Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು: ವಾರ್ನ್​ ಮಾಡಿದ್ದಕ್ಕೆ ಹತ್ಯೆಗೈದ!

ಇಬ್ಬರು ಸ್ನೇಹತರಾಗಿದ್ದ ಕಾರಣ ಅಮ್ಜಾದ್ ಮನೆಗೆ ಬಂದು ಹೋಗುತ್ತಿದ್ದ. ಹೀಗಿರುವಾಗ ರೋಹಿತ್ ಅತ್ತಿಗೆ ಮೇಲೆ‌ ಕಣ್ಣಾಕಿ ಆಗಾಗ ಪೋನ್‌ ಮಾಡಿ ಕಿರುಕುಳ ನೀಡಿ ಪುಸಲಾಯಿಸಲು ಯತ್ನಿಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ನೇಹಿತ ಅನ್ನೋದನ್ನು ಮರೆತು ಅಮ್ಜಾದ್,​ ‌ರೋಹಿತ್​ನನ್ನು ಕೊಲೆ ಮಾಡಿರುವಂತಹ ಘಟನೆ ಕೋಲಾರದ ಜಮಾಲ್ ಷಾ ನಗರದಲ್ಲಿ ನಡೆದಿದೆ.

ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು: ವಾರ್ನ್​ ಮಾಡಿದ್ದಕ್ಕೆ ಹತ್ಯೆಗೈದ!
ಅತ್ತಿಗೆ ಮೇಲೆ ಸ್ನೇಹಿತನ ಕಣ್ಣು: ವಾರ್ನ್​ ಮಾಡಿದ್ದಕ್ಕೆ ಹತ್ಯೆಗೈದ!
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 27, 2024 | 2:56 PM

ಕೋಲಾರ, ಅಕ್ಟೋಬರ್​ 27: ಅವರಿಬ್ಬರು ದೂರದ ಸಂಬಂಧಿಗಳು‌. ಅದರಲ್ಲೂ ಸ್ನೇಹಿತರು (Friend). ಮನೆಗೆ ಬರುತ್ತಿದ್ದ ಸ್ನೇಹಿತ ತನ್ನ ಅತ್ತಿಗೆ ಮೇಲೆ ಕಣ್ಣಾಕಿದ ವಿಷಯ ತಿಳಿದು ಎಚ್ಚರಿಕೆ ನೀಡಿದ್ದ. ಆದರೆ ಅಷ್ಟಕ್ಕೆ ಸುಮ್ಮನಾಗದ ಸ್ನೇಹಿತ ಎಚ್ಚರಿಕೆ ನೀಡಿದ್ದ ಸ್ನೇಹಿತನ ಎದೆಗೆ‌ ಚೂರಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ರೋಹಿದ್​ ಅಲಿಯಾಸ್ ಅರ್ಬಾಜ್(26) ಮೃತ ಸ್ನೇಹಿತ.

ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ಸುಲ್ತಾನ್​ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್​ ಅಲಿಯಾಸ್ ಅರ್ಬಾಜ್​ನನ್ನು ಕೊಲೆ‌ ಮಾಡಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡುವುದಾದರೆ, ರೋಹಿದ್​ ಮತ್ತು ಅಮ್ಜಾದ್ ದೂರದ ಸಂಬಂಧಿಗಳು ಮತ್ತು ಸ್ನೇಹಿತರಾಗಿದ್ದರು. ಹೀಗಿರುವಾಗ‌ ಅಮ್ಜಾದ್ ಆಗಾಗ ರೋಹಿದ್​ ಮನೆಗೆ ಬರುತ್ತಿದ್ದ. ಈ ವೇಳೆ ರೋಹಿದ್​ ಅಣ್ಣನ ಹೆಂಡತಿ ಅಂದರೆ ಅತ್ತಿಗೆ‌ ಮೇಲೆ‌ ಕಣ್ಣು‌ ಹಾಕಿದ್ದಾನೆ. ರೋಹಿದ್​​ಗೆ ತಿಳಿಯದಂತೆ ತನ್ನ ಅತ್ತಿಗೆ ಮೊಬೈಲ್ ನಂಬರ್​ ಪಡೆದುಕೊಂಡು ಆಗ್ಗಾಗ ಫೋನ್​  ಹಾಗೂ ವಿಡಿಯೋ ಕಾಲ್​ ಮಾಡಿ‌‌‌ ರೋಹಿದ್​ ಅತ್ತಿಗೆಗೆ ಪಿಡಿಸುತ್ತಿದ್ದನಂತೆ. ಈ ವಿಷಯ ತಿಳಿದ ರೋಹಿದ್​ ಮತ್ತು ಸಂಬಂಧಿಕರು ಕಳೆದ ಎರಡು ತಿಂಗಳ‌ ಹಿಂದೆ ಅಮ್ಜಾದ್‌ ಮನೆ ಬಳಿ ಹೋಗಿ‌ ಗಲಾಟೆ ಮಾಡಿ ಎಚ್ಚರಿಕೆ ಕೊಟ್ಟು ಬಂದಿದ್ದರು.

ಇದನ್ನೂ ಓದಿ: ವಿಡಿಯೋ ಮುಂದಿಟ್ಟು ಕಾಂಗ್ರೆಸ್ ನಾಯಕನಿಗೆ ಬ್ಲ್ಯಾಕ್‌ಮೇಲ್: ಲೇಡಿ ಫೋನ್​ನಲ್ಲಿ 8 ಜನರ ವಿಡಿಯೋಗಳು ಪತ್ತೆ

ಇಷ್ಟಾದರೂ ಅಮ್ಜಾದ್​ ಮಾತ್ರ ತನ್ನ ದುರ್ಬುದ್ದಿಯನ್ನು ನಿಲ್ಲಿಸಿರಲಿಲ್ಲ. ಎರಡು ತಿಂಗಳು ಸುಮ್ಮನಿದ್ದು ಮತ್ತೆ ಅವರ ಅತ್ತಿಗೆಗೆ ಫೋನ್​ ಮಾಡೋದಕ್ಕೆ ಶುರುಮಾಡಿದ್ದಾನೆ. ಅಷ್ಟೇ ಅಲ್ಲದೆ ಅಮ್ಜಾದ್ ಕಳೆದ ಮೂರು ದಿನಗಳ‌ ಹಿಂದೆ ರೋಹಿದ್ ಎದುರಲ್ಲಿಯೇ ಅವರ ಅತ್ತಿಗೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ‌ಇದನ್ನು ನೋಡಿದ್ದ ರೋಹಿದ್​ ಗಲಾಟೆ ಮಾಡಿ ವಾರ್ನಿಂಗ್​ ಮಾಡಿದ್ದ. ಇದಕ್ಕೆ ಅಮ್ಜಾದ್​ ಕೂಡ ಕೋಪ ಮಾಡಿಕೊಂಡಿದ್ದ.

ಇನ್ನು ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್​ ರಾತ್ರಿ ವಾಸಪ್ ಬರುತ್ತಿದ್ದಂತೆ ನಿನ್ನ ಜೊತೆಗೆ ಮಾತನಾಡಬೇಕು ಬಾ ಎಂದು ಅಮ್ಜಾದ್​ ಜಮಾಲ್​ ಷಾ ನಗರದ ಹೊರಗೆ ಕರೆದಿದ್ದಾನೆ. ಅಮ್ಜಾದ್ ಕರೆದ ಜಾಗಕ್ಕೆ ರೋಹಿದ್ ಹೋಗಿದ್ದಾನೆ. ಈ ವೇಳೆ ಜಗಳ ತೆಗೆದು ರೋಹಿದ್​​ ಎದೆಗೆ ಚಾಕುವಿನಿಂದ ಇರಿದು ಅಲ್ಲಿಂದ ಅಮ್ಜಾದ್ ಪರಾರಿಯಾಗಿದ್ದಾನೆ.

ಆರೋಪಿ ಅಮ್ಜದ್​ ಬಂಧನ

ಇನ್ನು ವಿಷಯ ತಿಳಿಯುತ್ತಿದ್ದಂತೆ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕ್ಷಿಪ್ರಕಾರ್ಯಾಚರಣೆ ನಡೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಮ್ಜದ್​ನನ್ನು ಬಂಧಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇತ್ತ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ರೋಹಿದ್​ ಕುಟುಂಬ ಇವತ್ತು ಅನಾಥವಾಗಿ ಕಣ್ಣೀಕು ಹಾಕುವಂತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:55 pm, Sun, 27 October 24