Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೀಕ್ಷೆ ಬರೆಯಲ್ಲಾ ಎಂದು ಕೂತಿದ್ದ ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷೆಗೆ ಕರೆ ತಂದಿದ್ದ ಬಿಇಓ, ಫಲಿತಾಂಶದ ಬಳಿಕ ಮನೆಯಲ್ಲಿ ಸಂಭ್ರಮ

SSLC Result 2021: ಓದಿಲ್ಲ ಪರೀಕ್ಷೆ ಬರೆಯುವುದು ಬೇಡ ಎಂದು ಮನೆಯಲ್ಲಿ ಕುಳಿತ್ತಿದ್ದ ವಿದ್ಯಾರ್ಥಿನಿ 466 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.

ಪರೀಕ್ಷೆ ಬರೆಯಲ್ಲಾ ಎಂದು ಕೂತಿದ್ದ ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷೆಗೆ ಕರೆ ತಂದಿದ್ದ ಬಿಇಓ, ಫಲಿತಾಂಶದ ಬಳಿಕ ಮನೆಯಲ್ಲಿ ಸಂಭ್ರಮ
ವಿದ್ಯಾರ್ಥಿನಿಯನ್ನ ಭೇಟಿ ಮಾಡಿ ಅಭಿನಂದಿಸಿದ ಬಿಇಓ ಕೆ. ಮಂಜುನಾಥರಿಗೆ
Follow us
TV9 Web
| Updated By: ಆಯೇಷಾ ಬಾನು

Updated on:Aug 10, 2021 | 1:06 PM

ದಾವಣಗೆರೆ: ಓದಿಲ್ಲ ಪರೀಕ್ಷೆ ಬರೆಯುವುದು ಬೇಡ ಎಂದು ಮನೆಯಲ್ಲಿ ಕುಳಿತ್ತಿದ್ದ ವಿದ್ಯಾರ್ಥಿನಿ 466 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ವಿದ್ಯಾರ್ಥಿನಿ ಮನೆಯಲ್ಲಿ ಕುಳಿತ ವಿಚಾರ ತಿಳಿದು ಪರೀಕ್ಷೆ ಆರಂಭವಾಗುವ ಕೆಲ ನಿಮಿಷ ಮೊದಲು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿಯನ್ನ ಕರೆತಂದಿದ್ದ ಬಿಇಓ ಕೆ. ಮಂಜುನಾಥರಿಗೆ ವಿದ್ಯಾರ್ಥಿನಿ ಕುಟುಂಬ ಅಭಿನಂದಿಸಿದೆ.

ಕೊವಿಡ್ ಸಂಕಷ್ಟದ ಕಾಲದಲ್ಲಿ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಈ ವೇಳೆ ಮಕ್ಕಳ ಹಾಗೂ ಅಧಿಕಾರಿಗಳಲ್ಲಿ ಭಯ ಮನೆ ಮಾಡಿತ್ತು. ಆದ್ರು ಪರೀಕ್ಷೆ ನಡೆಸಲೇ ಬೇಕು ಎಂಬ ದಿಟ್ಟ ನಿರ್ಧಾರದಿಂದ ಪರೀಕ್ಷೆ ಆರಂಭವಾಗಿತ್ತು. ಈ ವೇಳೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆ ಬೆನ್ನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ರಜಿಕೀಯಾ ಭಾನು ಮಾತ್ರ ಪರೀಕ್ಷೆ ಬರೆಯಬಾರದು ಅಂದು ನಿರ್ಧರಿಸಿದ್ದಳು. ಕಾರಣ ಕೊವಿಡ್ ಸಂಕಷ್ಟದ ಕಾಲದಲ್ಲಿ ಆಕೆ ಪರೀಕ್ಷೆಗೆ ತಯಾರಿ ಮಾಡಿಕೊಂಡಿರಲಿಲ್ಲ. ಏನೂ ಓದಿರಲಿಲ್ಲ. ಸುಮ್ಮನೆ ಪರೀಕ್ಷೆ ಬರೆದರೇ ಸರಿ ಇರಲ್ಲ ಜೊತೆಗೆ ಕೊವಿಡ್ ಭಯ ಬೇರೆ. ಹೀಗಾಗಿ ಮಕ್ಕಳಲ್ಲೆ ಉತ್ಸಾಹದಿಂದ ಪರೀಕ್ಷೆ ಬರೆಯಲು ಹೋಗುತ್ತಿದ್ದರೇ ಇವಳು ಮಾತ್ರ ಮನೆಯಲ್ಲಿಯೇ ಕುಳಿತು ಪರೀಕ್ಷೆ ಬರೆಯುವುದೇ ಬೇಡ ಎಂದು ನಿರ್ಧರಿಸಿದ್ದಳು.

ಈ ವಿಚಾರ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ ಅವರಿಗೆ ಗೊತ್ತಾಯಿತು. ಹೀಗೆ ಗೊತ್ತಾಗಿದ್ದೆ ತಡ, ತಮ್ಮ ಜೀಪ್ ತೆಗೆದುಕೊಂಡು ನೇರವಾಗಿ ರಜಿಕೀಯಾ ಭಾನು ಮನೆಗೆ ಹೋಗಿ ಅವಳ ಮನ ಒಲಿಸಿ ನಿನಗೆ ಬಂದಷ್ಟು ಬರೆಯಬಹುದು. ಕಡಿಮೆ ಅಂಕ ಬಂದ್ರೆ ಇನ್ನೊಮ್ಮೆ ಬರೆಯುವಂತೆ ಎಂದು ಇನ್ನೇನು ಪರೀಕ್ಷೆ ಆರಂಭವಾಗುವುದು ಹತ್ತು ನಿಮಿಷವಿದ್ದಂತೆ ರಜಿಕೀಯಾಭಾನುಳನ್ನ ಕರೆದು ಸಂತೆಬೆನ್ನೂರು ಸರ್ಕಾರಿ ಶಾಲೆ ಪರೀಕ್ಷಾ ಕ್ಷೇತ್ರದಲ್ಲಿ ಪರೀಕ್ಷೆ ಬರೆಯಲು ಕೂರಿಸಿದ್ದರು. ನಿಜಕ್ಕೂ ಆ ವಿದ್ಯಾರ್ಥಿನಿ ಬುದ್ದಿವಂತೆ. ಕಾರಣ ನಿನ್ನೆ ಪರೀಕ್ಷೆ ಫಲಿತಾಂಶ ಬಂದಿದೆ. 625ಕ್ಕೆ 466 ಅಂಕ ಗಳಿಸಿದ್ದಾಳೆ. ಅಂದ್ರೆ ಶೇಖಡಾ 75 ಪ್ರತಿಶತ ಸರಿಯಾದ ಉತ್ತರ ಬರೆದ ಉತ್ತಮ ದರ್ಜೆಯಲ್ಲಿ ಪಾಸ್ ಆಗಿದ್ದಾಳೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥಗೆ ಈ ವಿಚಾರ ಗೊತ್ತಾಗಿದ್ದೆ ತಡ ನೇರವಾಗಿ ಚನ್ನಗಿರಿಯಿಂದ ಸಂತೆಬೆನ್ನೂರಿಗೆ ಬಂದು ರಜಿಕೀಯಾಭಾನು ಓದುತ್ತಿದ್ದ ಶಾಲೆಗೆ ಬಂದು ಅವಳಿಗೆ ಸಿಹಿ ತಿನ್ನಿಸಿ, ಜೊತೆಗೆ ಸನ್ಮಾನ ಕೂಡಾ ಮಾಡಿದ್ದಾರೆ. ಮೇಲಾಗಿ ಸ್ಥಳೀಯರು ರಜಕೀಯಾ ಭಾನು ಪರೀಕ್ಷೆಗೆ ಬರಲ್ಲ ಎಂದು ನಿರ್ಧಾರ ಮಾಡಿ ಬೇಸರದಿಂದ ಮನೆಯಲ್ಲಿ ಕುಳಿತ್ತಿದ್ದಾಳೆ ಎಂದು ಬಿಇಓಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯ ಬಗ್ಗೆ ಅವರು ನಿರ್ಲಕ್ಷ ಮಾಡಲಿಲ್ಲ. ವಿದ್ಯಾರ್ಥಿನಿಯ ಮನೆಗೆ ಹೋಗಿ ತಮ್ಮ ಜೀಪ್ ನಲ್ಲಿ ಪರೀಕ್ಷೆಗೆ ಬಾಲಕಿಯನ್ನು ಹಾಜರು ಪಡಿಸಿದ್ದರು. ಹೀಗೆ ಅಧಿಕಾರಿಯೊಬ್ಬರು ಮಕ್ಕಳ ಮನಸ್ಸಿನಲ್ಲಿ ಆತ್ಮ ವಿಶ್ವಾಸ ತುಂಬಿದ್ರೆ ಎಂತಹ ಸಾಧನೆ ಕೂಡಾ ಮಕ್ಕಳು ಮಾಡ ಬಹುದು ಎಂಬುದಕ್ಕೆ ರಜಕೀಯಾ ಭಾನು ಸಾಧನೇ ನಿದರ್ಶನ.

ಮುಂದೆ ಬರುವ ದಿನಗಳಲ್ಲಿ ಚನ್ನಾಗಿ ಓದಲು ರಜಕೀಯಾಭಾನು ನಿರ್ಧರಿಸಿದ್ದಾಳೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಪಡೆದು ಉನ್ನತ ಹುದ್ದೆಗೆ ಹೋಗುವ ವಿಶ್ವಾವ ಕೂಡಾ ರಜಕೀಯಾಭಾನು ವ್ಯಕ್ತ ಪಡಿಸಿದ್ದಾಳೆ. ನಿಜಕ್ಕೂ ಈ ಶ್ರೆಯಸ್ಸು ಚನ್ನಗಿರಿ ಬಿಇಓ ಕೆ. ಮಂಜುನಾಥ ಅವರಿಗೆ ಹೋಗಬೇಕು. ಎನೇ ಆಗಲಿ ವಿದ್ಯಾರ್ಥಿನಿ ಮಾತ್ರ ಉತ್ತಮ ಸಾಧನೆ ಮಾಡಿದ್ದು ಮೆಚ್ಚುವಂತಹ ವಿಚಾರ.

ಇದನ್ನೂ ಓದಿ: ಹೃದಯ ಕಾಯಿಲೆಯಿಂದ ಬಳಲುತ್ತಿರುವ ಎಸ್​ಎಸ್​ಎಲ್​ಸಿ ಟಾಪರ್ ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ

Published On - 1:05 pm, Tue, 10 August 21