ಕೆ.ಎಸ್.ಈಶ್ವರಪ್ಪನವರ ಮುಂದೆ ಬಿಜೆಪಿ ಎಂಎಲ್ಸಿ ಆಯನೂರ್ ಮಂಜುನಾಥ್ ಹೈಡ್ರಾಮಾ
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದು (ಆಗಸ್ಟ್ 9) ಸಭೆ ನಡೆಯುತ್ತಿತ್ತು. ಎಲ್ಲಾ ತಾಲೂಕುಗಳಿಂದ ಅಧಿಕಾರಿಗಳ ಸಮ್ಮುಖದಲ್ಲಿ ಕೊವಿಡ್ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಭೆ ನಡೆಯಿತ್ತಿತ್ತು.
ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಸಭೆ ವೇಳೆ ಬಿಜೆಪಿ ಎಂಎಲ್ಸಿ ಆಯನೂರ್ ಮಂಜುನಾಥ್ ಹೈಡ್ರಾಮಾ ಮಾಡಿದ್ದಾರೆ. ಡಿಸಿ ಸಭೆ, ತಾಲೂಕು ಆಡಳಿತದ ಸಭೆಗೆ ಆಹ್ವಾನ ನೀಡೋದಿಲ್ಲ. ಯಾರಿಗಾದರು ಅನುದಾನ ಕೊಟ್ಟರೂ ನಮಗೆ ಮಾಹಿತಿ ನೀಡಲ್ಲ. ಪರಿಹಾರ ಧನದ ಬಗ್ಗೆಯೂ ನನಗೆ ಮಾಹಿತಿಯೇ ನೀಡೋದಿಲ್ಲ. ನಾವೇನು ನಿಮಗೆ ಶಾಸಕರಂತೆ ಕಾಣುತ್ತಿಲ್ಲವಾ ಅಂತ ಸಚಿವ ಈಶ್ವರಪ್ಪರನ್ನು ಆಯನೂರ್ ಮಂಜುನಾಥ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ಇಂದು (ಆಗಸ್ಟ್ 9) ಸಭೆ ನಡೆಯುತ್ತಿತ್ತು. ಎಲ್ಲಾ ತಾಲೂಕುಗಳಿಂದ ಅಧಿಕಾರಿಗಳ ಸಮ್ಮುಖದಲ್ಲಿ ಕೊವಿಡ್ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಭೆ ನಡೆಯಿತ್ತಿತ್ತು. ಈ ವೇಳೆ ಆಯನೂರ್ ಮಂಜುನಾಥ್ ಗಲಾಟೆ ಮಾಡಿದ್ದಾರೆ. ನಾವೇನು ನಿಮಗೆ ಶಾಸಕರ ರೀತಿ ಕಾಣಿಸೋದಿಲ್ವಾ? ಅಂತ ಈಶ್ವರಪ್ಪರನ್ನು ಪ್ರಶ್ನಿಸಿ ಸಭೆಯ ವೇದಿಕೆ ಮುಂಭಾಗಕ್ಕೆ ಹೋಗಿ ಹೈಡ್ರಾಮ ಮಾಡಿದ್ದಾರೆ.
ಈಶ್ವರಪ್ಪರಿಂದ ಶಿವಮೊಗ್ಗ ನಗರ ಪ್ರದಕ್ಷಿಣೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲಿಸಿದರು. ಶಿವಮೊಗ್ಗ ನಗರದ ಶೇಷಾದ್ರಿಪುರಂ, ಫ್ರೀಡಂಪಾರ್ಕ್, ಶಿವಪ್ಪನಾಯಕ ಪ್ಯಾಲೇಸ್, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಗ್ರಂಥಾಲಯ ಸೇರಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ಮಾಡಿದ್ದಾರೆ. ಸಚಿವರಿಗೆ ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಇದನ್ನೂ ಓದಿ
ಬೆಂಗಳೂರಿಗರೇ, ಈ ರಸ್ತೆಗಳಲ್ಲಿ ಇನ್ನೂ 15 ದಿನ ಟ್ರಾಫಿಕ್ ಜಾಮ್; ರಸ್ತೆಗಿಳಿಯುವ ಮುನ್ನ ಯೋಚಿಸಿ
ಏಕಕಾಲಕ್ಕೆ 203 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ; ರೌಡಿಶೀಟರ್ಗಳಿಗೆ ವಾರ್ನಿಂಗ್
(BJP MLC Ayonur Manjunath Has done the uproar with KS Eshwarappa)