ಸಂಚಾರ ಪೊಲೀಸರಿಂದ ಪಿಡಿಎ ಉಪಕರಣಗಳನ್ನು ಹಿಂಪಡೆಯಲಾಗಿದೆ ಎಂಬ ಸುದ್ದಿ ಸುಳ್ಳು

| Updated By: ganapathi bhat

Updated on: Aug 10, 2021 | 5:40 PM

Traffic Rules: ಜಂಟಿ ಪೊಲೀಸ್ ಆಯುಕ್ತರನ್ನು, ಸಂಚಾರ ಪೊಲೀಸರನ್ನು ಯಾವ ಮಾಧ್ಯಮದ ಪ್ರತಿನಿಧಿಯೂ ಸಂಪರ್ಕಿಸಿರುವುದಿಲ್ಲ. ಈ ವಿಚಾರಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟೀಕರಿಸಿ ಬೆಂಗಳೂರು ನಗರ ಸಂಚಾರ, ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂರೇಗೌಡ ಸ್ಪಷ್ಟನೆ ನೀಡಿದ್ದಾರೆ.

ಸಂಚಾರ ಪೊಲೀಸರಿಂದ ಪಿಡಿಎ ಉಪಕರಣಗಳನ್ನು ಹಿಂಪಡೆಯಲಾಗಿದೆ ಎಂಬ ಸುದ್ದಿ ಸುಳ್ಳು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೆಲವು ಮಾಧ್ಯಮಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಸಂಚಾರ ಪೊಲೀಸರು ಸಂಚಾರಿ ನಿಯಮ ಜಾರಿ ಮಾಡಲು ಉಪಯೋಗಿಸುವ ಪಿಡಿಎ ಉಪಕರಣಗಳನ್ನು ವಾಪಸ್ ಪಡೆಯಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಹಾಗೂ ಪೊಲೀಸರು ಪಿಡಿಎ ಮೂಲಕ ಯಾವುದೇ ಸಂಚಾರ ನಿಯಮ ಉಲ್ಲಂಘನೆಗಳನ್ನು ದಾಖಲಿಸಬಾರದಾಗಿ ತಿಳಿಸುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ, ಈ ಸುದ್ದಿಗಳು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟೀಕರಣ ಲಭ್ಯವಾಗಿದೆ.

ಪೊಲೀಸರು ವಾಹನ ಸವಾರರು ನಿಯಮ ಉಲ್ಲಂಘಿಸಿದರೆ ಹಾಕುತ್ತಿದ್ದ ದಂಡ, ಪಿಡಿಎ ಉಪಕರಣಗಳನ್ನು ಹಿಂಪಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಭಾರೀ ಚರ್ಚೆ ನಡೆದಿತ್ತು. ಹಲವರು ಇದು ಉತ್ತಮ ಬೆಳವಣಿಗೆ, ನೂತನ ಸಚಿವರಿಗೆ ಅಭಿನಂದನೆ ಎಂಬ ಪೋಸ್ಟ್​ಗಳನ್ನು ಕೂಡ ಹಂಚಿಕೊಂಡಿದ್ದರು. ಆದರೆ, ಈ ಎಲ್ಲಾ ಸುದ್ದಿಗಳು ಕೇವಲ ವದಂತಿ ಅಷ್ಟೇ ಎಂದು ಈಗ ತಿಳಿದುಬಂದಿದೆ.

ಇಂತಹ ಯಾವುದೇ ಸೂಚನೆಯನ್ನು ನೀಡಿರುವುದಿಲ್ಲ. ಹಾಗೂ ಪಿಡಿಎಗಳನ್ನು ವಾಪಸ್ ಪಡೆದಿರುವುದಿಲ್ಲ. ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಪೊಲೀಸರು ಪಿಡಿಎಗಳನ್ನು ಹಿಂದೆ ಪಡೆದಿರುವ ಬಗ್ಗೆ ಹೇಳಿಕೆ ನೀಡಿರುತ್ತಾರೆ ಎಂದು ಕೆಲವು ಮಾಧ್ಯಮಗಳು ಪ್ರತಿಬಿಂಬಿಸಿ ಪ್ರಚಾರ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ಕೊಡಲಾಗಿದೆ.

ಈ ಸಂಬಂಧ ಜಂಟಿ ಪೊಲೀಸ್ ಆಯುಕ್ತರನ್ನು, ಸಂಚಾರ ಪೊಲೀಸರನ್ನು ಯಾವ ಮಾಧ್ಯಮದ ಪ್ರತಿನಿಧಿಯೂ ಸಂಪರ್ಕಿಸಿರುವುದಿಲ್ಲ. ಈ ವಿಚಾರಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟೀಕರಿಸಿ ಬೆಂಗಳೂರು ನಗರ ಸಂಚಾರ, ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್. ರವಿಕಾಂರೇಗೌಡ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರೇ, ಈ ರಸ್ತೆಗಳಲ್ಲಿ ಇನ್ನೂ 15 ದಿನ ಟ್ರಾಫಿಕ್​ ಜಾಮ್​; ರಸ್ತೆಗಿಳಿಯುವ ಮುನ್ನ ಯೋಚಿಸಿ

ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

(Viral News on Traffic Rules PDA Machines Traffic Police is totally False and Fake)

Published On - 5:31 pm, Tue, 10 August 21