ಸ್ವಾತಂತ್ರ್ಯ ಬಂದ ಮೇಲೆ ಮೋದಿ ಹುಟ್ಟಿದ್ದು; ನಾನು ಮೋದಿಗಿಂತ ಸೀನಿಯರ್ ಗೊತ್ತಾ? ನಮಗೇ ಪಾಠ ಮಾಡ್ತಾರೆ: ಸಿದ್ದರಾಮಯ್ಯ

Quit India Movement: ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ನಾನು ಹುಟ್ಟಿದ್ದೇನೆ. ಸ್ವಾತಂತ್ರ್ಯ ಬಂದಮೇಲೆ ನರೇಂದ್ರ ಮೋದಿ ಹುಟ್ಟಿದ್ದು. ನಾನು ಪ್ರಧಾನಮಂತ್ರಿ ಮೋದಿಗಿಂತ ಸೀನಿಯರ್ ಗೊತ್ತಾ. ಕಾಂಗ್ರೆಸ್ ಪಕ್ಷಕ್ಕೆ 60 ವರ್ಷ ಅಧಿಕಾರ‌ ಕೊಟ್ಟಿದ್ದೀರಾ. ನಮಗೆ 60 ತಿಂಗಳು‌ ಕೊಡಿ ಎಂದು ಮೋದಿ‌ ಹೇಳಿದ್ದರು. 7 ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದೆಯಾ? -ಸಿದ್ದರಾಮಯ್ಯ

ಸ್ವಾತಂತ್ರ್ಯ ಬಂದ ಮೇಲೆ ಮೋದಿ ಹುಟ್ಟಿದ್ದು; ನಾನು ಮೋದಿಗಿಂತ ಸೀನಿಯರ್ ಗೊತ್ತಾ? ನಮಗೇ ಪಾಠ ಮಾಡ್ತಾರೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
TV9 Web
| Updated By: ಆಯೇಷಾ ಬಾನು

Updated on:Aug 09, 2021 | 1:42 PM

ಬೆಂಗಳೂರು: ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ನಾನು ಹುಟ್ಟಿದ್ದೇನೆ. ಸ್ವಾತಂತ್ರ್ಯ ಬಂದಮೇಲೆ ನರೇಂದ್ರ ಮೋದಿ ಹುಟ್ಟಿದ್ದು. ನಾನು ಪ್ರಧಾನಮಂತ್ರಿ ಮೋದಿಗಿಂತ ಸೀನಿಯರ್ ಗೊತ್ತಾ. ಆದ್ರೆ ಇವಾಗ ಅವರು ನಮಗೇ ಪಾಠ ಮಾಡ್ತಾರೆ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ(Siddaramaiah) ಟೀಕೆ ಮಾಡಿದ್ದಾರೆ.

ಕ್ವಿಟ್ ಇಂಡಿಯಾ ಚಳವಳಿ(Quit India Movement) ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿತು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಆರ್.ವಿ.ದೇಶಪಾಂಡೆ, ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

7 ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ಸ್ವಾತಂತ್ರ್ಯ ಬರುವುದಕ್ಕೂ ಮೊದಲೇ ನಾನು ಹುಟ್ಟಿದ್ದೇನೆ. ಸ್ವಾತಂತ್ರ್ಯ ಬಂದಮೇಲೆ ನರೇಂದ್ರ ಮೋದಿ ಹುಟ್ಟಿದ್ದು. ನಾನು ಪ್ರಧಾನಮಂತ್ರಿ ಮೋದಿಗಿಂತ ಸೀನಿಯರ್ ಗೊತ್ತಾ. ಕಾಂಗ್ರೆಸ್ ಪಕ್ಷಕ್ಕೆ 60 ವರ್ಷ ಅಧಿಕಾರ‌ ಕೊಟ್ಟಿದ್ದೀರಾ. ನಮಗೆ 60 ತಿಂಗಳು‌ ಕೊಡಿ ಎಂದು ಮೋದಿ‌ ಹೇಳಿದ್ದರು. 7 ವರ್ಷದಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ, ಜಿಡಿಪಿ ಮೈನಸ್ ಆಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸಾಧನೆ. ಜನರ ಲಿವಿಂಗ್ ಕಾಸ್ಟ್ ಹೆಚ್ಚಿದೆ, ಉದ್ಯೋಗ ಹೋಗಿದೆ. ಹೀಗಾದ್ರೆ ಸಾಮಾನ್ಯ ಜನರು ಹೇಗೆ ಬದುಕಬೇಕು. ಮೋದಿ, ಬಿಜೆಪಿಯವರಷ್ಟು ಸುಳ್ಳುಗಾರರು ಬೇಱರೂ ಇಲ್ಲ. ವಲಸೆ ಹೋದವರೆಲ್ಲ ನಿಜವಾದ ಕಾಂಗ್ರೆಸ್ಸಿಗರಲ್ಲ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪುಸುಲ್ತಾನ್ ಮಾಡಿದ ತಪ್ಪು ಏನಂತ ಹೇಳಲ್ಲ ನಾನು ಸಿಎಂ ಆಗಿದ್ದಾಗ ಟಿಪ್ಪು ಜಯಂತಿಯನ್ನು ಮಾಡಿದ್ದೆ. ಟಿಪ್ಪುಸುಲ್ತಾನ್ ದಿವಾನರಾಗಿದ್ದವರು ಕೃಷ್ಣ ಸ್ವಾಮಿ ಬ್ರಿಟಿಷರ ಕಾಲದಲ್ಲಿ ಕೂಡ ಬ್ರಾಹ್ಮಣರ ಆಳ್ವಿಕೆ ಇತ್ತು. ಈಗ ಅವರೇ ನಮಗೆ ಪಾಠ ಮಾಡುತ್ತಾರೆ. ಟಿಪ್ಪು ಜಯಂತಿ ಮಾಡಿದ್ರೆ ಹಿಂದುತ್ವ ವಿರೋಧಿ ಅಂತಾರೆ. ಆದರೆ ಟಿಪ್ಪುಸುಲ್ತಾನ್ ಮಾಡಿದ ತಪ್ಪು ಏನಂತ ಹೇಳಲ್ಲ. ಯಾರೊಬ್ಬರೂ ಹೇಳಲ್ಲ. ಟಿಪ್ಪು ಸುಲ್ತಾನ್ ಬ್ರಿಟಿಷರ ಮೇಲೆ 4 ಯುದ್ಧ ಮಾಡಿದ್ದನು. ಟಿಪ್ಪು ಮೇಲೆ ಮಾತ್ರ ಕೋಪ, ದಿವಾನರ ಮೇಲಿಲ್ಲ. ಎಂಥಾ ನೀಚರು ಬಿಜೆಪಿಗರು ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ಜರಿದಿದ್ದಾರೆ.

ಬಿಜೆಪಿಯವರ ತ್ಯಾಗ ಬಲಿದಾನ ಏನೇನೂ ಇಲ್ಲ. ಬಿಜೆಪಿಯವರು ಸಾವರ್ಕರ್ ಬಗ್ಗೆ ಬಹಳ‌ ಮಾತನಾಡ್ತಾರೆ. ಇಲ್ಲಿಂದ ಹೋದವರು ನಿಜವಾದ ಕಾಂಗ್ರೆಸ್ಸಿಗರಲ್ಲ. ಕಾಂಗ್ರೆಸ್ ಸಿದ್ಧಾಂತ ಅಂದರೆ ತ್ಯಾಗ ಬಲಿದಾನ. ಆನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವಱರೂ ಸಮಾಜ ಪರಿವರ್ತನೆ ಮಾಡುವವರಲ್ಲ. ಬಿ.ಎಸ್.ಯಡಿಯೂರಪ್ಪ ಒಬ್ಬ ಭ್ರಷ್ಟ ಸಿಎಂ ಆಗಿದ್ದರು. ಈಗ ರಾಜ್ಯದಲ್ಲಿ ಮತ್ತೊಬ್ಬ ಮುಖ್ಯಮಂತ್ರಿ ಬಂದಿದ್ದಾರೆ. ಈಗಿನ ಸಿಎಂ, ಬಿ.ಎಸ್.ಯಡಿಯೂರಪ್ಪ ರಬ್ಬರ್ ಸ್ಟ್ಯಾಂಪ್. ಈಗಿನ ಸಿಎಂರಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಲ ಕೂಡಿ ಬಂದಿದೆ, ಮತ್ತೆ ಹೋರಾಟ ಮಾಡೋಣ. ಸ್ವತಂತ್ರರಾಗಿ ಮತ್ತೆ ಅಧಿಕಾರಕ್ಕೆ ಬರೋಣ ಎಂದರು.

ಇದನ್ನೂ ಓದಿ: ಆಗ ಬಿಳಿ ಬ್ರಿಟಿಷರು ನಮ್ಮನ್ನ ಆಳಿದ್ರು, ಈಗ ಕಪ್ಪು ಬ್ರಿಟಿಷರು ನಮ್ಮನ್ನ ಆಳುತ್ತಿದ್ದಾರೆ: ಬಿ ಕೆ ಹರಿಪ್ರಸಾದ್ ವ್ಯಾಖ್ಯಾನ

Published On - 1:37 pm, Mon, 9 August 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್