AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಲೆಕ್ಕಾಚಾರ, ಒಳಾಂಗಣ ವಿನ್ಯಾಸದ ಬಗ್ಗೆ ವಿವರ ನೀಡುವುದಕ್ಕೆ 10 ದಿನ ಕಾಲಾವಕಾಶ ಕೇಳಿದ್ದೇನೆ: ಕಾಂಗ್ರೆಸ್ ಶಾಸಕ ಜಮೀರ್

ನಮ್ಮ ಮನೆಯ ಮೇಲೆ ಇ.ಡಿ(ED) ದಾಳಿ ಮಾಡಿದೆ, ಐಟಿ(IT) ಅಲ್ಲ ಎಂದು ಸ್ಪಷ್ಟಪಡಿಸಿದ ಜಮೀರ್, ದೂರು ಆಧರಿಸಿ ನಮ್ಮ ಮನೆ ಮೇಲೆ ED ದಾಳಿಯಾಗಿದೆ. ED ಅಧಿಕಾರಿಗಳ ದಾಳಿಯಿಂದ ನನಗೂ ಅಚ್ಚರಿಯಾಗಿದೆ ಎಂದರು.

ಮನೆ ಲೆಕ್ಕಾಚಾರ, ಒಳಾಂಗಣ ವಿನ್ಯಾಸದ ಬಗ್ಗೆ ವಿವರ ನೀಡುವುದಕ್ಕೆ 10 ದಿನ ಕಾಲಾವಕಾಶ ಕೇಳಿದ್ದೇನೆ: ಕಾಂಗ್ರೆಸ್ ಶಾಸಕ ಜಮೀರ್
ಶಾಸಕ ಜಮೀರ್ ಅಹ್ಮದ್ ಖಾನ್‌
TV9 Web
| Edited By: |

Updated on:Aug 09, 2021 | 1:10 PM

Share

ಬೆಂಗಳೂರು: ಜಮೀರ್ ಅಹ್ಮದ್(Zameer Ahmed Khan) ಆಸ್ತಿಪಾಸ್ತಿ ಸಂಬಂಧಿಸಿ ಇ.ಡಿ ಅಧಿಕಾರಿಗಳು ಜಮೀರ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು ಮತ್ತಷ್ಟು ದಾಖಲೆ ಕೇಳಿದ್ದಾರೆ. ಆದಷ್ಟು ಬೇಗ ಮತ್ತಷ್ಟು ಸೂಕ್ತ ದಾಖಲೆಗಳನ್ನು ಒದಗಿಸುವಂತೆ ತಿಳಿಸಿದ್ದಾರೆ. ಇದರಂತೆ ವಿವರ ನೀಡುವುದಕ್ಕೆ ಅಧಿಕಾರಿಗಳ ಬಳಿ 10 ದಿನ ಕಾಲಾವಕಾಶ ಕೇಳಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ತಿಳಿಸಿದ್ದಾರೆ.

ನಮ್ಮ ಮನೆಯ ಮೇಲೆ ಇ.ಡಿ(ED) ದಾಳಿ ಮಾಡಿದೆ, ಐಟಿ(IT) ಅಲ್ಲ ಎಂದು ಸ್ಪಷ್ಟಪಡಿಸಿದ ಜಮೀರ್, ದೂರು ಆಧರಿಸಿ ನಮ್ಮ ಮನೆ ಮೇಲೆ ED ದಾಳಿಯಾಗಿದೆ. ED ಅಧಿಕಾರಿಗಳ ದಾಳಿಯಿಂದ ನನಗೂ ಅಚ್ಚರಿಯಾಗಿದೆ. ED ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮನೆ ಲೆಕ್ಕಾಚಾರ, ಒಳಾಂಗಣ ವಿನ್ಯಾಸದ ಬಗ್ಗೆ ವಿವರ ನೀಡುವುದಕ್ಕೆ 10 ದಿನ ಕಾಲಾವಕಾಶ ಕೇಳಿದ್ದೇನೆ. ED ಅಧಿಕಾರಿಗಳಿಗೆ ಮತ್ತಷ್ಟು ವಿವರಗಳನ್ನು ನೀಡುತ್ತೇನೆ ಎಂದು ಹೇಳಿದರು.

ED ದಾಳಿಗೂ ಐಎಂಎ ಪ್ರಕರಣಕ್ಕೂ ಸಂಬಂಧವಿಲ್ಲ ED ದಾಳಿಗೂ ಐಎಂಎ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಶಾಸಕ ಜಮೀರ್ ಸ್ಪಷ್ಟನೆ ನೀಡಿದ್ದಾರೆ. ಮನೆ ವಿಚಾರವಾಗಿ ದಾಳಿ ಆಗಲ್ಲ ಎಂದು ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶೀವಕುಮಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಟಾಂಗ್ ನೀಡಿರುವ ಜಮೀರ್ ಡಿ.ಕೆ.ಶಿವಕುಮಾರ್ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೂ ED ದಾಳಿ ಆಗಿತ್ತು. ಹಾಗಾದರೆ ಡಿಕೆಶಿಗೂ ಐಎಂಎಗೂ ಸಂಬಂಧ ಇತ್ತಾ? ಎಂದು ಡಿ.ಕೆ.ಶಿವಕುಮಾರ್‌ಗೆ ಜಮೀರ್ ಪ್ರಶ್ನೆ ಮಾಡಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ ಮೇಲೆ ಜಮೀರ್ ಆರೋಪ ನನ್ನ ಬೆಳವಣಿಗೆ ಸಹಿಸಲಾಗದೆ ದಾಳಿ ಮಾಡಿಸಿದ್ದಾರೆ. ನಾನು ಈ ಹಿಂದೆ ಇದ್ದ ಪಕ್ಷದವರೇ ದಾಳಿ ಮಾಡಿಸಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಈ ಮಟ್ಟಕ್ಕೆ ಬೆಳೆಯುತ್ತೇನೆಂದು ಅವರು ನಿರೀಕ್ಷಿಸಿರಲಿಲ್ಲ. ಅವಱರು ಎಂದು ನಾನು ಹೆಸರು ಹೇಳಲು ಹೋಗಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ನಾನು ರಾಜಕೀಯವಾಗಿ ಬೆಳೆಯಬಾರದೆಂದು ದಾಳಿ ನಡೆಸಿದ್ದಾರೆ. ಅವರೊಬ್ಬರೇ ಬೆಳೆಯಬೇಕು, ಅವರೊಬ್ಬರೇ ಮನೆ ಕಟ್ಟಬೇಕು. ನನ್ನನ್ನು ವೀಕ್ ಮಾಡಬೇಕೆಂದು ED ದಾಳಿ ಮಾಡಿಸಿದ್ದಾರೆ. ಆದರೆ ಈ ದಾಳಿಯಿಂದ ನಾನು ಇನ್ನಷ್ಟು ಬಲಿಷ್ಠನಾಗಿದ್ದೇನೆ. ED ದಾಳಿ ಎದುರಿಸುವ ಶಕ್ತಿ ನನಗಿದೆ. ನನ್ನ ಜೀವನದಲ್ಲಿ ಯಾರಿಗೂ ಹೆದರಲ್ಲ, ಭಯ ಇಲ್ಲವೇ ಇಲ್ಲ. ರಾಜಕೀಯವಾಗಿಯೂ ಮುಂದಿನ ದಿನಗಳಲ್ಲಿ ಎದುರಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ರು.

ಇದನ್ನೂ ಓದಿ: Zameer Ahmed Khan: ಶಾಸಕ ಜಮೀರ್‌ ಮನೆ ಮೇಲೆ ಇ.ಡಿ. ರೇಡ್‌ ಆಗಿದ್ದೇಕೆ? ಹೆಚ್‌ಡಿ ಕುಮಾರಸ್ವಾಮಿ ಮೇಲೆ ಜಮೀರ್‌ ಅನುಮಾನ?

Published On - 1:00 pm, Mon, 9 August 21

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!