ಪೈಪ್ಗೆ ಬಳಸುವ ಸಲ್ಯೂಷನ್ ಇಟ್ಟಿದ್ದ ಮನೆಯಲ್ಲಿ ಬೆಂಕಿ; ಓರ್ವನ ಸ್ಥಿತಿ ಗಂಭೀರ
ಬೆಂಗಳೂರಿನ ಲಗ್ಗೆರೆ ಬಳಿಯ ಮನೆಯಲ್ಲಿ ಒಟ್ಟು ಪೈಪ್ಗಳನ್ನು ಇಟ್ಟು ರೀಫಿಲಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ.
ಬೆಂಗಳೂರು: ಪಿವಿಸಿ ಪೈಪ್ಗೆ ಬಳಸುವ ಸಲ್ಯೂಷನ್ ಇಟ್ಟಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಲಗ್ಗೆರೆ ಬಳಿಯ ಮನೆಯಲ್ಲಿ ಪೈಪ್ಗಳನ್ನು ಇಟ್ಟು ರೀಫಿಲಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ (Fire) ನಂದಿಸಿದ್ದು, ಈ ಸಂಬಂಧ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೊಯ್ಡಾ: ಹೊತ್ತಿ ಉರಿದ ಬ್ಯಾಗ್ ತಯಾರಿಕಾ ಕಾರ್ಖಾನೆ ನೊಯ್ಡಾದ ಸೆಕ್ಟರ್ 63 ಪ್ರದೇಶದಲ್ಲಿ ಶನಿವಾರ ಸಂಜೆ ಭಾರೀ ಅಗ್ನಿ ಅವಘಡ ಉಂಟಾಗಿದೆ. ಸ್ಥಳಕ್ಕೆ ಸುಮಾರು 6 ಅಗ್ನಿಶಾಮಕ ದಳಗಳು ಆಗಮಿಸಿ ಬೆಂಕಿ ನಂದಿಸಿವೆ. ಕಾರ್ಖಾನೆಗೆ ಬೆಂಕಿ ಬಿದ್ದ ಫೋಟೋಗಳನ್ನು ಎಎನ್ಐ ಶೇರ್ ಮಾಡಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದು ಆ ಫೋಟೋಗಳನ್ನು ನೋಡಿದರೆ ಗೊತ್ತಾಗುತ್ತದೆ. ಕಾರ್ಖಾನೆ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಬೆಂಕಿಯ ಜ್ವಾಲೆ ಧಗಧಗನೆ ಹೊತ್ತಿ ಉರಿದಿದ್ದನ್ನು ನೋಡಬಹುದು.
ಒಂದು ಕಾರ್ಖಾನೆಯಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ನಂದಿಸುವ ಪ್ರಯತ್ನದಲ್ಲಿದ್ದಾಗಲೇ, ಪಕ್ಕದಲ್ಲೇ ಇದ್ದ ಇನ್ನೊಂದು ಕಾರ್ಖಾನೆಗೂ ಬೆಂಕಿ ತಗುಲಿದೆ. ಅದಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೂ ಕೂಡ ಸ್ಥಳಕ್ಕೆ ಆಗಮಿಸಿದ್ದರು. ಈ ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಕಾರ್ಖಾನೆ ಎಚ್-458 ಏರಿಯಾದಲ್ಲಿದ್ದು, ರಾತ್ರಿ 9 ಗಂಟೆ ಹೊತ್ತಿಗೆ ಅಗ್ನಿ ದುರಂತ ಸಂಭವಿಸಿದೆ ಎಂದು ಗೌತಮ ಬುದ್ಧ ನಗರದ ಅಗ್ನಿ ಸುರಕ್ಷತಾ ಮುಖ್ಯಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.
ಇದು ಚರ್ಮದ ಬ್ಯಾಗ್, ಬೆಲ್ಟ್ ಉತ್ಪಾದನಾ ಕಂಪನಿಯಾಗಿದೆ. ಇಲ್ಲಿ ಇರುವುದೆಲ್ಲ ಹೊತ್ತಿ ಉರಿಯುವಂಥದ್ದೇ ಆಗಿರುವುದರಿಂದ ಬೆಂಕಿಯ ತೀವ್ರತೆ ಬೇಗನೇ ಹೆಚ್ಚಾಗಿದೆ. ಅಷ್ಟೇ ಅಲ್ಲ, ಪಕ್ಕದಲ್ಲೇ ಇದ್ದ ಕಾಟನ್ ಉತ್ಪನ್ನಗಳ ಕಾರ್ಖಾನೆಗೂ ಬಹುಬೇಗನೇ ಪಸರಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಅದೃಷ್ಟವಶಾತ್ ಯಾರಿಗೂ ಗಾಯ ಆಗಲಿಲ್ಲ. ದೊಡ್ಡಮಟ್ಟದಲ್ಲಿ ಯಾವುದೇ ಅಪಾಯ ಆಗಲಿಲ್ಲ. ಮೊದಲು ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದವು. ಆದರೆ ಬಳಿಕ ಬೆಂಕಿಯ ಜ್ವಾಲೆ ಹೆಚ್ಚಾದಂತೆ, ಮತ್ತೂ 9 ಅಗ್ನಿಶಾಮಕ ದಳಗಳು ಬರಬೇಕಾಯ್ತು ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Naxals Attack: ಛತ್ತೀಸ್ಗಢದಲ್ಲಿ ನಕ್ಸಲರಿಂದ ಎಸ್ಯುವಿ ಕಾರು ಸ್ಫೋಟ; ಓರ್ವ ಸಾವು, 11 ಜನರಿಗೆ ಗಾಯ
ಎಲ್ಪಿಜಿ ಸಿಲಿಂಡರ್ ಸ್ಫೋಟಕ್ಕೆ ಕುಸಿದು ಬಿದ್ದ ಮನೆ; ಮಹಿಳೆ ಸೇರಿ ನಾಲ್ವರು ಸಾವು, ಒಬ್ಬರಿಗೆ ಗಂಭೀರ ಗಾಯ
Published On - 1:08 pm, Mon, 9 August 21