AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka SSLC Result 2021: ಕರ್ನಾಟಕ ಎಸ್​ಎಸ್ಎಲ್​ಸಿ ಜಿಲ್ಲಾವಾರು ಫಲಿತಾಂಶ; ಬಳ್ಳಾರಿಗೆ ಕೊನೆಯ ಸ್ಥಾನ

KSEEB Class 10 Result 2021: ಕೊರೊನಾ ಮಹಾಮಾರಿಯ ಕಪಿಮುಷ್ಠಿಯಲ್ಲಿ ನರಳುತ್ತಿದ್ದರೂ ರಾಜ್ಯದಲ್ಲಿ ಎಸ್​ಎಸ್ಎಲ್​ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEB) ಚಿಕ್ಕದಾಗಿ, ಚೊಕ್ಕಾದಾಗಿ ಆಬ್ಜೆಕ್ಟೀವ್​ ಟೈಪ್​ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತ್ತು. ವಿದ್ಯಾರ್ಥಿಗಳೂ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದು, ಜಿಲ್ಲಾವಾರು ಸಾಧನೆಯ ಮಟ್ಟ ಹೇಗಿದೆ ಎಂಬುದನ್ನು ನೋಡುವುದಾದರೆ ಅದರ ವಿವರ ಹೀಗಿದೆ

Karnataka SSLC Result 2021: ಕರ್ನಾಟಕ ಎಸ್​ಎಸ್ಎಲ್​ಸಿ ಜಿಲ್ಲಾವಾರು ಫಲಿತಾಂಶ; ಬಳ್ಳಾರಿಗೆ ಕೊನೆಯ ಸ್ಥಾನ
Karnataka SSLC Result 2021: ಕರ್ನಾಟಕ ಎಸ್​ಎಸ್ಎಲ್​ಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ
TV9 Web
| Updated By: ಸಾಧು ಶ್ರೀನಾಥ್​|

Updated on:Aug 09, 2021 | 4:16 PM

Share

ಬೆಂಗಳೂರು: ಕೊರೊನಾ ಮಹಾಮಾರಿಯ ಕಪಿಮುಷ್ಠಿಯಲ್ಲಿ ನರಳುತ್ತಿದ್ದರೂ ರಾಜ್ಯದಲ್ಲಿ ಎಸ್​ಎಸ್ಎಲ್​ಸಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEB) ಚಿಕ್ಕದಾಗಿ, ಚೊಕ್ಕಾದಾಗಿ ಆಬ್ಜೆಕ್ಟೀವ್​ ಟೈಪ್​ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತ್ತು. ಜುಲೈ 19 ಮತ್ತು 22ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆದಿತ್ತು. ವಿದ್ಯಾರ್ಥಿಗಳೂ ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದು, ಜಿಲ್ಲಾವಾರು ಸಾಧನೆಯ ಮಟ್ಟ ಹೇಗಿದೆ ಎಂಬುದನ್ನು ನೋಡುವುದಾದರೆ ಅದರ ವಿವರ ಹೀಗಿದೆ, Karnataka SSLC Result 2021:

ಎಲ್ಲಾ ಜಿಲ್ಲೆಗಳ ಫಲಿತಾಂಶವೂ ಬಹುತೇಕ ಸಮಾನವಾಗಿದೆ! ಗಮನಾರ್ಹವೆಂದರೆ ಈ ಬಾರಿ ಬಹುತೇಕ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟಾರೆ ಪಾಸ್​ ಪರ್ಸೆಂಟೇಜ್ ಶೇಕಡಾ 99.9ರಷ್ಟು SSLC ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,70,160 SSLC ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 4,01,280 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ನೂತನ ಸಚಿವ ಬಿ.ಸಿ. ನಾಗೇಶ್ (BC Nagesh) ಫಲಿತಾಂಶ ಪ್ರಕಟಿಸಿದ್ದಾರೆ. ವಿದ್ಯಾರ್ಥಿಗಳು ಅಧಿಕೃತ ವೆಬ್​ಸೈಟ್​ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಬಾರಿ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದರೂ ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿದವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾಹಿತಿ ನೀಡಿದ್ದಾರೆ.

2021 ಕರ್ನಾಟಕ ಎಸ್​ಎಸ್ಎಲ್​ಸಿ ಫಲಿತಾಂಶವು ಇಡೀ ರಾಜ್ಯದಲ್ಲಿ ಒಂದೇ ಪ್ರಮಾಣದಲ್ಲಿದೆ. ಬಹುತೇಕ ಎಲ್ಲಾ ಜಿಲ್ಲೆಗಳ ಫಲಿತಾಂಶವೂ ಸಮಾನವಾಗಿದೆ! ಆದರೂ ಬಳ್ಳಾರಿಗೆ (Ballari) ಕೊನೆಯ ಸ್ಥಾನ ಪ್ರಾಪ್ತಿಯಾಗಿದೆ. ಬೆಂಗಳೂರು ಉತ್ತರ (Bengaluru North) ಪ್ರಥಮ ಸ್ಥಾನ, ಬೆಂಗಳೂರು ದಕ್ಷಿಣ (Bengaluru South) ದ್ವಿತೀಯ ಹಾಗೂ ರಾಮನಗರಕ್ಕೆ (Ramanagar) ತೃತೀಯ ಸ್ಥಾನ ಲಭಿಸಿದೆ.

ಶೇಕಡಾ 99.65ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು: 3 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿ, ಗಣಿತ ಗಣಿತ ಪರೀಕ್ಷೆಗೆ 7,81,530 ವಿದ್ಯಾರ್ಥಿಗಳು ಹಾಜರಾಗಿದ್ದರು. ವಿಜ್ಞಾನ ಪರೀಕ್ಷೆಗೆ 8,40,841 ವಿದ್ಯಾರ್ಥಿಗಳು ಹಾಜರಾಗಿದ್ದರೆ ಸಮಾಜ ವಿಜ್ಞಾನ ಪರೀಕ್ಷೆಗೆ 8,21,823 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ 8,16,538 ವಿದ್ಯಾರ್ಥಿಗಳು ಹಾಜರು, ದ್ವಿತೀಯ ಭಾಷೆ ಪರೀಕ್ಷೆಗೆ 8,24,686 ಮಕ್ಕಳು ಹಾಜರು ಮತ್ತು ತೃತೀಯ ಭಾಷೆ ಪರೀಕ್ಷೆಗೆ 8,14,538 ಮಕ್ಕಳು ಹಾಜರಾಗಿದ್ದರು.

ಕೊರೊನಾ ಸೋಂಕಿತ 58 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ಕೊವಿಡ್​ ಕೇರ್​ ಸೆಂಟರ್​ನಿಂದ ಪರೀಕ್ಷೆಯನ್ನ ಬರೆದಿದ್ದರು. 2870 ವಿದ್ಯಾರ್ಥಿಗಳು ಹಾಸ್ಟೆಲ್​ಗಳಲ್ಲಿದ್ದು ಪರೀಕ್ಷೆ ಬರೆದಿದ್ದರು. ನೆರೆ ರಾಜ್ಯಗಳಿಂದ ಬಂದು ಪರೀಕ್ಷೆ ಬರೆದವರ ಸಂಖ್ಯೆ 760 ನಷ್ಟಿತ್ತು.

ಈ ವೆಬ್​ಸೈಟ್​ಗಳಲ್ಲಿ ಫಲಿತಾಂಶ ವೀಕ್ಷಿಸಿ sslc.karnataka.gov.in kseeb.kar.nic.in karresults.nic.in

ಫಲಿತಾಂಶ ವೀಕ್ಷಿಸುವುದು ಹೇಗೆ? 1. ಕರ್ನಾಟಕ ಸರ್ಕಾರದ ಅಧಿಕೃತ ವೆಬ್​ಸೈಟ್ sslc.karnataka.gov.in ಕ್ಲಿಕ್ ಮಾಡಿ 2. ಸ್ಕ್ರೀನ್​ನಲ್ಲಿ ರಿಸಲ್ಟ್​ ಲಿಂಕ್ ಕಾಣಿಸಿಕೊಳ್ಳುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ 3. ನಿಮ್ಮ ರೋಲ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ 4. ರೋಲ್ ನಂಬರ್ ಜೊತೆಗೆ ಅಲ್ಲಿ ಕೇಳುವ ನಿಮ್ಮ ಇತರೆ ಮಾಹಿತಿಗಳನ್ನೂ ತುಂಬಿರಿ 5. ಫಲಿತಾಂಶವನ್ನು ವೀಕ್ಷಿಸಲು ನಿಮ್ಮ ಮಾಹಿತಿಯನ್ನು ಸಬ್ಮಿಟ್ ಮಾಡಿ 6. ತಾತ್ಕಾಲಿಕ ಅಂಕಪಟ್ಟಿ ಆನ್​ಲೈನ್​ನಲ್ಲೇ ಲಭ್ಯವಾಗಲಿದ್ದು, ಅಲ್ಲಿಂದಲೇ ಡೌನ್​ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. . (Karnataka SSLC Result 2021 Live Updates KSEEB Board Class 10 district wise Result pass percentage news in Kannada)

Published On - 4:03 pm, Mon, 9 August 21

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!