ಆಗ ಬಿಳಿ ಬ್ರಿಟಿಷರು ನಮ್ಮನ್ನ ಆಳಿದ್ರು, ಈಗ ಕಪ್ಪು ಬ್ರಿಟಿಷರು ನಮ್ಮನ್ನ ಆಳುತ್ತಿದ್ದಾರೆ: ಬಿ ಕೆ ಹರಿಪ್ರಸಾದ್ ವ್ಯಾಖ್ಯಾನ

bk hariprasad: ಬ್ರಿಟಿಷ್ ಸಂಸ್ಕೃತಿ ಈಗಿನ ಬಿಜೆಪಿ ಸರ್ಕಾರದಲ್ಲಿ ಇದೆ. ಆಗ ಬಿಳಿ ಬ್ರಿಟಿಷರು ನಮ್ಮನ್ನ ಆಳಿದ್ರು. ಈಗ ಕಪ್ಪು ಬ್ರಿಟಿಷರು ನಮ್ಮನ್ನ ಆಳುತ್ತಿದ್ದಾರೆ ಎಂದೂ ಬಿ ಕೆ ಹರಿಪ್ರಸಾದ್ ವ್ಯಾಖ್ಯಾನಿಸಿದರು.

ಆಗ ಬಿಳಿ ಬ್ರಿಟಿಷರು ನಮ್ಮನ್ನ ಆಳಿದ್ರು, ಈಗ ಕಪ್ಪು ಬ್ರಿಟಿಷರು ನಮ್ಮನ್ನ ಆಳುತ್ತಿದ್ದಾರೆ: ಬಿ ಕೆ ಹರಿಪ್ರಸಾದ್ ವ್ಯಾಖ್ಯಾನ
ಬಿ.ಕೆ. ಹರಿಪ್ರಸಾದ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 09, 2021 | 12:50 PM

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿರಲಿಲ್ಲ. ಇದನ್ನ ಮ್ಯಾಜಿಸ್ಟ್ರೇಟ್ ಮುಂದೆ ಸ್ವತಃ ವಾಜಪೇಯಿ ಅವರೇ ಹೇಳಿಕೆ ನೀಡಿದ್ದರು ಎದು ಕಾಂಗ್ರೆಸ್​ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಬ್ರಿಟಿಷ್ ಸಂಸ್ಕೃತಿ ಈಗಿನ ಬಿಜೆಪಿ ಸರ್ಕಾರದಲ್ಲಿ ಇದೆ. ಆಗ ಬಿಳಿ ಬ್ರಿಟಿಷರು ನಮ್ಮನ್ನ ಆಳಿದ್ರು. ಈಗ ಕಪ್ಪು ಬ್ರಿಟಿಷರು ನಮ್ಮನ್ನ ಆಳುತ್ತಿದ್ದಾರೆ ಎಂದು ಬಿ ಕೆ ಹರಿಪ್ರಸಾದ್ ಇದೇ ಸಂದರ್ಭದಲ್ಲಿ ವ್ಯಾಖ್ಯಾನಿಸಿದರು.

ಕ್ವಿಟ್ ಇಂಡಿಯಾ ಚಳವಳಿ (Quit India Movement) ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿತು. ಕಾರ್ಯಕ್ರಮದಲ್ಲಿ ಬಿ ಕೆ ಹರಿಪ್ರಸಾದ್ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಆರ್.ವಿ.ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಗಿಯಾಗಿದ್ದರು.

ವಾಜಪೇಯಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ, ಮ್ಯಾಜಿಸ್ಟ್ರೇಟ್ ಮುಂದೆ ಅವರೇ ಹೇಳಿದ್ದರು:

ವಾಜಪೇಯಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಸ್ವತಃ ಅವರೇ ಹೇಳಿಕೆ ನೀಡಿದ್ದರು. ಇಂತಹ ವಾಜಪೇಯಿ ಸಹ ದೇಶದ ಪ್ರಧಾನ ಮಂತ್ರಿ ಆದರು. ಇನ್ನು ಶ್ಯಾಮ್ ಪ್ರಸಾದ್ ಮುಖರ್ಜಿ ಕ್ವಿಟ್ ಇಂಡಿಯಾ ವಿರೋಧ ಮಾಡಿದ್ದರು. ಇಂತಹವರಿಂದ ನಾವು ದೇಶ ಪ್ರೇಮ ಕಲಿಯುವ ಅಗತ್ಯ ಇಲ್ಲ ಎಂದು ಬಿ ಕೆ ಹರಿಪ್ರಸಾದ್ ಕಿಡಿಕಾರಿದರು.

ಬ್ರಿಟಿಷ್ ಸಂಸ್ಕೃತಿ ಈಗಿನ ಬಿಜೆಪಿ ಸರ್ಕಾರದಲ್ಲಿ ಇದೆ. ಆಗ ಬಿಳಿ ಬ್ರಿಟಿಷರು ನಮ್ಮನ್ನ ಆಳಿದ್ರು. ಈಗ ಕಪ್ಪು ಬ್ರಿಟಿಷರು ನಮ್ಮನ್ನ ಆಳುತ್ತಿದ್ದಾರೆ ಎಂದೂ ಬಿ ಕೆ ಹರಿಪ್ರಸಾದ್ ವ್ಯಾಖ್ಯಾನಿಸಿದರು.

ಅವತ್ತು ಕ್ವಿಟ್ ಇಂಡಿಯಾ ಚಳುವಳಿ ಆಯ್ತು; ಇವತ್ತು ಮೋದಿ‌ ಅಧಿಕಾರ ಬಿಟ್ಟು ತೊಲಗಿ:

ಅವತ್ತು ಕ್ವಿಟ್ ಇಂಡಿಯಾ ಚಳುವಳಿ ಆಯ್ತು. ಇವತ್ತು ಮೋದಿ‌ ಅಧಿಕಾರ ಬಿಟ್ಟು ತೊಲಗಿ ಎಂದು ಕಾಂಗ್ರೆಸ್ ಪ್ರತಿಭಟನೆ ‌ಮಾಡಬೇಕಾಗಿದೆ. ದೇಶವನ್ನು ಮೋದಿ ಮಾರುತ್ತಿದ್ದಾರೆ. ಸರ್ಕಾರಿ ಕಂಪನಿಗಳನ್ನು ಒಂದೊಂದೆ ಮಾರುತ್ತಿದ್ದಾರೆ. ಅದಾನಿ, ಅಂಬಾನಿಗೆ ಮೋದಿ ಮಾರುತ್ತಿದ್ದಾರೆ. ಅವತ್ತು ಈಸ್ಟ್ ಇಂಡಿಯಾ ಕಂಪನಿ‌ ಮಾತ್ರ ಇತ್ತು. ಇವತ್ತು ಅಂಬಾನಿ ಅದಾನಿ ಕಂಪನಿಗಳು ಲೂಟಿ ಹೊಡೆಯತ್ತಿವೆ. ಇತಿಹಾಸ ಮತ್ತೆ ಮರಕಳಿಸುತ್ತೆ. ಅವತ್ತು ಬ್ರಿಟಿಷ್ ವಿರುದ್ಧ ಸಿಡಿದ್ದೆದ್ದವು. ಈಗ ಮೋದಿ ವಿರುದ್ಧ ಸಿಡಿದೇಳಬೇಕು. ಭೂಮಿ, ಕೃಷಿ ಉತ್ಪನ್ನ ಎಲ್ಲವನ್ನೂ ಮೋದಿ ಮಾರುತ್ತಿದ್ದಾರೆ. ಕೇವಲ 140 ಕೋಟಿ ಜನರು ಮಾತ್ರ ಭಾರತದಲ್ಲಿ ಉಳಿದಿದ್ದೇವೆ ಎಂದು ಮೋದಿ ಸರ್ಕಾರದ ಮೇಲೆ ಕಾಂಗ್ರೆಸ್​ ನಾಯಕ ಎಸ್ ಆರ್‌ ಪಾಟೀಲ್ ಕಿಡಿ ಕಾರಿದರು.

(Now brown britishers are ruling india says karnataka congress leader bk hariprasad)

Published On - 12:15 pm, Mon, 9 August 21