ಬೆಂಗಳೂರಿಗರೇ, ಈ ರಸ್ತೆಗಳಲ್ಲಿ ಇನ್ನೂ 15 ದಿನ ಟ್ರಾಫಿಕ್ ಜಾಮ್; ರಸ್ತೆಗಿಳಿಯುವ ಮುನ್ನ ಯೋಚಿಸಿ
ಸದರಿ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಇನ್ನಿತರ ಕೆಲಸಗಳು ಸುಮಾರು 15 ದಿನಗಳ ಕಾಲ ಮುಂದುವರೆಯಲಿದ್ದು, ಅಲ್ಲಿಯ ತನಕವೂ ಜನರಿಗೆ ಟ್ರಾಫಿಕ್ ಜಾಮ್ ಕಾಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ರಸ್ತೆಗಳಲ್ಲಿ ಸಂಚರಿಸುವ ಜನರು ತುರ್ತು ಕೆಲಸಗಳಿದ್ದಾಗ ಪರ್ಯಾಯ ಮಾರ್ಗ ನೋಡಿಕೊಳ್ಳುವುದೇ ಉತ್ತಮ.
ಬೆಂಗಳೂರು: ಬೆಂಗಳೂರಿನ ಕೆಲವೆಡೆ ವೈಟ್ ಟಾಪಿಂಗ್ ಕಾಮಗಾರಿ ಆಗುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್, SJP ರಸ್ತೆಯ ಜಂಕ್ಷನ್‌ನಲ್ಲಿ ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಮಾರ್ಕೆಟ್ ಬಳಿ ಇರುವ ಮೇಲ್ಸೇತುವೆಯ ಒಂದು ಕಡೆ ರಸ್ತೆ ಬಂದ್ ಆಗಿದೆ. ಹೀಗಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನಗಳು ಸಾಲುಗಟ್ಟಿ ನಿಂತ ಕಾರಣ ತುರ್ತು ಕೆಲಸಗಳ ನಿಮಿತ್ತ ರಸ್ತೆಗಿಳಿದಿದ್ದ ಜನರು ಒದ್ದಾಡುತ್ತಿದ್ದಾರೆ.
ಮೈಸೂರು ರಸ್ತೆಯಿಂದ ಟೌನ್ ಹಾಲ್ ಕಡೆಗೆ ಬರುವ ಡೌನ್ ರ್ಯಾಪ್ ಬಳಿಯ ಎಸ್.ಜೆ.ಪಿ ರಸ್ತೆಯ ಜಂಕ್ಷನ್‌ನಲ್ಲಿ ವೈಟ್‌ಟಾಪಿಂಗ್ ಜತೆಗೆ ಅಡ್ಡಮೋರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಫ್ಲೈಓವರ್ ಮೂಲಕ ನೇರವಾಗಿ ಟೌನ್ ಹಾಲ್ ಕಡೆಗೆ ಹೋಗುವ ರಸ್ತೆ ಬಂದ್ ಆಗಿದೆ. ಸದ್ಯ ಟೌನ್ ಹಾಲ್ ಕಡೆ ಹೋಗುವ ವಾಹನಗಳು ಕೆ.ಆರ್ ಮಾರುಕಟ್ಟೆ ಒಳಗೆ ಹೋಗಬೇಕಾಗಿದ್ದು, ವಾಹನ ದಟ್ಟಣೆ ಉಂಟಾಗಿದೆ.
ಬೆಂಗಳೂರಿಗರೇ ಇನ್ನೂ 15 ದಿನ ಟ್ರಾಫಿಕ್ ಜಾಮ್ ಸದರಿ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಇನ್ನಿತರ ಕೆಲಸಗಳು ಸುಮಾರು 15 ದಿನಗಳ ಕಾಲ ಮುಂದುವರೆಯಲಿದ್ದು, ಅಲ್ಲಿಯ ತನಕವೂ ಜನರಿಗೆ ಟ್ರಾಫಿಕ್ ಜಾಮ ಕಾಟ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ರಸ್ತೆಗಳಲ್ಲಿ ಸಂಚರಿಸುವ ಜನರು ತುರ್ತು ಕೆಲಸಗಳಿದ್ದಾಗ ಪರ್ಯಾಯ ಮಾರ್ಗ ನೋಡಿಕೊಳ್ಳುವುದೇ ಉತ್ತಮವಾಗಿದ್ದು, ಕಾರು, ಬೈಕ್ ರಸ್ತೆಗಿಳಿಸುವ ಮುನ್ನ ಯೋಚಿಸುವುದು ಒಳಿತು.
(Bengaluru to face traffic jam in these routes for another 15 days think before travel)