Zameer Ahmed Khan: ಶಾಸಕ ಜಮೀರ್ ಮನೆ ಮೇಲೆ ಇ.ಡಿ. ರೇಡ್ ಆಗಿದ್ದೇಕೆ? ಹೆಚ್‌ಡಿ ಕುಮಾರಸ್ವಾಮಿ ಮೇಲೆ ಜಮೀರ್ ಅನುಮಾನ?
ನನ್ನ ಬೆಳವಣಿಗೆ ಸಹಿಸಲಾಗದೆ ದಾಳಿ ಮಾಡಿಸಿದ್ದಾರೆ. ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿ ಮಾಡಿಸಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಈ ಮಟ್ಟಕ್ಕೆ ಬೆಳೆಯುತ್ತೇನೆಂದು ಅವರು ನಿರೀಕ್ಷಿಸಿರಲಿಲ್ಲ. ಅವಱರು ಎಂದು ನಾನು ಹೆಸರು ಹೇಳಲು ಹೋಗಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್(Zameer Ahmed Khan) ನಿವಾಸ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿ ವಿಚಾರಣೆ ನಡೆಸಿತ್ತು. ಸತತ 23 ಗಂಟೆಗಳ ಕಾಲ ಮನೆ, ಆಫಿಸ್ ಎನ್ನದೆ ಹಲವು ಕಡೆ ಜಾಲಾಡಿತ್ತು. ಸದ್ಯ ಈಗ ಈ ವಿಚಾರದ ಬಗ್ಗೆ ಶಾಸಕ ಜಮೀರ್ ಮಾತನಾಡಿದ್ದು ನನ್ನ ಬೆಳವಣಿಗೆ ಸಹಿಸಲಾಗದೆ ದಾಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಜಮೀರ್, ನನ್ನ ಬೆಳವಣಿಗೆ ಸಹಿಸಲಾಗದೆ ದಾಳಿ ಮಾಡಿಸಿದ್ದಾರೆ. ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿ ಮಾಡಿಸಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಈ ಮಟ್ಟಕ್ಕೆ ಬೆಳೆಯುತ್ತೇನೆಂದು ಅವರು ನಿರೀಕ್ಷಿಸಿರಲಿಲ್ಲ. ಅವಱರು ಎಂದು ನಾನು ಹೆಸರು ಹೇಳಲು ಹೋಗಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ಶಾಸಕ ಜಮೀರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ನಾನು ರಾಜಕೀಯವಾಗಿ ಬೆಳೆಯಬಾರದೆಂದು ದಾಳಿ ನಡೆಸಿದ್ದಾರೆ. ಅವರೊಬ್ಬರೇ ಬೆಳೆಯಬೇಕು, ಅವರೊಬ್ಬರೇ ಮನೆ ಕಟ್ಟಬೇಕು. ನನ್ನನ್ನು ವೀಕ್ ಮಾಡಬೇಕೆಂದು ED ದಾಳಿ ಮಾಡಿಸಿದ್ದಾರೆ. ಆದರೆ ಈ ದಾಳಿಯಿಂದ ನಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ. ED ದಾಳಿ ಎದುರಿಸುವ ಶಕ್ತಿ ನನಗಿದೆ. ನನ್ನ ಜೀವನದಲ್ಲಿ ಯಾರಿಗೂ ಹೆದರಲ್ಲ, ಭಯ ಇಲ್ಲವೇ ಇಲ್ಲ. ರಾಜಕೀಯವಾಗಿಯೂ ಮುಂದಿನ ದಿನಗಳಲ್ಲಿ ಎದುರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ರು.
ಜಮೀರ್‌ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಇನ್ನು ಜಮೀರ್ ಮಾಡಿರುವ ಆರೋಪಕ್ಕೆ ರಾಮನಗರದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. 4-5 ವರ್ಷದ ಹಿಂದೆಯೇ ರಾಜಕೀಯ ಸಂಬಂಧ ಮುಗಿದಿದೆ. ಯಾರು ದೂರು ಕೊಟ್ಟು ದಾಳಿ ಮಾಡಿಸಿದ್ದಾರೆ, ಅವರನ್ನೇ ಕೇಳಲಿ. ನಾನು ತೋಟದ ಮನೆಯಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ನಾನು ರೈತನಾಗಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಜಮೀರ್ ವಿಷಯ ಕಟ್ಟಿಕೊಂಡು ನನಗೆ ಏನಾಗಬೇಕಾಗಿದೆ. ನನಗೆ ED ದಾಳಿಯ ವಿಷಯವೇ ಗೊತ್ತಿಲ್ಲ. ನನ್ನ ಮೇಲೆ ಏಕೆ ಜಮೀರ್ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಜಮೀರ್‌ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಟಿವಿ9ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇ.ಡಿ ದಾಳಿಯ ಬೆನ್ನಲ್ಲೇ ದೇವರ ಮೊರೆ ಹೋದ ಶಾಸಕ ಜಮೀರ್ ಅಹ್ಮದ್, ಅಜ್ಮೇರ್ ಯಾತ್ರೆ ಮುಗಿಸಿ ವಾಪಾಸ್
Published On - 12:40 pm, Mon, 9 August 21