AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virender Sehwag: 10 ಕೋಟಿಯ ಆಟಗಾರ ಮಕ್ಕಳ ಥರ ಆಡಿದ್ರೆ RCB ಹೇಗೆ ಗೆಲ್ಲುತ್ತೆ?

IPL 2022: ಸೋಲಿಗೆ ಕಾರಣವೇನು ಎಂಬ ಚರ್ಚೆಗಳು ಶುರುವಾಗಿದೆ. ಕೆಲವರು ಫೀಲ್ಡಿಂಗ್​ ಬಗ್ಗೆ ಅಪಸ್ವರ ಎತ್ತಿದರೆ, ಮತ್ತೆ ಕೆಲವರು ಬೌಲಿಂಗ್ ಬಗ್ಗೆ ನೇರವಾಗಿ ಟೀಕೆ ಮಾಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾತ್ರ ಆರ್​ಸಿಬಿ ಸೋಲಿಗೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Virender Sehwag: 10 ಕೋಟಿಯ ಆಟಗಾರ ಮಕ್ಕಳ ಥರ ಆಡಿದ್ರೆ RCB ಹೇಗೆ ಗೆಲ್ಲುತ್ತೆ?
IPL 2022 RCB
TV9 Web
| Updated By: ಝಾಹಿರ್ ಯೂಸುಫ್|

Updated on: Mar 28, 2022 | 2:36 PM

Share

ಬರೋಬ್ಬರಿ 205 ರನ್​…ಈ ಬೃಹತ್ ಮೊತ್ತ ನೋಡಿದವರು ಆರ್​ಸಿಬಿ (RCB) ಗೆಲುವು ಖಚಿತ ಎಂದೇ ಷರಾ ಬರೆದಿದ್ದರು. ಏಕೆಂದರೆ ಪಂಜಾಬ್ ಕಿಂಗ್ಸ್ (PBKS) ಸಂಪೂರ್ಣ ಹೊಸ ತಂಡವಾಗಿತ್ತು. ಈ ಹಿಂದಿನ ಪಂಜಾಬ್ ತಂಡ ಕಿಂಗ್ ಕೆಎಲ್ ರಾಹುಲ್ ಇಲ್ಲ. ಇನ್ನು ಪಂದ್ಯದ ಗತಿ ಬದಲಿಸಬಲ್ಲ ಕ್ರಿಸ್ ಗೇಲ್ ಕೂಡ ಈ ಬಾರಿ ತಂಡದಲ್ಲಿಲ್ಲ. ಇತ್ತ ಆರ್​ಸಿಬಿ ತಂಡದಲ್ಲಿ ಹರ್ಷಲ್ ಪಟೇಲ್, ಸಿರಾಜ್​ನಂತಹ ಅತ್ಯುತ್ತಮ ಬೌಲರ್​ಗಳಿದ್ದರು. ಇವೆಲ್ಲದರ ಜೊತೆಗೆ ಅನುಭವಿ ನಾಯಕ ಫಾಫ್ ಡುಪ್ಲೆಸಿಸ್ ಅವರ ತಂತ್ರಗಾರಿಕೆ ಕೂಡ ಆರ್​ಸಿಬಿ ಜೊತೆಗಿತ್ತು. ಆದರೆ ಪಂಜಾಬ್ ಕಿಂಗ್ಸ್ ಆಟಗಾರರು ಎಲ್ಲಾ ಲೆಕ್ಕಚಾರಗಳನ್ನು ತಲೆಕೆಳಗಾಗಿಸಿದ್ದರು. ಒಂದು ಓವರ್​ ಬಾಕಿ ಇರುವಂತೆಯೇ 208 ರನ್​ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಹೀನಾಯ ಸೋಲಿನ ಬೆನ್ನಲ್ಲೇ ಇದೀಗ ಆರ್​ಸಿಬಿ ಬೌಲರುಗಳ ಪ್ರದರ್ಶನದ ಬಗ್ಗೆ ಪ್ರಶ್ನೆಗಳೆದ್ದಿವೆ. ಅಷ್ಟೇ ಅಲ್ಲದೆ ಸೋಲಿನ ಕಾರಣವೇನು ಎಂಬ ಚರ್ಚೆಗಳು ಶುರುವಾಗಿದೆ. ಕೆಲವರು ಫೀಲ್ಡಿಂಗ್​ ಬಗ್ಗೆ ಅಪಸ್ವರ ಎತ್ತಿದರೆ, ಮತ್ತೆ ಕೆಲವರು ಬೌಲಿಂಗ್ ಬಗ್ಗೆ ನೇರವಾಗಿ ಟೀಕೆ ಮಾಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾತ್ರ ಆರ್​ಸಿಬಿ ಸೋಲಿಗೆ ಕಾರಣವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪಂದ್ಯದ 17ನೇ ಓವರ್​ನಲ್ಲಿ ಹರ್ಷಲ್ ಪಟೇಲ್ ಎಸೆತದಲ್ಲಿ ಅನೂಜ್ ರಾವತ್ ಓಡಿಯನ್ ಸ್ಮಿತ್ ಅವರ ಕ್ಯಾಚ್ ಕೈಚೆಲ್ಲಿದ್ದರು. ಈ ವೇಳೆ ಸ್ಮಿತ್ ಕೇವಲ 1 ರನ್​ ಮಾತ್ರಗಳಿಸಿದ್ದರು. ಅನೂಜ್ ರಾವತ್ ಬಿಟ್ಟಿರುವ ಕ್ಯಾಚ್​ನಿಂದಾಗಿ ಆರ್​ಸಿಬಿ ಸೋತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ನನ್ನ ಪ್ರಕಾರ ಆರ್​ಸಿಬಿ ಸೋಲಿಗೆ ಕಾರಣ ಅನೂಜ್ ಅಲ್ಲ, ಬದಲಾಗಿ ಹರ್ಷಲ್ ಪಟೇಲ್ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ಅನೂಜ್ ರಾವತ್ ಕ್ಯಾಚ್ ಬಿಟ್ಟ ಬಳಿಕ ಓಡಿಯನ್ ಸ್ಮಿತ್ 3 ಸಿಕ್ಸರ್​ನೊಂದಿಗೆ ಕೇವಲ 8 ಎಸೆತಗಳಲ್ಲಿ 25 ರನ್​ ಬಾರಿಸಿ ಪಂದ್ಯದ ಗತಿ ಬದಲಿಸಿದ್ದರು. ಆದರೆ ಇದಕ್ಕೆ ಕ್ಯಾಚ್ ಬಿಟ್ಟಿದ್ದು ಮಾತ್ರ ಕಾರಣವಲ್ಲ. ಓಡಿಯನ್ ಸ್ಮಿತ್ ಅವರ ರನ್ ಔಟ್ ಅವಕಾಶವನ್ನು ಕೈಚೆಲ್ಲಿದ್ದೇ ಸೋಲಿಗೆ ಪ್ರಮುಖ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ.

‘ಅನೂಜ್ ರಾವತ್ ಕ್ಯಾಚ್‌ಗಳನ್ನು ಕೈಬಿಟ್ಟಿರುವ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಏಕೆಂದರೆ ಕ್ಯಾಚ್‌ಗಳು ಕೈತಪ್ಪುತ್ತಿರುತ್ತವೆ. ನನ್ನ ಪ್ರಕಾರ ರನ್​ಔಟ್ ಅವಕಾಶವನ್ನು ಹರ್ಷಲ್ ಪಟೇಲ್ ಕೈಬಿಟ್ಟಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು. ಓಡಿಯನ್ ಸ್ಮಿತ್​ಗೆ ಕ್ಯಾಚ್ ಹೊರತಾಗಿಯೂ ಮತ್ತೊಂದು ಜೀವದಾನ ನೀಡಲಾಗಿತ್ತು. 17ನೇ ಓವರ್‌ನ ಐದನೇ ಎಸೆತದಲ್ಲಿ ಶಾರುಖ್ ಖಾನ್ ಶಾಟ್ ಆಡಿದ ಚೆಂಡು ನೇರವಾಗಿ ಕವರ್ಸ್ ಫೀಲ್ಡರ್ ಕೈ ಸೇರಿತು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿ ನಿಂತಿದ್ದ ಓಡಿಯನ್ ಸ್ಮಿತ್ ಕ್ರೀಸ್ ಬಿಟ್ಟು ಬಹಳ ದೂರ ಸಾಗಿದ್ದರು. ಫೀಲ್ಡರ್ ಹರ್ಷಲ್ ಪಟೇಲ್ ಕಡೆಗೆ ಚೆಂಡನ್ನು ಎಸೆದರು. ಹರ್ಷಲ್ ಪಟೇಲ್ ಚೆಂಡನ್ನು ಹಿಡಿದರೂ ಅದನ್ನು ತಕ್ಷಣವೇ ವಿಕೆಟ್‌ಗೆ ತಾಗಿಸಲಿಲ್ಲ. ಅಂದರೆ ಹರ್ಷಲ್ ಪಟೇಲ್ ಒಂದು ಸೆಕೆಂಡ್​ನ ಅಂತರದಲ್ಲಿ ಸ್ಮಿತ್​ಗೆ ಜೀವದಾನ ನೀಡಿದ್ದರು. ಇದುವೇ ಸೋಲಿಗೆ ಕಾರಣವಾಯಿತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಅಂದರೆ 10.75 ಕೋಟಿಗೆ ಖರೀದಿಸಿದ ಆಟಗಾರನು ಇಂತಹ ಬಾಲಿಶ ತಪ್ಪು ಮಾಡಿದರೆ RCB ಹೇಗೆ ಗೆಲ್ಲುತ್ತದೆ? ಎಂದು ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಆರ್​ಸಿಬಿ ಐಪಿಎಲ್ ಅಭಿಯಾನವನ್ನು ಸೋಲಿನೊಂದಿಗೆ ಆರಂಭಿಸಿದೆ. ಇದಾಗ್ಯೂ ಆರ್​ಸಿಬಿ ಪರ ಬ್ಯಾಟ್ಸ್​ಮನ್​ಗಳು ಅಬ್ಬರಿಸಿರುವ ಮೂಲಕ ಹೊಸ ಭರವಸೆಯನ್ನು ಹುಟ್ಟುಹಾಕಿದ್ದಾರೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ