ಯುವತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪಿಎಸ್‌ಐ; ಘಟನೆ ಬಗ್ಗೆ ವರದಿ ನೀಡುವಂತೆ ಮಂಡ್ಯ ಎಸ್​ಪಿ ಸೂಚನೆ

| Updated By: Digi Tech Desk

Updated on: Mar 10, 2021 | 9:45 AM

ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಡಿವೈಎಸ್‌ಪಿ ಬಳಿ ಮಂಡ್ಯ ಎಸ್‌ಪಿ ವರದಿ ಕೇಳಿದ್ದಾರೆ. ಮಂಡ್ಯ ವಿಭಾಗದ DySPಗೆ ಈ ಸಂಬಂಧ ವರದಿ ನೀಡುವಂತೆ ಮಂಡ್ಯ SPಡಾ. ಅಶ್ವಿನಿ ಸೂಚಿಸಿದ್ದಾರೆ.

ಯುವತಿಯ ಕಪಾಳಕ್ಕೆ ಬಾರಿಸಿದ ಮಹಿಳಾ ಪಿಎಸ್‌ಐ; ಘಟನೆ ಬಗ್ಗೆ ವರದಿ ನೀಡುವಂತೆ ಮಂಡ್ಯ ಎಸ್​ಪಿ ಸೂಚನೆ
ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ
Follow us on

ಮಂಡ್ಯ: ದ್ವಿಚಕ್ರ ವಾಹನ ದಾಖಲೆಗಳ ತಪಾಸಣೆ ವೇಳೆ ಯುವತಿಯೊಬ್ಬರು ತನ್ನೊಂದಿಗೆ ವಾಗ್ವಾದಕ್ಕೆ ಇಳಿದರೆಂದು ಕೋಪಗೊಂಡ ಮಹಿಳಾ ಪಿಎಸ್‌ಐ ಸವಿತಾಗೌಡ ಪಾಟೀಲ್‌ ಯುವತಿಯ ಕಪಾಳಕ್ಕೆ ಬಾರಿಸಿದ ಘಟನೆ ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಡಿವೈಎಸ್‌ಪಿ ಬಳಿ ಮಂಡ್ಯ ಎಸ್‌ಪಿ ವರದಿ ಕೇಳಿದ್ದಾರೆ. ಮಂಡ್ಯ ವಿಭಾಗದ DySPಗೆ ಈ ಸಂಬಂಧ ವರದಿ ನೀಡುವಂತೆ ಮಂಡ್ಯ SP ಡಾ. ಅಶ್ವಿನಿ ಸೂಚಿಸಿದ್ದಾರೆ.

ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೌಜನ್ಯದಿಂದ ವರ್ತಿಸಬೇಕು ಎಂದೂ ಸೂಚಿಸಿರುವ SP, ಕಾನೂನು ಸುವ್ಯವಸ್ಥೆ, ಸಂಚಾರಕ್ಕೆ ಸಂಬಂಧಿ ಕರ್ತವ್ಯಕ್ಕೆ ಪೊಲೀಸರ ಜೊತೆ ಸಹಕರಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಾಹನ ತಪಾಸಣೆ ವೇಳೆ ಯುವತಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಯುವತಿಯ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದಿದ್ದರು. ಈ ವೇಳೆ ಪೊಲೀಸರು ಮತ್ತು ಯುವತಿಯ ನಡುವೆ ಮಾತಿಗೆ ಮಾತು ಬೆಳೆದು ಮಹಿಳಾ ಪಿಎಸ್‌ಐ ಯುವತಿಗೆ ಕಪಾಳಮೋಕ್ಷ ಮಾಡಿದ್ದರು.

ಘಟನೆ ವಿವರ
ಮಂಡ್ಯದ ನೂರಡಿ ರಸ್ತೆಯ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಯುವತಿ ಚಲಾಯಿಸುತ್ತಿದ್ದ ಸ್ಕೂಟರ್​ಅನ್ನು ತಡೆದು ದಾಖಲಾತಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನನ್ ಸ್ಕೂಟರ್ ಅನ್ನ ಯಾಕ್ ಮುಟ್ತಿದ್ದೀರಾ ಎಂದು ಯುವತಿ ಆವಾಜ್ ಹಾಕಿದ್ದಾರೆ. ಸ್ಕೂಟರ್ ಮೇಲೆ ಕುಳಿತು ನಾನ್ ಗಾಡಿ ಯಾಕ್ ಕೊಡ್ಲಿ ಎಂದು ಆವಾಜ್ ಹಾಕಿದ್ದಾರೆ. ಸ್ಕೂಟರ್ ನಿಂದ ಇಳಿಯಮ್ಮ, ನಿನ್ ಹೆಸರೇನು? ನಿಮ್ ತಂದೆ ಕರೆಸು. ಠಾಣೆಗೆ ಬಾ ಎಂದು ಮಹಿಳಾ ಪಿಎಸ್ ಐ ಸೂಚಿಸಿದ್ದಾರೆ. ಆ ವೇಳೆ ಇದ್ದಕ್ಕಿದ್ದಂತೆ ಯುವತಿ ಮತ್ತು ಮಂಡ್ಯದ ಮಹಿಳಾ ಠಾಣೆ ಪಿಎಸ್ ಐ ಸವಿತಾಗೌಡ ಪಾಟೀಲ್ ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ.

ಈ ವೇಳೆ ಮಹಿಳಾ ಪಿಎಸ್ಐ ಕುರಿತು ಹೇ ನನ್ ತಂದೆ ಇಲ್ಲ. ಎಲ್ಲರನ್ನು ಕರೆಸಲಾಗಲ್ಲ ಎಂದು ಯುವತಿ ಆಕ್ರೋಶಗೊಂಡಿದ್ದಾಳೆ. ಈ ವೇಳೆ ತಾಳ್ಮೆ ಕಳೆದುಕೊಂಡ ಮಹಿಳಾ ಪಿಎಸ್ ಐ ಸವಿತಾ ಗೌಡ ನನ್ನನ್ನೇ ಹೇ ಅಂತೀಯಾ? ಲೋಫರ್ ಮುಂ* ಏನ್ ಮಾತಾಡ್ತಿಯಾ? ಎಂದು ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಈ ವೇಳೆ ಇನ್ನೂ ಜೋರಾಗಿ ಕೂಗಾಡಿದ ಯುವತಿ. ಹೇ ಏನು, ಯಾರು ನೀನು ನನ್ ಮೇಲೆ ಕೈ ಮಾಡೋಕೆ? ಇದನ್ನ ವಿಡಿಯೊ ಮಾಡ್ಲಾ? ಯಾವಳೆ ನೀನು ನನಗೆ ಹೊಡೆಯೋಕೆ ಹೇ ಎಂದು ಯುವತಿ ವ್ಯಗ್ರಗೊಂಡಿದ್ದಾರೆ. ಆ ವೇಳೆ ಮಹಿಳಾ ಪಿಎಸ್ ಐ ಮತ್ತೊಂದು ಏಟು ಕೊಟ್ಟಿದ್ದಾರೆ. ಯುವತಿಯು ಆಗ ಹೇ ಏನೆ ಮಾಡ್ತಿಯಾ ರಾಸ್ಕಲ್? ಎಂದು ಮಹಿಳಾ ಪಿಎಸ್ ಐಗೆ ಅವಾಜ್ ಹಾಕಿದ್ದಾರೆ. ಠಾಣೆಗೆ ಬಾ ನೀನು ಎಂದು ಸಿಬ್ಬಂದಿಯಿಂದ ಸ್ಕೂಟರ್ ತೆಗೆಸಿಕೊಂಡು ಪಿಎಸ್ ಐ ಸ್ಥಳದಿಂದ ತೆರಳಿದ್ದಾರೆ.
ಈ ವೇಳೆ ಮಹಿಳಾ ಪಿಎಸ್ ಐ ಕುರಿತು ಅನ್ ಎಜುಕೇಟೆಡ್ ಬ್ರೂಟ್ ಎಂದು ಯುವತಿ ಬೈದಿದ್ದಾರೆ. ಅದಕ್ಕೆ.. ನಾನು ಎಜುಕೇಟೆಡ್, ನೀನೆ ಅನ್ ಎಜುಕೇಟೆಡ್ ಎಂದು ಮಹಿಳಾ ಪಿಎಸ್ ಐ ಗುಡುಗಿದ್ದಾರೆ.

ಮತ್ತೆ ನಾನು ಎಜುಕೇಟೆಡ್, ನೀನೆ ಅನ್ ಎಜುಕೇಟೆಡ್ ರೀತಿ ಬಿಹ್ಯಾವ್ ಮಾಡಿದ್ದು. ರೂಲ್ಸ್ ಗೊತ್ತಿಲ್ಲ ಪೊಲೀಸ್ ಅಂತೆ ಇವಳು. ವಿಡಿಯೊ ಮಾಡ್ಕೊತ್ತಿದ್ದೀರಾ ತಾನೆ ಮಾಡ್ಕೊಳಿ ಎಂದು ಯುವತಿ ಆವಾಜ್ ಹಾಕಿದ್ದಾಳೆ.

ಇದನ್ನೂ ಓದಿ: Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

Published On - 9:33 am, Wed, 10 March 21