AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಜನರ ಕಣ್ಣಲ್ಲಿ ನೀರು ಹಾಕಿಸಿದ್ದು ಮಹಾರಾಷ್ಟ್ರ ಸರ್ಕಾರವೇ? ಕೇಳಿಬಂತು ಗಂಭೀರ ಆರೋಪ

ಅಕ್ಟೋಬರ್ ಮೊದಲ ವಾರದವರೆಗೆ ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಮಾ ನದಿ ಪ್ರವಾಹದಿಂದಾಗಿ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಭೀಮಾ ನದಿ ಪ್ರವಾಹಕ್ಕೆ ನಾಲ್ಕು ಜಿಲ್ಲೆಗಳು ತತ್ತರಿಸಿದ್ದವು. ಸದ್ಯ ಪ್ರವಾಹ ತಗ್ಗಿದೆ. ಆದರೆ ಇದೀಗ ಭೀಮಾ ನದಿಯ ಈ ಪ್ರವಾಹಕ್ಕೆ ನೈಸರ್ಗಿಕ ಕಾರಣಗಳ ಜೊತೆಗೆ, ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯವೂ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿಜಯಪುರ ಜನರ ಕಣ್ಣಲ್ಲಿ ನೀರು ಹಾಕಿಸಿದ್ದು ಮಹಾರಾಷ್ಟ್ರ ಸರ್ಕಾರವೇ? ಕೇಳಿಬಂತು ಗಂಭೀರ ಆರೋಪ
ಭೀಮಾ ನದಿ ಪ್ರವಾಹ
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 08, 2025 | 4:11 PM

Share

ವಿಜಯಪುರ, ಅಕ್ಟೋಬರ್​​ 08: ಇಷ್ಟು ದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದಿದ್ದ ಭೀಮಾ ನದಿ ಪ್ರವಾಹ (Bhima River Flood) ತಣ್ಣಗಾಗಿದೆ. ಮುನಿಸಿಕೊಂಡಿದ್ದ ಭೀಮೆ ಸದ್ಯ ಶಾಂತಳಾಗಿದ್ದಾಳೆ. ಪ್ರವಾಹದಿಂದ ಜಿಲ್ಲೆಯ ಜನರು, ರೈತರು ಪಡಬಾರದ ಯಾತನೆ ಪಟ್ಟರು. ಮನೆ-ಮಠ ಕಳೆದುಕೊಂಡು ಬೀದಿಗೆ ಬಂದರು. ಲಕ್ಷಾಂತರ ಎಕರೆ ಬೆಳೆ ಪ್ರವಾಹಕ್ಕೆ ಮಣ್ಣುಪಾಲಾಗಿದೆ. ನೈಸರ್ಗಿಕ ಕಾರಣದ ಜೊತೆಗೆ ನೆರೆಯ ಮಹಾರಾಷ್ಟ್ರದವರ (Maharashtra) ನಿರ್ಲಕ್ಷ್ಯ ಹಾಗೂ ಕಾನೂನು ಬಾಹಿರವಾಗಿ ನೀರು ಬಳಕೆ ಮಾಡಿಕೊಂಡಿದ್ದು, ಪ್ರವಾಹಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಪ್ರವಾಹಕ್ಕೆ ಮಹಾರಾಷ್ಟ್ರ ಸರ್ಕಾರ ಕಾರಣ

ನೆಲ-ಜನ, ಗಡಿ, ಭಾಷೆಯ ವಿಚಾರದಲ್ಲಿ ಯಾವಾಗಲೂ ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕ ಸಂಬಂಧ ಅಷ್ಟಕಷ್ಟೇ. ಯಾವುದೇ ವಿಚಾರವಿರಲಿ ಯಾವಾಗಲೂ ನಮ್ಮ ಜೊತೆಗೆ ಕಾಲು ಕೆರೆದು ಜಗಳಕ್ಕೆ ಬರುವ ಜಾಯಮಾನ ಮಹಾರಾಷ್ಟ್ರದ್ದು. ಇದೀಗ ಕಳೆದ ಸೆ. 20 ರಿಂದ ಅಕ್ಟೋಬರ್ ಮೊದಲ ವಾರದವರೆಗೂ ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಮಾ ನದಿ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಲಕ್ಷಾಂತರ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿತ್ತು. ನೂರಾರು ಮನೆಗಳು ನೆಲಕ್ಕುರಳಿವೆ. ಸಾವಿರಾರು ಜನರು ಸಂತ್ರಸ್ತರಾಗಿದ್ಧಾರೆ. ಸದ್ಯ ಪ್ರವಾಹ ಕಡಿಮೆಯಾಗಿದೆ. ಆದರೆ ಈ ಪ್ರವಾಹಕ್ಕೆ ಮಹಾರಾಷ್ಟ್ರ ಸರ್ಕಾರ ಕಾರಣವೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಭೀಮಾನದಿ ಭೋರ್ಗರೆತಕ್ಕೆ ಕಲ್ಯಾಣ ಕರ್ನಾಟಕ ತತ್ತರ: ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

ಮಹಾರಾಷ್ಟ್ರದ ಉಜ್ಜನಿ ವೀರ್ ಜಲಾಶಯಗಳ ನೀರನ್ನು ಭೀಮಾ ನದಿಗೆ ಬಿಡುವ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡದೇ ಇರುವುದು ಹಾಗೂ ಸೀನಾ ಸೇರಿದಂತೆ ಇತರೆ ಉಪ ನದಿಗಳ ಹೊರ ಹರಿವಿನ ಪ್ರಮಾಣವನ್ನೂ ಸರಿಯಾಗಿ ನೀಡದೇ ಇರುವುದಕ್ಕೆ ಪ್ರವಾಹವನ್ನು ಎದುರಿಸುವುದು ಕಷ್ಟವಾಗಿದೆ. ಇದರ ಜೊತೆಗೆ ಕೃಷ್ಣ ಹಾಗೂ ಭೀಮಾನದಿ ನೀರನ್ನು ಕಾನೂನು ಬಾಹಿರವಾಗಿ ಸಿಡ್ಲ್ಯೂಸಿ ಗಮನಕ್ಕೂ ತರದೇ ಅಕ್ರಮವಾಗಿ ನೀರು ಸಂಗ್ರಹ ಮಾಡಿಕೊಂಡಿದ್ದಾರೆ. ಅಧಿಕ ಮಳೆಯಾಗಿದ್ದು ಜಲಾಶಯಗಳಲ್ಲಿ ಹೆಚ್ಚು ನೀರು ಸಂಗ್ರಹವಾದ ಕೂಡಲೇ ದಿಢೀರನೆ ಭೀಮಾ ನದಿಗೆ ನೀರು ಬಿಟ್ಟಿದ್ಧಾರೆ. ಇದೇ ಕಾರಣಕ್ಕೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹದ ತೀವ್ರತೆ ಉಂಟಾಯಿತು ಎಂದು ಹಿರಿಯ ಪತ್ರಕರ್ತ ವಾಸು ಹೆರಕಲ್ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಚಿವ ಎಂ.ಬಿ ಪಾಟೀಲ್ ಕಿಡಿ 

ಭೀಮಾ ನದಿಯ ಪ್ರವಾಹದ ಕುರಿತು ಇತ್ತೀಚೆಗೆ ಮಾತನಾಡಿದ್ದ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಅವರ ಕೂಡ ಮಹಾರಾಷ್ಟ್ರದವರ ಮೇಲೆಯೇ ಆರೋಪ ಮಾಡಿದ್ದರು. ಕೃಷ್ಣಾ ಹಾಗೂ ಭೀಮಾ ನದಿ ನೀರಿನ ವಿಚಾರದಲ್ಲಿ ಮಹಾರಾಷ್ಟ್ರದವರು ಅಕ್ರಮವಾಗಿ ನೀರು ಸಂಗ್ರಹ ಮಾಡಿಕೊಂಡಿದ್ದಾರೆ ಎಂದಿದ್ದರು.

ಏತ ನೀರಾವರಿ ಯೋಜನೆ ನದಿಗೆ ಬಾಂದಾರ್ ನಿರ್ಮಾಣ ಜಲ ಸಂಗ್ರಹಗಾರಗಳನ್ನು ಯಾವುದೇ ಪರವಾನಿಗೆ ಪಡೆಯದೇ ನಿರ್ಮಾಣ ಮಾಡಿದ್ಧಾರೆ. ಸುಮಾರು 49.5 ಟಿಎಂಸಿ ನೀರನ್ನು ಅಕ್ರಮವಾಗಿ ಮಹಾರಾಷ್ಟ್ರದವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲಾ ಯೋಜನೆ ಕಾನೂನು ಬಾಹಿರವಾಗಿದೆ. ಕೆಎನ್​​ಎನ್​ಎಲ್​ನವರು 2007 ರಲ್ಲಿ ರಾಜ್ಯದ ತಂಡ ನೀರಿನ ವಿಚಾರದಲ್ಲಿ ಪರಿಶೀಲನೆಗೆ ಹೋದಾಗ ಮಹಾರಾಷ್ಟ್ರ ಯಾವುದೇ ಸಹಕಾರ ನೀಡಿಲ್ಲ. ಆಗ ಹೋಗಿದ್ದ ತಂಡ 49.5 ಟಿಎಂಸಿ ನೀರನ್ನು ಮಹಾರಾಷ್ಟ್ರ ಸರ್ಕಾರ ಅಕ್ರಮವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿತ್ತು.

Flood

ಭೀಮಾ ನದಿ ಪ್ರವಾಹಕ್ಕೆ ಹಾನಿಯಾದ ಬೆಳೆ

ಬಚಾವತ್ ಆಯೋಗದ ವರದಿಯಲ್ಲಿ 300 ಟಿಎಂಸಿ ನೀರು ಮಹಾರಾಷ್ಟ್ರಕ್ಕೆ ಕೃಷ್ಣಾ ಹಾಗೂ ಭೀಮಾ ನದಿಗಳಿಂದ ಹಂಚಿಕೆ ಮಾಡಲಾಗಿದೆ. ಈ ಪೈಕಿ 95 ಟಿಎಂಸಿ ಭೀಮಾ ಬೇಸಿನ್ ವ್ಯಾಪ್ತಿಗೆ ಬರುತ್ತದೆ. ನಂತರ ಇದೇ ಬೃಜೇಷಕುಮಾರ ಆಯೋಗದ ಮುಂದೆ ಅಕ್ರಮವಾಗಿ 49.5 ಟಿಎಂಸಿ ನೀರು ಬಳಕೆಯನ್ನು ಕಾನೂನು ಪ್ರಕಾರ ಮಾಡಿಕೊಂಡಿದ್ದೇವೆ ಎಂಬ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಿನ ಕ್ರಮಕ್ಕೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ ಸಚಿವರು.

ಇದನ್ನೂ ಓದಿ: ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಮಳೆ: ಅಧಿಕಾರಿಗಳಿಗೆ ತುರ್ತು ಕ್ರಮಕ್ಕೆ ಸಿಎಂ ಸೂಚನೆ

ಸದ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ನಿಂತಿದೆ. ನೈಸರ್ಗಿಕ ವಿಕೋಪದ ಜೊತೆಗೆ ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯವೂ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಉಂಟಾದ ಪ್ರವಾಹಕ್ಕೆ ನೇರ ಕಾರಣ ಎನ್ನಲಾಗುತ್ತಿದೆ. ಒಂದೆಡೆ ಆಲಮಟ್ಟಿ ಡ್ಯಾಂ ಎತ್ತರವನ್ನು ಬೃಜೇಷಕುಮಾರ ಆಯೋಗದ ವರದಿಯಂತೆ ಕಾನೂನು ಪ್ರಕಾರ ಎತ್ತರ ಮಾಡುವುದಕ್ಕೆ ಮಹಾರಾಷ್ಟ್ರ ತಗಾದೆ ತೆಗೆಯುತ್ತಿದೆ. ಮತ್ತೊಂದೆಡೆ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನಲೆ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:07 pm, Wed, 8 October 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ