AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಪ್ರವೇಶದಲ್ಲಿ ಊಟ ಸೇವಿಸಿದ್ದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ: ವೃದ್ಧೆ ಸಾವು

ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿದ್ದ ವೃದ್ಧೆ ಸಾವನ್ನಪ್ಪಿದ್ದು, ಗೃಹ ಪ್ರವೇಶದಲ್ಲಿ ಊಟ ಮಾಡದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ ಉಂಟಾಗಿರುವಂತಹ ಘಟನೆ ನಡೆದಿದೆ. ಗೃಹಪ್ರವೇಶ ವೇಳೆ ಸುಮಾರು 300ಕ್ಕೂ ಅಧಿಕ ಜನರು ಊಟ ಮಾಡಿದ್ದು ಆ ಪೈಕಿ 30ಕ್ಕೂ ಅಧಿಕ ಜನರನ್ನು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗೃಹ ಪ್ರವೇಶದಲ್ಲಿ ಊಟ ಸೇವಿಸಿದ್ದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ: ವೃದ್ಧೆ ಸಾವು
ಗೃಹ ಪ್ರವೇಶದಲ್ಲಿ ಊಟ ಸೇವಿಸಿದ್ದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ: ವೃದ್ಧೆ ಸಾವು
ದಿಲೀಪ್​, ಚೌಡಹಳ್ಳಿ
| Edited By: |

Updated on: Jun 03, 2024 | 3:31 PM

Share

ಮೈಸೂರು, ಜೂನ್​ 03: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿದ್ದ (Food poisoning) ವೃದ್ಧೆ ಸಾವನ್ನಪ್ಪಿದ್ದು, ಗೃಹ ಪ್ರವೇಶದಲ್ಲಿ ಊಟ ಮಾಡದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ ಉಂಟಾಗಿರುವಂತಹ ಘಟನೆ ಮೈಸೂರು (mysuru) ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಮ್ಮ(65) ಮೃತ ವೃದ್ಧೆ. ಮೇ 31ರಂದು ಮಾರ್ಬಳ್ಳಿಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ಇತ್ತು. ಈ ವೇಳೆ ಸುಮಾರು 300ಕ್ಕೂ ಅಧಿಕ ಜನರು ಊಟ ಮಾಡಿದ್ದು ಆ ಪೈಕಿ 30ಕ್ಕೂ ಅಧಿಕ ಜನರು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೆ.ಸಾಲುಂಡಿ, ತಗಡೂರು ಬಳಿಕ ಮಾರ್ಬಳ್ಳಿ ಬಿಟ್ಟು ಬೇರೆ ಗ್ರಾಮಗಳಿಂದಲೂ ಬಂದು ಊಟ ಮಾಡಿದ್ದರು. ಊಟ ಸೇವಿಸಿದ್ದ ಬೇರೆ ಗ್ರಾಮಗಳ ಜನರಲ್ಲಿ ಯಾರಿಗೂ ಸಮಸ್ಯೆ ಆಗಿಲ್ಲ. ಮಾರ್ಬಳ್ಳಿ ಗ್ರಾಮದಲ್ಲಿ ಊಟ ಮಾಡದವರಿಗೂ ವಾಂತಿ ಭೇದಿ ಆಗಿದೆ. ಇಷ್ಟೆಲ್ಲಾ ಪ್ರಕರಣ ನಡೆದರೂ, ಈ ಹಿಂದೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನ ನೀಡಿದ್ದರೂ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಇದನ್ನೂ ಓದಿ: ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಸಾವು: ಮೂವರು ಅಧಿಕಾರಿಗಳು ಅಮಾನತು

ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಿವೆ. ಇತ್ತೀಚೆಗೆ ಮೈಸೂರು ತಾಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಬಳಿಕ ಸ್ವತಃ ಸಿದ್ದರಾಮಯ್ಯ ಅವರೇ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಪಟ್ಟಣ ಪಂಚಾಯತ್​ನ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದರು.

ಗ್ರಾಮಕ್ಕೆ ಪೂರೈಕೆಯಾಗುವ ನೀರಿಗೆ ಯುಜಿಡಿ ನೀರು ಸೇರಿ ಈ ಅವಾಂತರ ಸೃಷ್ಟಿಯಾಗಿತ್ತು. ಗ್ರಾಮದ ಕೆಲವರಿಗೆ ವಾಂತಿ ಬೇದಿ ಆಗಿತ್ತು. ಗ್ರಾಮದ ಹತ್ತಾರು ಜನಕ್ಕೆ ವಾಂತಿ, ಭೇದಿ ಆಗಿತ್ತು. ರಾತ್ರಿ ಹೊತ್ತಿಗೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನೂರಾರು ಜನರು ಆಸ್ಪತ್ರೆಗಳಿಗೆ ದೌಡಾಯಿಸಿದ್ದರು. ಸುಮಾರು 78ಕ್ಕೂ ಹೆಚ್ಚು ಜನರು ಮೈಸೂರಿನ ಕಾಮಾಕ್ಷಿ, ಸುಯೋಗ್, ಜೆಎಸ್‌ಎಸ್ ಆಸ್ಪತ್ರೆಗಳಿಗೆ ಅಡ್ಮಿಟ್ ಮಾಡಲಾಗಿತ್ತು.  ವಿಷಯ ತಿಳಿದ ಶಾಸಕ ಜಿ.ಟಿ.ದೇವೇಗೌಡ, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದಕ್ಕೆಲ್ಲ ಮುಡಾ ಅಧಿಕಾರಿಗಳೇ ನೇರ ಹೊಣೆ ಅಂತ ಜನರು ಆರೋಪಿಸಿದ್ದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಲುಷಿತ ನೀರು ಸೇವಿಸಿ 114 ಮಂದಿ ಅಸ್ವಸ್ಥ, ಮೂವರಿಗೆ ಕಾಲರ

ಕೆ.ಸಾಲುಂಡಿ ಗ್ರಾಮ ಬೋಗಾದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮ. ಬೋರ್‌ವೆಲ್‌ ನೀರನ್ನು ಟ್ಯಾಂಕ್‌ಗೆ ಲಿಫ್ಟ್ ಮಾಡಿ, ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹೊಸದಾಗಿ ಒಳಚರಂಡಿ ನಿರ್ಮಿಸಿದ್ದು, ಒಳಚರಂಡಿ ನೀರು ಕುಡಿಯುವ ನೀರಿಗೆ ಕನೆಕ್ಟ್ ಆಗಿ ಕಲುಷಿತಗೊಂಡಿತ್ತು. ಇದಕ್ಕೆ ಮುಡಾ, ಬೋಗಾದಿ ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಎಲ್ಲರ ವೈಫಲ್ಯವೂ ಇದೆ. ದುರಂತ ಏನಂದ್ರೆ, ಇಲ್ಲಿನ ಸಮಸ್ಯೆ ಶಾಸಕರಿಗೂ ಗೊತ್ತಿತ್ತು. ಮುಡಾ ಅಧ್ಯಕ್ಷರಿಗೂ ಗೊತ್ತಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.