡುವುವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಐಡಿ ಮತ್ತು ಸಿಮ್ ಬಂದ್ ಮಾಡಲಾಗುತ್ತಿದೆ. ಇಂತಹ ಹೊಸ ಹೊಸ ಮಾದರಿಯ ಸೈಬರ್ ವಂಚನೆಯಿಂದ ಜನರು ದೂರ ಇರಬೇಕು ಎನ್ನುವುದು ನಮ್ಮ ಉದ್ದೇಶವೂ ಕೂಡಾ ಆಗಿದೆ ಎಂದು ಮೋದಿ ತಿಳಿಸಿದ್ದಾರೆ.

ವಿಜಯಪುರ ಪ್ರಕರಣ ಏನು?

ನಿಮ್ಮ ಮೊಬೈಲ್ ನಂಬರ್ ವಿರುದ್ಧ 17 ಕೇಸ್ ದಾಖಲಾಗಿವೆ. ವಿಚಾರಣೆಗೆ ಹಾಜರಾಗಲು ಮುಂಬೈಗೆ ಬನ್ನಿ ಎಂದು ವಂಚಕ ಸಂತೋಷ್ ಚೌದರಿಗೆ ಹೇಳಿದ್ದಾನೆ.ಅಶ್ಲೀಲವಾಗಿ ನಿಂದಿಸಿ ನಕಲಿ ಪೊಲೀಸ್ ಅಧಿಕಾರಿ ಸಂತೋಷ್​ಗೆ ಬೆದರಿಕೆ ಹಾಕಿದ್ದಾನೆ. ಆಧಾರ್ ನಂಬರ್ ಕೆಲ ಓಟಿಪಿ ಪಡೆಯಲು ವಂಚಕ ಯತ್ನಿಸಿದ್ದಾನೆ. ಕ್ರೈಂ ಬ್ಯಾಂಚ್ ಪೊಲೀಸರ ಯೂನಿಫಾರ್ಮ್ ನಲ್ಲಿ ಕಾಲ್ ಮಾಡಿದ್ದ ಎನ್ನಲಾಗಿದ್ದು, ಇದರ ಸಂಪೂರ್ಣ ದೃಶ್ಯವನ್ನ ಸಂತೋಷ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಈ ಬಗ್ಗೆ ಸಂತೋಷ್ ವಿಜಯಪುರ ಸೆನ್ ಠಾಣೆಗೆ ದೂರು ನೀಡಿದ್ದರು. ಇದೀಗ ಈ ಪ್ರಕರಣವನ್ನು ಉಲ್ಲೇಖಿಸಿ ಮೋದಿ ತಮ್ಮ ಮನ್​ಕೀ ಬಾತ್​ನಲ್ಲಿ ಉಲ್ಲೇಖಿಸಿ ಜಾಗೃತಿ ಮೂಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:09 pm, Sun, 27 October 24

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ