ಹಸುಗೂಸಿನೊಂದಿಗೆ ಬಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ತಸ್ಲೀಮಾ; ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದ ಆಶಾ ಕಾರ್ಯಕರ್ತೆ

| Updated By: ಆಯೇಷಾ ಬಾನು

Updated on: Mar 28, 2022 | 4:06 PM

ವಿಜಯಪುರದ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಆಗಮಿಸಿ ಮಹಿಳೆ ತಸ್ಲೀಮಾ ಮಖಾನ್ದಾರ್ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಹೊರಗಡೆ ಆಶಾ ಕಾರ್ಯಕರ್ತೆ ಬಳಿ ಮಗುವನ್ನು ಬಿಟ್ಟು ತಾಯಿ ಪರೀಕ್ಷೆಗೆ ಹಾಜರಾಗಿದ್ದಾರೆ.

ಹಸುಗೂಸಿನೊಂದಿಗೆ ಬಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ತಸ್ಲೀಮಾ; ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದ ಆಶಾ ಕಾರ್ಯಕರ್ತೆ
ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದ ಆಶಾ ಕಾರ್ಯಕರ್ತೆ
Follow us on

ವಿಜಯಪುರ: ಮಹಾಮಾರಿ ಕೊರೊನಾ(Coronavirus) ಹಿನ್ನೆಲೆ ಕಳೆದ ಎರಡು ವರ್ಷದಿಂದ ಮನೆಯಲ್ಲೇ ಶಿಕ್ಷಣ ಪಡೆಯುತ್ತಿದ್ದ ಮಕ್ಕಳು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ(SSLC Exam) ಎದುರಿಸಿದ್ದಾರೆ. ಹಿಜಾಬ್(Hijab) ವಿವಾದದ ಗೊಂದಲದ ನಡುವೆಯೇ ಮೊದಲ ಪರೀಕ್ಷೆ ಮುಗಿದಿದೆ. ಸದ್ಯ ಇದರ ನಡುವೆ ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಪರೀಕ್ಷಾರ್ಥಿ ಮಹಿಳೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿರುವಂತಹ ಘಟನೆ ನಡೆದಿದೆ.

ವಿಜಯಪುರದ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪರೀಕ್ಷಾ ಕೇಂದ್ರದಲ್ಲಿ ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಆಗಮಿಸಿ ಮಹಿಳೆ ತಸ್ಲೀಮಾ ಮಖಾನ್ದಾರ್ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಹೊರಗಡೆ ಆಶಾ ಕಾರ್ಯಕರ್ತೆ ಬಳಿ ಮಗುವನ್ನು ಬಿಟ್ಟು ತಾಯಿ ಪರೀಕ್ಷೆಗೆ ಹಾಜರಾಗಿದ್ದಾರೆ. ಒಂದು ಕಡೆ ತಾಯಿ ಪರೀಕ್ಷೆ ಬರೆದರೆ ಮತ್ತೊಂದು ಕಡೆ ಆಶಾ ಕಾರ್ಯಕರ್ತೆ ಉಮಾ ಶಾರದಹಳ್ಳಿ ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮಗುವಿನ ಆರೈಕೆ ಮಾಡಿ ಮಾನವೀಯತೆ ಮೆರೆದ ಆಶಾ ಕಾರ್ಯಕರ್ತೆ

ರಾಜ್ಯದಲ್ಲಿ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ
ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಶುರುವಾಗಿದೆ. ತರಗತಿಯೊಳಗೆ ಹಿಜಾಬ್ಗೆ ಅವಕಾಶವಿಲ್ಲ ಅಂತ ಹೈಕೋರ್ಟ್ ಹೇಳಿದೆ. ಹಿಜಾಬ್ ಧರಿಸಿದವ್ರನ್ನ ಕ್ಲಾಸ್ಗೆ ಕೂರಿಸಲ್ಲ ಸರ್ಕಾರ ಎಚ್ಚರಿಕೆ ಕೊಟ್ಟಿದೆ. ಹೀಗಾಗಿ, ಬಹುತೇಕ ಮಕ್ಕಳು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ.

ರಾಜ್ಯದ ಪರೀಕ್ಷಾ ಕೇಂದ್ರಗಳ ಸುತ್ತ 144 ಸೆಕ್ಷನ್
ಇಂದು ಬೆಳಗ್ಗೆ 10.30ರಿಂದ 1.45ರ ತನಕ ಪರೀಕ್ಷೆ ನಡೆದಿದೆ. ಈ ಸಲವೂ ಕೊರೊನಾ ನಿಯಮ ಪಾಲನೆಯೊಂದಿಗೆ ಪರೀಕ್ಷೆ ನಡೆದಿದ್ದು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಶಾಲೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕೊರೊನಾ, ಹಿಜಾಬ್ ಗಲಾಟೆಯಿಂದ ಈ ಸಲ ಸಂಪೂರ್ಣ ತರಗತಿಗಳು ನಡೆದಿಲ್ಲ. ಹೀಗಾಗಿ, ಈ ಬಾರಿ ಶೇಕಡಾ 20ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಶೇಕಡಾ 80ರಷ್ಟು ಪಠ್ಯಕ್ಕೆ ಪರೀಕ್ಷೆ ನಡೆಯಲಿದೆ. 20 ಇಂಟರ್ನಲ್ಸ್ ಇರಲಿದ್ದು, 80 ಅಂಕಗಳಿಗೆ ವಿದ್ಯಾರ್ಥಿಗಳು ಎಕ್ಸಾಂ ಬರೆಯಬೇಕು.

ಇದನ್ನೂ ಓದಿ: Virender Sehwag: 10 ಕೋಟಿಯ ಆಟಗಾರ ಮಕ್ಕಳ ಥರ ಆಡಿದ್ರೆ RCB ಹೇಗೆ ಗೆಲ್ಲುತ್ತೆ?

ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ: 3444 ಕೇಂದ್ರಗಳಲ್ಲಿ ಸಕಲ ಸಿದ್ಧತೆ

Published On - 2:54 pm, Mon, 28 March 22