ನೀರಾವರಿ ಯೋಜನೆಗಳಲ್ಲಿ 18,500 ಕೋಟಿ ಅವ್ಯವಹಾರ: ವಿ.ಎಸ್.ಉಗ್ರಪ್ಪ

ಐಟಿ ದಾಳಿ ವೇಳೆ ಏನೇನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. 18,500 ಕೋಟಿ ನೀರಾವರಿ ಯೋಜನೆಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಸಹ ಅವರು ಒತ್ತಾಯಿಸಿದ್ದಾರೆ.

ನೀರಾವರಿ ಯೋಜನೆಗಳಲ್ಲಿ 18,500 ಕೋಟಿ ಅವ್ಯವಹಾರ: ವಿ.ಎಸ್.ಉಗ್ರಪ್ಪ
ವಿ ಎಸ್ ಉಗ್ರಪ್ಪ

ಬೆಂಗಳೂರು: ನೀರಾವರಿ ಯೋಜನೆಗಳಲ್ಲಿ 18,500 ಕೋಟಿ ಅವ್ಯವಹಾರ ನಡೆದಿದೆ. ಜತೆಗೆ ನೀರಾವರಿ ಯೋಜನೆಗಳಲ್ಲಿ ಶೇಕಡಾ 10ರಿಂದ 15ರಷ್ಟು ಕಿಕ್‌ಬ್ಯಾಕ್‌ ಪಡೆದುಕೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಐಟಿ ದಾಳಿ ವೇಳೆ ಏನೇನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. 18,500 ಕೋಟಿ ನೀರಾವರಿ ಯೋಜನೆಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಸಹ ಅವರು ಒತ್ತಾಯಿಸಿದ್ದಾರೆ.

ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ಆರೋಪದ ಕುರಿತೂ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಿಪಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಕುತಂತ್ರವೆಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ವಿರೋಧ ಪಕ್ಷದ ಸ್ಥಾನಕ್ಕೊಸ್ಕರ ನನ್ನ ಸರ್ಕಾರ ತೆಗೆದರು ಎಂಬ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಸದನಕ್ಕೆ ಕುಮಾರಸ್ವಾಮಿ ಅಗೌರವ ತೋರಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಗೌರವ ಇದೆ. ಸ್ಪೀಕರ್ ಕುಮಾರಸ್ವಾಮಿ ಅವರ ಹೇಳಿಕೆಯನ್ನ ಗಮನಿಸಿ ಕ್ರಮ ಕೈಗೊಳ್ತಾರೆ ಎಂಬ ನಿರೀಕ್ಷೆಯಿದೆ ಎಂದು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರನ್ನ ಒಂದೇ ಪಕ್ಷಕ್ಕೆ ತರ್ತೀನಿ -ಎಂಎಲ್‌ಸಿ ಸಿ.ಎಂ. ಇಬ್ರಾಹಿಂ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರನ್ನ ಒಂದೇ ವೇದಿಕೆಗೆ ತರ್ತೀನಿ. ಒಂದೇ ಪಕ್ಷದಲ್ಲಿ ಬಿಎಸ್‌ವೈ, ಸಿದ್ದರಾಮಯ್ಯ, ದೇವೇಗೌಡರು ಇರ್ತಾರೆ ಎಂದು ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಸ್ಫೋಟಕ ಹೇಳಿಕ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ, ಡಿ.ಕೆ.ಶಿವಕುಮಾರ್‌ ಸಹ ಒಂದೇ ಪಕ್ಷಕ್ಕೆ ತರುವಂತ ಪ್ರಯತ್ನ ಮಾಡುತ್ತೇನೆ. ನನ್ನ ನಿಲುವು ಒಂದೇ ಇರುತ್ತೆ ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯನವರ ಜೊತೆ ಈ ಹಿಂದೆಯೇ ಮಾತನಾಡಿದ್ದೇನೆ. ಕಲ್ಲನ್ನ ಮಾತನಾಡಿಸಿ ಕಲ್ಲಿನಿಂದ ನೀರು ತೆಗಿದವನು ನಾನು ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಯಾವುದು ಆಗಲ್ಲ ಅಂತಿರೋ ಅದನ್ನ ಮಾಡಿ ತೋರಿಸ್ತಿನಿ. ದೇವೇಗೌಡರು ಪ್ರಧಾನಿ ಆಗ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ. ಅದನ್ನ ಮಾಡಿದವನು ನಾನು. ಕಾಂಗ್ರೆಸ್‌ನಲ್ಲೂ ಅಲ್ಪ ಸಂಖ್ಯಾತರಿಗೆ ಸ್ಥಾನ ಮಾನವಿಲ್ಲ. ನಾನು ಈ ಬಗ್ಗೆ ಸುಮಾರು ಸರಿ ಹೇಳಿದ್ದೇನೆ. ದೆಹಲಿಗೆ ಹೋದ್ರು ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರನಾ ಮುಸ್ಲಿಂನಲ್ಲಿ ಯಾರು ಸಹ ಲೀಡರ್‌ ಇಲ್ವಾ? ನಾನು ಯಾವುದೇ ರೀತಿಯ ಬ್ಲಾಕ್‌ಮೇಲ್ ಮಾಡಲ್ಲ. ಬ್ಲಾಕ್‌ಮೇಲ್‌ ಮಾಡ್ತಿಲ್ಲ ಇರೋದನ್ನ ಬಿಡಿತ್ತಿದ್ದೀನಿ. ಎಂಎಲ್‌ಸಿ ಸ್ಥಾನವನ್ನೇ ಬಿಡುತ್ತಿದ್ದೇನೆ. ನನ್ನ ಮನೆಗೆ ಜನ ಬರ್ತಾರೆ ಹೊರತು ಇ.ಡಿ.ಯವರು ಬರಲ್ಲ ಎಂದರು.

ಇದನ್ನೂ ಓದಿ: 

ಕಾಂಗ್ರೆಸ್ ಅಧ್ಯಕ್ಷತೆಯನ್ನು ರಾಹುಲ್ ಗಾಂಧಿಯೇ ವಹಿಸಿಕೊಳ್ಳಬೇಕು, ಸೊನಿಯಾರಿಗೆ ಹುಷಾರಿಲ್ಲ: ಸಿದ್ದರಾಮಯ್ಯ 

ಐಟಿ ದಾಳಿಯಲ್ಲಿ 750 ಕೋಟಿ ಅಕ್ರಮ ಆಸ್ತಿ ಪತ್ತೆ: ಅಧಿಕೃತ ವಿವರ ನೀಡಿದ ಐಟಿ ಇಲಾಖೆ

Read Full Article

Click on your DTH Provider to Add TV9 Kannada