Faf Du Plessis: ಪಂದ್ಯದ ನಡುವೆ ಮಿ. 360 ಎಬಿಡಿ ಅವತಾರ ತಾಳಿದ ಫಾಫ್ ಡುಪ್ಲೆಸಿಸ್: ವೈರಲ್ ವಿಡಿಯೋ ನೋಡಿ

Faf Du Plessis Reminds Mr. 360 AB De Villiers: ಪಂಜಾಬ್ ಕಿಂಗ್ಸ್ ವಿರುದ್ಧ ಫಾಫ್ ಡುಪ್ಲೆಸಿಸ್ 57 ಎಸೆತಗಳಲ್ಲಿ 3 ಫೋರ್ ಮತ್ತು 7 ಅಮೋಘ ಸಿಕ್ಸರ್​ಗಳ ಮೂಲಕ 88 ರನ್ ಚಚ್ಚಿದರು. ಇದರ ನಡುವೆ ಡುಪ್ಲೆಸಿಸ್ ಅವರು. ಮಿ. 360 ಎಬಿ ಡಿವಿಲಿಯರ್ಸ್ ಅವತಾರವನ್ನೂ ತಾಳಿದರು.

Faf Du Plessis: ಪಂದ್ಯದ ನಡುವೆ ಮಿ. 360 ಎಬಿಡಿ ಅವತಾರ ತಾಳಿದ ಫಾಫ್ ಡುಪ್ಲೆಸಿಸ್: ವೈರಲ್ ವಿಡಿಯೋ ನೋಡಿ
Faf Du Plessis AB De Villiers and Virat Kohli
Follow us
TV9 Web
| Updated By: Vinay Bhat

Updated on: Mar 28, 2022 | 11:35 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ (Faf Duplessis) ಐಪಿಎಲ್ 2022ರ ಪಂಜಾಬ್ ಕಿಂಗ್ಸ್ (PBKS vs RCB) ವಿರುದ್ಧದ ಮೊದಲ ಪಂದ್ಯದಲ್ಲೇ ಅಬ್ಬರಿಸಿದರು. ನಾಯಕನ ಆಟವಾಡಿದ ಫಾಫ್ ಕೇವಲ 57 ಎಸೆತಗಳಲ್ಲಿ 3 ಫೋರ್ ಮತ್ತು ಬರೋಬ್ಬರಿ 7 ಅಮೋಘ ಸಿಕ್ಸರ್​ಗಳ ಮೂಲಕ 88 ರನ್ ಚಚ್ಚಿದರು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ಫಾಪ್ 30 ಎಸೆತಗಳಲ್ಲಿ ಗಳಿಸಿದ್ದು ಕೇವಲ 17 ರನ್​ಗಳನ್ನು ಮಾತ್ರ. ಆದರೆ, ನಂತರ ಶುರುವಾಗಿದ್ದು ಬೌಂಡರಿ, ಸಿಕ್ಸರ್​ಗಳ ಸುರಿ ಮಳೆ. ನಂತರದ 21 ಎಸೆತಗಳಲ್ಲಿ 71 ರನ್ ಸಿಡಿಸಿ ಮನಬಂದಂತೆ ಬ್ಯಾಟ್ ಬೀಸಿ ಪಂಜಾಬ್ ಬೌಲರ್​ಗಳ ಬೆಂಡೆತ್ತಿದರು. ಜೊತೆಗೆ 65 ರನ್​ ಗಳಿಸಿದ ವೇಳೆ ಫಾಫ್ ಐಪಿಎಲ್​ನಲ್ಲಿ 3 ಸಾವಿರ ರನ್ ಪೂರೈಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಇದರ ನಡುವೆ ಡುಪ್ಲೆಸಿಸ್ ಅವರು. ಮಿ. 360 ಎಬಿ ಡಿವಿಲಿಯರ್ಸ್ (AB de Villiers) ಅವತಾರವನ್ನೂ ತಾಳಿದರು.

ಹೌದು, ಆರ್​ಸಿಬಿ ತಂಡದ ಆಪತ್ಬಾಂಧವ ಎಂದೇ ಬಿಂಬಿತವಾಗಿರುವ ಮಿ. 360 ಎಬಿ ಡಿವಿಲಿಯರ್ಸ್ ಅಲಭ್ಯತೆಯಲ್ಲಿ ಬೆಂಗಳೂರು ತಂಡದ ಮೊದಲ ಬಾರಿಗೆ ಐಪಿಎಲ್​ನಲ್ಲಿ ಕಣಕ್ಕಿಳಿದಿದೆ. ಇವರು ಇನ್ನುಮುಂದೆ ಬೆಂಗಳೂರು ತಂಡದ ಪರ ಆಡುವುದಿಲ್ಲ. ಅದೆಷ್ಟೊ ಬಾರಿ ಆರ್​ಸಿಬಿ ಪರ ಏಕಾಂಗಿಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿ ಕೊಟ್ಟ ಎಬಿಡಿ ಅನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಿವಿಲಿಯರ್ಸ್​ ಇಲ್ಲದೆ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಒಂದುಕ್ಷಣ ಇವರನ್ನು ನೆನಪಿಸಿಕೊಂಡರು. ಅದು ಫಾಫ್ ಡುಪ್ಲೆಸಿಸ್ ಮೂಲಕ.

ಆರ್​ಸಿಬಿ ಬ್ಯಾಟಿಂಗ್ ಇನ್ನಿಂಗ್ಸ್​ನ 13ನೇ ಓವರ್ ಬೌಲಿಂಗ್ ಮಾಡಲು ಓಡೆನ್ ಸ್ಮಿತ್ ಬಂದರು. ಈ ಓವರ್​ನಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಫಾಫ್ ಬರೋಬ್ಬರಿ 16 ರನ್​ಗಳು ಹರಿದುಬಂದವು. ಅದರಲ್ಲೂ ಕೊನೇ ಎಸೆತದಲ್ಲಿ ವಿಕೆಟ್ ಹಿಂಬದಿಗೆ ಥೇಟ್ ಎಬಿಡಿ ಸಿಕ್ಸ್ ಸಿಡಿಸುವ ರೀತಿಯಲ್ಲೇ ಫಾಫ್ ಕೂಡ ಸಿಕ್ಸ್ ಬಾರಿಸಿ ಅಭಿಮಾನಿಗಳ ಮನಗೆದ್ದರು. ಸ್ಮಿತ್ ಅವರ ಯಾರ್ಕರ್ ಎಸೆತವನ್ನು ಚೆನ್ನಾಗಿ ಅರಿತ ಡುಪ್ಲೆಸಿಸ್ ಕ್ರೀಸ್​​ನಲ್ಲಿ ಹಿಂಬದಿಗೆ ತಿರುಗಿ ಫೈನ್​ಲೆಗ್ ಮೂಲಕ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದರ ನಡುವೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಡುವಣ ಫೋಟೋ ಕೂಡ ವೈರಲ್ ಆಗಿದೆ. ಅಂದು ವಿರಾಟ್‌ ಕೊಹ್ಲಿ-ಎಬಿ ಡಿವಿಲಿಯರ್ಸ್, ಇಂದು ವಿರಾಟ್‌ ಕೊಹ್ಲಿ ಮತ್ತು ಫಾಫ್‌ ಡು ಪ್ಲೆಸಿಸ್‌ ಎಂದು ಹೇಳುವ ಮೂಲಕ ಫ್ಯಾನ್ಸ್ ಭಾವುಕರಾಗಿದ್ದಾರೆ. ಹಲವು ವರ್ಷಗಳ ಕಾಲ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೋಡಿಯನ್ನು ಕಣ್ತುಂಬಿಸಿಕೊಂಡಿದ್ದ ಫ್ಯಾನ್ಸ್, ಇದೀಗ ಕೊಹ್ಲಿ ಜೊತೆ ಫಾಫ್‌ ಡುಪ್ಲೆಸಿಸ್‌ ಅವರನ್ನು ನೋಡುವ ಮೂಲಕ ಖುಷಿ ಪಡುತ್ತಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 205 ರನ್​ ಗಳಿಸಿದೆ. ಆರ್​ಸಿಬಿ ಪರ ಫಾಫ್ 88, ಅನೂಜ್ ರಾವತ್ 21, ಕೊಹ್ಲಿ 41 ಮತ್ತು ದಿನೇಶ್ ಕಾರ್ತಿಕ್ 31 ರನ್​ ಗಳಿಸಿ ಮಿಂಚಿದರು. ಇದಕ್ಕೆ ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ (43ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್), ಭಾನುಕ ರಾಜಪಕ್ಷೆ (43ರನ್, 22 ಎಸೆತ, 2 ಬೌಂಡರಿ, 4 ಸಿಕ್ಸರ್), ಒಡೆನ್ ಸ್ಮಿತ್ (25*ರನ್, 8 ಎಸೆತ, 1 ಬೌಂಡರಿ, 3 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 208 ರನ್ ಬಾರಿಸಿ ಒಂದು ಓವರ್ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

Faf du Plessis: ಈ ಸೋಲಿಗೆ ಯಾರು ಹೊಣೆ?: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಡುಪ್ಲೆಸಿಸ್ ಹೇಳಿದ್ದೇನು ನೋಡಿ

PV Sindhu: ದಾಖಲೆಯೊಂದಿಗೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು: ಪ್ರಧಾನಿ ಮೋದಿ ಅಭಿನಂದನೆ

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ