ಶಶಿಕಲಾಗೆ ಕೊರೊನಾ ಹಿನ್ನೆಲೆ: ಗೆಳತಿ ಇಳವರಸಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್

ಇಳವರಸಿ ಮಗ ವಿವೇಕ್ ಮತ್ತು ಸಂಬಂಧಿಕರು ಸಿಟಿ ಸ್ಕ್ಯಾನ್ ಮಾಡಿಸುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಸಂಬಂಧಿಕರ ಮನವಿಯನ್ನು ಅಂಗೀಕರಿಸಿ, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 

ಶಶಿಕಲಾಗೆ ಕೊರೊನಾ ಹಿನ್ನೆಲೆ: ಗೆಳತಿ ಇಳವರಸಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್
ಇಳವರಸಿ (ಫೈಲ್​ ಫೋಟೋ)
Edited By:

Updated on: Feb 10, 2021 | 3:06 PM

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿ.ಕೆ. ಶಶಿಕಲಾಗೆ ಕೊರೊನ ದೃಢವಾಗಿದೆ.  ಜೈಲಿನಲ್ಲಿ ಶಶಿಕಲಾ ಸೆಲ್​ನಲ್ಲೇ ಇದ್ದ ಅವರ ಆಪ್ತೆ ಮತ್ತು ಸಂಬಂಧಿ ಇಳವರಸಿಗೂ ಕೊರೊನಾ ಇರುವ ಶಂಕೆ ಇದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

ಶಶಿಕಲಾಗೆ ಇತ್ತೀಚೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಳವರಸಿ-ಶಶಿಕಲಾ ಒಂದೇ ಕಡೆ ಇದ್ದಿದ್ದರಿಂದ, ಅವರಿಗೂ ಕೊರೊನಾ ಸೋಂಕು​ ಅಂಟಿರುವ ಶಂಕೆ ಇದೆ. ಹೀಗಾಗಿ, ಜೈಲು ಅಧಿಕಾರಿಗಳು ಇಳವರಸಿಯನ್ನು ಸಿಟಿ ಸ್ಕ್ಯಾನ್ ಮಾಡಿಸಲು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇಳವರಸಿ ಮಗ ವಿವೇಕ್ ಮತ್ತು ಸಂಬಂಧಿಕರು ಸಿಟಿ ಸ್ಕ್ಯಾನ್ ಮಾಡಿಸುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದರು. ಸಂಬಂಧಿಕರ ಮನವಿಯನ್ನು ಅಂಗೀಕರಿಸಿ, ಇಳವರಸಿಯನ್ನು  ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಜೊತೆ ಇಳವರಸಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಫೆಬ್ರವರಿ 5ರಂದು ಅಗ್ರಹಾರ ಜೈಲಿನಿಂದ ಇಳವರಸಿ ಬಿಡುಗಡೆಯಾಗಲಿದ್ದಾರೆ.

ಶಶಿಕಲಾ ನಟರಾಜನ್​ಗೆ ಕೊರೊನಾ ಪಾಸಿಟಿವ್: ಶ್ವಾಸಕೋಶದಲ್ಲಿ ಇನ್ಫೆಕ್ಷನ್

 

Published On - 3:47 pm, Sat, 23 January 21