ಜಪಾನಿನ ಮಿಯವಾಕಿ ಮಾದರಿಯಲ್ಲಿ ಅರಣ್ಯ; ಮಹಾನಗರ ಪಾಲಿಕೆಯಿಂದ 1000 ಗಿಡ ನೆಡುವ ಯೋಜನೆಗೆ ಚಾಲನೆ

ದಾವಣಗೆರೆಯಲ್ಲಿ ಡಿಸಿಎಂ ಟೌನ್ ಶೀಪ್ ಡಾಲರ್ಸ್ ಕಾಲೋನಿ ಸೇರಿ 18 ಕಡೆ ಪಾಲಿಕೆಯ ಖಾಲಿ ಜಾಗದಲ್ಲಿ ಅರಣ್ಯೀಕರಣ ಮಾಡಲು ನಿರ್ಧರಿಸಲಾಗಿದೆ. ಈಗ ಡಿಸಿಎಂ ಟೌನ್ ಶೀಪ್ ಹಾಗೂ ಡಾಲರ್ಸ್ ಕಾಲೋನಿಯಲ್ಲಿ ಇಂತಹ ಪ್ರಯತ್ನ ಶುರುವಾಗಿದೆ. ಉಳಿದ 16 ಕಡೆ ಪಾಲಿಕೆಯ ಪಾರ್ಕ್ ಮತ್ತು ಖಾಲಿ ಜಾಗಗಳನ್ನು ಗುರುತಿಸುವ ಕಾರ್ಯ ನಡೆದಿದೆ.

ಜಪಾನಿನ ಮಿಯವಾಕಿ ಮಾದರಿಯಲ್ಲಿ ಅರಣ್ಯ; ಮಹಾನಗರ ಪಾಲಿಕೆಯಿಂದ 1000 ಗಿಡ ನೆಡುವ ಯೋಜನೆಗೆ ಚಾಲನೆ
ಮಹಾನಗರ ಪಾಲಿಕೆಯಿಂದ 1000 ಗಿಡ ನೆಡುವ ಯೋಜನೆಗೆ ಚಾಲನೆ

ದಾವಣಗೆರೆ: ಇತ್ತೀಚಿಗೆ ಕೊರೊನಾ ಕಂಟಕದಿಂದ ಜನರು ಎಚ್ಚತ್ತುಕೊಂಡಿದ್ದಾರೆ. ಹೀಗೆ ಜನರು ಮುಂಜಾಗ್ರತೆ ವಹಿಸಲು ಕಾರಣ ಸಕಾಲಕ್ಕೆ ಆಮ್ಲಜನಕ ಸಿಗದೇ ಎಷ್ಟೋ ಜನ ಜೀವ ಕಳೆದುಕೊಂಡ ನಿದರ್ಶನಗಳು. ನಗರೀಕರಣದ ಪರಿಣಾಮ ಅರಣ್ಯ ನಾಶವಾಗುತ್ತಿದೆ ಎಂಬುವುದರ ಬಗ್ಗೆ ಗಮನಹರಿಸುವ ಅನಿವಾರ್ಯತೆ ಎದುರಾಗಿದೆ. ಇದನ್ನು ಮನಗಂಡ ದಾವಣಗೆರೆ ಮಹಾಗರ ಪಾಲಿಕೆ ವಿಶೇಷ ಯೋಜನೆ ರೂಪಿಸಿದೆ. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಜಪಾನಿನ ಮಿಯಾವಾಕಿ ಮಾದರಿ. ಜಪಾನ್ ಪರಿಸರ ತಜ್ಞ ಮಿಯಾವಾಕಿ ಎಂಬುವವರು ಆರಂಭಿಸಿದ ಕೃಷಿ ಅರಣ್ಯೀಕರಣ ಪದ್ಧತಿಯನ್ನು ಮತ್ತೆ ಇಲ್ಲಿ ಆರಂಭಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕಡಿಮೆ ಅವಧಿಯಲ್ಲಿ ಅಲ್ಪ ಪ್ರಮಾಣದ ನೀರಿನಲ್ಲಿ ಅರಣ್ಯ ಬೆಳೆಸುವುದು ಈ ಮಿಯಾವಾಕಿ ಪದ್ಧತಿಯ ವಿಶೇಷ. ಇಂತಹ ನೂತನ ಯೋಜನೆಯನ್ನು ಪಾಲಿಕೆ ಮೇಯರ್ ಎಸ್. ಟಿ.ವೀರೇಶ್ ಜಾರಿಗೆ ತಂದಿದ್ದಾರೆ. ಮಿಯಾವಾಕಿ ಪದ್ಧತಿ ಅಂದರೆ ಇಡಿ ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದ ಅರಣ್ಯೀಕರಣದ ಪರಿಕಲ್ಪನೆ. ಇದರ ವಿಶೇಷತೆ ಅಂತದ್ದು. ವಿವಿಧ ರೀತಿಯ ನೂರಕ್ಕೂ ಹೆಚ್ಚು ಪ್ರಕಾರದ ಹಣ್ಣಿನ ಹಾಗೂ ಹೆಚ್ಚು ಆಮ್ಲಜನಕ ಉತ್ಪಾದನೆ ಮಾಡುವ ಕೆಲ ಜಾತಿಯ ಸಸಿಗಳನ್ನು ಗುರುತಿಸಿ ಇಲ್ಲಿ ನೆಡಲಾಗುತ್ತದೆ.

ಅರಣ್ಯ ಇಲಾಖೆ ಸೇರಿದಂತೆ ವಿವಿಧ ಕಡೆಗಳಲ್ಲಿ ಹೀಗೆ ಹಾಕಿದ ಸಸಿಗಳು ಕೇವಲ ಮೂರು ವರ್ಷಗಳಲ್ಲಿ ಮರವಾಗಿ ಬೆಳೆಯುತ್ತವೆ. ಜತೆಗೆ ಹಣ್ಣು ಸಹ ಬಿಡುತ್ತವೆ. ಇದನ್ನು ಅಧ್ಯಯನ ಮಾಡಿದ ಪಾಲಿಕೆಯ ಮೇಯರ್ ವೀರೇಶ್ ಹಾಗೂ ಆಯುಕ್ತ ವಿಶ್ವನಾಥ ಮುದಜ್ಜಿ ಅವರು ನಗರದಲ್ಲಿ ಅರಣ್ಯ ಬೆಳೆಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ದಾವಣಗೆರೆ ನಗರದ ಶಾಮನೂರು ಬಳಿಯ ಡಾಲರ್ಸ್ ಕಾಲೋನಿ ಬಳಿ ಇದ್ದ ಪಾಲಿಕೆಯ ಖಾಲಿ ಜಾಗದಲ್ಲಿ ಒಂದು ಸಾವಿರ ಸಸಿಗಳನ್ನು ನೆಡಲಾಗಿದೆ. ಆ ಮೂಲಕ ಈ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ದಾವಣಗೆರೆಯಲ್ಲಿ ಡಿಸಿಎಂ ಟೌನ್ ಶೀಪ್ ಡಾಲರ್ಸ್ ಕಾಲೋನಿ ಸೇರಿ 18 ಕಡೆ ಪಾಲಿಕೆಯ ಖಾಲಿ ಜಾಗದಲ್ಲಿ ಅರಣ್ಯೀಕರಣ ಮಾಡಲು ನಿರ್ಧರಿಸಲಾಗಿದೆ. ಈಗ ಡಿಸಿಎಂ ಟೌನ್ ಶೀಪ್ ಹಾಗೂ ಡಾಲರ್ಸ್ ಕಾಲೋನಿಯಲ್ಲಿ ಇಂತಹ ಪ್ರಯತ್ನ ಶುರುವಾಗಿದೆ. ಉಳಿದ 16 ಕಡೆ ಪಾಲಿಕೆಯ ಪಾರ್ಕ್ ಮತ್ತು ಖಾಲಿ ಜಾಗಗಳನ್ನು ಗುರುತಿಸುವ ಕಾರ್ಯ ನಡೆದಿದೆ.

ಇನ್ನೊಂದು ವಾರದಲ್ಲಿ ಹೀಗೆ ಸ್ಥಳಗಳನ್ನು ಗುರುತಿಸುವ ಕಾರ್ಯ ಮುಕ್ತಾಯವಾಗಲಿದ್ದು, ಈ ವರ್ಷ ಒಂದು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ. ಬರುವ ವರ್ಷದಲ್ಲಿ ಇನ್ನೊಂದು ಲಕ್ಷ ಹಾಗೂ ಮೂರು ವರ್ಷದಲ್ಲಿ 3 ಲಕ್ಷ ಸಸಿ ನೆಟ್ಟು, ಮೂರು ವರ್ಷದ ಬಳಿಕ ಮತ್ತಷ್ಟು ಕಡೆ ಇಂತಹ ಪ್ರಯತ್ನಕ್ಕೆ ಪಾಲಿಕೆ ನಿರ್ಧರಿಸಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಸ್. ಟಿ. ವೀರೇಶ್ ತಿಳಿಸಿದ್ದಾರೆ.

ಇದನ್ನೂ ಓದಿ:

ಅಕಿರಾ ಮಿಯಾವಾಕಿ ಕಿರು ಅರಣ್ಯ ಪದ್ಧತಿ ಅನುಷ್ಠಾನ: ಅರಣ್ಯ ಬೆಳೆಸುವ ಯೋಜನೆಗೆ ಮುಂದಾದ ಹು-ಧಾ ಮಹಾನಗರ ಪಾಲಿಕೆ

ಬೀದರ್: ಅರಣ್ಯ ಇಲಾಖೆಯಿಂದ ನೂತನ ಪ್ರಯೋಗ; ಹಸಿರೀಕರಣಕ್ಕಾಗಿ 45 ಸಾವಿರಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಾಣ

Read Full Article

Click on your DTH Provider to Add TV9 Kannada