ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ವಾಂತಿ ಭೇದಿ ಪ್ರಕರಣ: ಮೃತರ ಸಂಖ್ಯೆ 6ಕ್ಕೆ ಏರಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 13, 2024 | 4:16 PM

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು ವಾಂತಿ ಭೇದಿಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಈ ಪೈಕಿ ಉಳಿದ ನಾಲ್ವರು ವೈಯಕ್ತಿ ಕಾಯಿಲೆಯಿಂದ ಮೃತಪಟ್ಟಿದ್ದರೆ, ಇಬ್ಬರೂ ವಾಂತಿ ಭೇದಿಯಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ವರದಿ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನೆನಹಳ್ಳಿ ಗ್ರಾಮದಲ್ಲಿ ಡಿಸಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಪ್ರಭು ಎಡಿಸಿ ಶಿವಾನಂದ ಕರಾಳೆ ಎಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ವಾಂತಿ ಭೇದಿ ಪ್ರಕರಣ: ಮೃತರ ಸಂಖ್ಯೆ 6ಕ್ಕೆ ಏರಿಕೆ
ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ವಾಂತಿ ಭೇದಿ ಪ್ರಕರಣ: ಮೃತರ ಸಂಖ್ಯೆ 6ಕ್ಕೆ ಏರಿಕೆ
Follow us on

ತುಮಕೂರು, ಜೂನ್​ 13: ಜಿಲ್ಲೆಯ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಕುಡಿದು (contaminated water) ವಾಂತಿ ಭೇದಿಯಿಂದ ಮೃತಪಟ್ಟವರ (Death) ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಈ ಪೈಕಿ ಉಳಿದ ನಾಲ್ವರು ವೈಯಕ್ತಿ ಕಾಯಿಲೆಯಿಂದ ಮೃತಪಟ್ಟಿದ್ದರೆ, ಇಬ್ಬರೂ ವಾಂತಿ ಭೇದಿಯಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ವರದಿ ನೀಡಿದೆ. ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಚಿಕ್ಕದಾಸಪ್ಪ(76), ಪೆದ್ದಣ್ಣ(72) ಮೃತಪಟ್ಟಿದ್ದರು. ಅಸ್ತಮಾದಿಂದ ಹನುಮಕ್ಕ(80), ಮನೆಯಲ್ಲೇ ನಿಂಗಮ್ಮ(75), ಮದ್ಯವ್ಯಸನಿಯಾಗಿದ್ದ 75 ವರ್ಷದ ನಾಗಪ್ಪ, ಮನೆಯಲ್ಲೇ ವಾಂತಿ ಭೇದಿಯಾಗಿ ಮೀನಾಕ್ಷಿ(3) ಮೃತಪಟ್ಟಿದ್ದಾರೆ. ಆ ಮೂಲಕ 6 ಜನರ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅನಾಹುತ ಆದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ

ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನೆನಹಳ್ಳಿ ಗ್ರಾಮದಲ್ಲಿ ಡಿಸಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಪ್ರಭು ಎಡಿಸಿ ಶಿವಾನಂದ ಕರಾಳೆ ಎಸಿರಿಂದ ಗ್ರಾಮದ ಸರ್ಕಾರಿ ಶಾಲೆ ಬಳಿ ಸಭೆ ಮಾಡಿದ್ದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ತುಮಕೂರು: 29 ವರ್ಷದ ಬಳಿಕ ನಡೆದಿದ್ದ ಜಾತ್ರೆಯಲ್ಲಿ ಭಾಗಿಯಾಗಿದ್ದ 35 ಜನ ಅಸ್ವಸ್ಥ

ಅನಾಹುತ ಆದ ಬಳಿಕ ಎಚ್ಚೆತ್ತಿರುವ ಜಿಲ್ಲಾಡಳಿತ ವಾಂತಿ ಭೇದಿ ತಡೆಯಲು ಸಕಲ ಸಿದ್ದತೆ ಮಾಡುವುದಾಗಿ ಹೇಳಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಿ. ಯಾರು ಆತಂಕಕ್ಕೆ ಒಳಗಾಗಬೇಡಿ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಮಾಡಿಸಲು ಜಿಪಂ‌ ಸಿಇಒ ಪ್ರಭುರಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೆಜೆಎಮ್ ಕಾಮಗಾರಿ ಕೂಡ ಮರುಪರಿಶೀಲನೆ ನಡೆಸಿ ಮರುಕಾಮಗಾರಿ ನಡೆಸಲು ಚಿಂತನೆ ಮಾಡಲಾಗುತ್ತಿದೆ.

ಕಳೆದ ಮೂರು ದಿನಗಳಿಂದ ನಲ್ಲಿಗಳ ಮೂಲಕ ನೀರಿನ ಸರಬರಾಜು ಸಂಪೂರ್ಣ ಸ್ಥಗಿತವಾಗಿದೆ. ಜಿಲ್ಲಾಡಳಿತ ತಾಲೂಕು ಆಡಳಿತ ವತಿಯಿಂದ ಟ್ಯಾಂಕರ್ ಮೂಲಕ ಪ್ರತಿದಿನ ಪರೀಕ್ಷೆ ನಡೆಸಿ ಸ್ವಚ್ಚವಾದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನೀರನ್ನ ಕಾಯಿಸಿ ಆರಿಸಿ ಕುಡಿಯಲು ಗ್ರಾಮಸ್ಥರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಇದನ್ನೂ ಓದಿ: ಗೃಹ ಪ್ರವೇಶದಲ್ಲಿ ಊಟ ಸೇವಿಸಿದ್ದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ: ವೃದ್ಧೆ ಸಾವು

ಜನಜೀವನ್ ಮಿಷನ್ ಕಾಮಗಾರಿಯಿಂದ ಹಲವೆಡೆ ಪೈಪ್​ಗಳಿಗೆ ಹಾನಿ ಆಗಿದ್ದು, ಇದರಿಂದ ಚರಂಡಿ ನೀರು ಕೂಡ ಮಿಶ್ರಿತವಾಗಿ ಕಲುಷಿತ ಆಗಿರುವ ಶಂಕೆ ವ್ಯಕ್ತವಾಗಿದೆ. ಜಾತ್ರೆ ಇನ್ನೂ ನಾಲ್ಕು ಬಾಕಿ ಇದ್ದಾಗ ಆತುರವಾಗಿ ಕಾಮಗಾರಿ ಮುಗಿಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸಮರ್ಪಕವಾಗಿ ಸೂಕ್ತ ಚರಂಡಿ ವ್ಯವಸ್ಥೆನೇ ಇಲ್ಲ.

ಮನೆಗಳ ಮುಂದೆ ಚರಂಡಿ ವ್ಯವಸ್ಥೆಯೇ ಇಲ್ಲ. ಸ್ವಚ್ಚತೆ ಇಲ್ಲದಿರುವುದಕ್ಕೆ ಕೂಡ ನೀರು ಕಲುಷಿತ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಗ್ರಾಮಸ್ಥರ ಬಳಿ ಡಿಸಿ ಶುಭಕಲ್ಯಾಣ್ ಸಿಇಒ ಪ್ರಭು ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನೂ ಜೂನ್ 7 ರಂದು ಓವರ್ ಟ್ಯಾಂಕ್ ನೀರು ಕುಡಿಯಲು ಯೋಗ್ಯ ಎಂದು ವರದಿ ನೀಡಲಾಗಿದೆ. ಆದರೆ ಜಾತ್ರೆ ಆರಂಭವಾದ ಕೂಡಲೇ ಗ್ರಾಮದಲ್ಲಿ ವಾಂತಿ ಭೇದಿ ಆರಂಭವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.