ವಕ್ಫ್ ಆಸ್ತಿ ವಿವಾದದ ವರದಿ ಸಂಗ್ರಹಕ್ಕೆ ಬಿಜೆಪಿ ತಂಡಗಳ ರಚನೆ: ಯತ್ನಾಳ್​, ಜಾರಕಿಹೊಳಿಗೂ ಸ್ಥಾನ

ಕರ್ನಾಟಕದಲ್ಲಿ ವಕ್ಫ್ ಆಸ್ತಿ ವಿವಾದವು ತೀವ್ರಗೊಂಡಿದ್ದು, ಸಾವಿರಾರು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತು ಜಾಗೃತಿ ಮೂಡಿಸಲು, ಬಿಜೆಪಿ ಮೂರು ತಂಡಗಳನ್ನು ರಚಿಸಿದೆ. ಈ ತಂಡಗಳಲ್ಲಿ ಬಂಡಾಯ ನಾಯಕರಿಗೂ ಸ್ಥಾನ ನೀಡಲಾಗಿದೆ.

ವಕ್ಫ್ ಆಸ್ತಿ ವಿವಾದದ ವರದಿ ಸಂಗ್ರಹಕ್ಕೆ ಬಿಜೆಪಿ ತಂಡಗಳ ರಚನೆ: ಯತ್ನಾಳ್​, ಜಾರಕಿಹೊಳಿಗೂ ಸ್ಥಾನ
ವಕ್ಫ್ ಆಸ್ತಿ ವಿವಾದದ ವರದಿ ಸಂಗ್ರಹಕ್ಕೆ ಬಿಜೆಪಿ ತಂಡಗಳ ರಚನೆ: ಯತ್ನಾಳ್​, ಜಾರಕಿಹೊಳಿಗೂ ಸ್ಥಾನ
Edited By:

Updated on: Nov 15, 2024 | 7:18 PM

ಬೆಂಗಳೂರು, ನವೆಂಬರ್​ 15: ವಕ್ಫ್ (waqf)​ ಆಸ್ತಿ ವಿವಾದ ಇಡೀ ರಾಜ್ಯದಲ್ಲೇ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ರೈತರ ಪಹಣಿಯಲ್ಲಿ ವಕ್ಫ್​ ಹೆಸರು ನೋಡಿ ಸಾವಿರಾರು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ರೈತರೊಂದಿಗೆ ರಾಜಕೀಯ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಹಾಗಾಗಿ ಕರ್ನಾಟಕದಾದ್ಯಂತ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದ ಬೆನ್ನಲ್ಲೆ ಇದೀಗ ಮೂರು ತಂಡಗಳ ರಚನೆ ಮಾಡಲಾಗಿದ್ದು, ಈ ಬಾರಿ ರೆಬೆಲ್​ ನಾಯಕರಿಗೂ ಸ್ಥಾನ ನೀಡಲಾಗಿದೆ.

ಹೌದು. ರಾಜ್ಯದಲ್ಲಿ ವಕ್ಫ್​ ಆಸ್ತಿ ವಿವಾದ ವಿಚಾರವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ನೈಜ ವರದಿ ಸಂಗ್ರಹಕ್ಕೆ ‘ನಮ್ಮ ಭೂಮಿ-ನಮ್ಮ ಹಕ್ಕು ಘೋಷವಾಕ್ಯದಡಿ’ ರಾಜ್ಯ ಬಿಜೆಪಿ ಮೂರು ತಂಡಗಳ ರಚನೆ ಮಾಡಿದೆ. ಉಪ ಚುನಾವಣೆ ಸೇರಿದಂತೆ ಯಾವುದಕ್ಕೂ ರೆಬೆಲ್​ ನಾಯಕರನ್ನು ಗಣನೆಗೆ ತೆಗೆದುಕೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇದೀಗ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಇದು ಸದ್ಯ ಕುತೂಹಲಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ವಿಜಯೇಂದ್ರಗೆ ಸೆಡ್ಡು: ವಕ್ಫ್​ ವಿರುದ್ಧ ಬಿಜೆಪಿ ರೆಬೆಲ್​ ತಂಡದಿಂದ ಪ್ರತ್ಯೇಕ ಹೋರಾಟ ಘೋಷಣೆ

ಬಿವೈ ವಿಜಯೇಂದ್ರ ನೇತೃತ್ವದ ತಂಡದಲ್ಲಿ ಶಾಸಕ ರಮೇಶ್​ ಜಾರಕಿಹೊಳಿ, ವಿಪಕ್ಷ ನಾಯಕ ಆರ್​. ಅಶೋಕ್ ನೇತೃತ್ವದ ತಂಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡದಲ್ಲಿ ಮಾಜಿ ಸಂಸದ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ.

ಬಿವೈ ವಿಜಯೇಂದ್ರ ನೇತೃತ್ವದ ತಂಡ

  • ಪ್ರಹ್ಲಾದ ಜೋಶಿ
  • ಜಗದೀಶ್ ಶೆಟ್ಟರ್​-   ಬೀದರ್​​
  • ಭಗವಂತ ಖೂಬಾ-   ಕಲಬುರಗಿ
  • ಡಾ. ಸಿ.ಎನ್. ಅಶ್ವಥ್ ನಾರಾಯಣ-   ಯಾದಗಿರಿ
  • ಮುರುಗೇಶ್ ನಿರಾಣಿ-   ರಾಯಚೂರು
  • ಬಿ. ಶ್ರೀರಾಮುಲು-  ಕೊಪ್ಪಳ
  • ರಮೇಶ್ ಜಾರಕಿಹೊಳಿ-   ಗದಗ
  • ಈರಣ್ಣ ಕಡಾಡಿ-   ವಿಜಯಪುರ
  • ಹಾಲಪ್ಪಾಚಾರ್-   ಬಾಗಲಕೋಟೆ
  • ಸುನೀಲ್ ವಲ್ಯಾಪುರೆ
  • ಎಂ.ಬಿ. ಜಿರಲಿ, ವಕೀಲರು
  • ಪಿ. ರಾಜೀವ್-   ಸಂಚಾಲಕರು
  • ಅರುಣ್ ಶಹಾಪುರ-   ಸಂಯೋಜಕರು
  • ಹರೀಶ್ ಪೂಂಜಾ-   ಸಂಯೋಜಕರು
  • ಡಾ. ಶೈಲೇಂದ್ರ ಬೆಲ್ದಾಳೆ-  ಸಂಯೋಜಕರು

ಆರ್​. ಅಶೋಕ್​ ನೇತೃತ್ವದ ತಂಡ 

  • ಬಸವರಾಜ ಬೊಮ್ಮಾಯಿ-   ಚಾಮರಾಜನಗರ
  • ಶೋಭಾ ಕರಂದ್ಲಾಜೆ-  ಮೈಸೂರು ನಗರ/ಗ್ರಾ.
  • ಬಸನಗೌಡ ಪಾಟೀಲ್ ಯತ್ನಾಳ್​-  ಮಂಡ್ಯ
  • ರಾಜೂಗೌಡ-   ಹಾಸನ
  • ಎಂ.ಪಿ. ರೇಣುಕಾಚಾರ್ಯ-  ಕೊಡಗು
  • ಎನ್. ಮಹೇಶ್-   ದಕ್ಷಿಣ ಕನ್ನಡ
  • ದೊಡ್ಡನಗೌಡ ಪಾಟೀಲ್-   ಉಡುಪಿ
  • ಭಾರತಿ ಶೆಟ್ಟಿ-  ಚಿಕ್ಕಮಗಳೂರು
  • ಬಿ.ಸಿ. ನವೀನ್‌ ಕುಮಾರ್-   ಶಿವಮೊಗ್ಗ
  • ವಸಂತಕುಮಾರ್, ವಕೀಲರು-   ಉತ್ತರ ಕನ್ನಡ
  • ಜೆ. ಪ್ರೀತಂ ಗೌಡ-   ಸಂಚಾಲಕರು
  • ವಿನಯ್ ಬಿದರೆ-    ಸಂಯೋಜಕರು
  • ಡಿ.ಎಸ್. ಅರುಣ್-  ಸಂಯೋಜಕರು
  • ಲಕ್ಷ್ಮೀ ಅಶ್ವಿನ್ ಗೌಡ-  ಸಂಯೋಜಕರು

ಛಲವಾದಿ ನಾರಾಯಣಸ್ವಾಮಿ​ ನೇತೃತ್ವದ ತಂಡ 

  • ಡಿ.ವಿ. ಸದಾನಂದಗೌಡ-    ರಾಮನಗರ
  • ವಿ. ಸೋಮಣ್ಣ-    ಬೆಂಗಳೂರು ಗ್ರಾಮಾತರ 
  • ಸಿ.ಟಿ. ರವಿ-  ಕೋಲಾರ
  • ನಳೀನ್‌ ಕುಮಾರ್ ಕಟೀಲ್-  ಚಿಕ್ಕಬಳ್ಳಾಪುರ
  • ಅರವಿಂದ ಲಿಂಬಾವಳಿ-  ತುಮಕೂರು
  • ಎಸ್​ ಮುನಿಸ್ವಾಮಿ-  ಮಧುಗಿರಿ
  • ಅರಗ ಜ್ಞಾನೇಂದ್ರ-  ಚಿತ್ರದುರ್ಗಿ 
  • ಬಿ.ಸಿ. ಪಾಟೀಲ್​-  ದಾವಣಗೆರೆ 
  • ವೈ.ಎ. ನಾರಾಯಣಸ್ವಾಮಿ-  ಹಾವೇರಿ
  • ವಿವೇಕ್ ಸುಬ್ಬಾರೆಡ್ಡಿ, ವಕೀಲರು
  • ವಿ. ಸುನೀಲ್​ ಕುಮಾರ್​-   ಸಂಚಾಲಕರು
  • ಅಶ್ವಥ್​ ನಾತರಾಯಣ-  ಸಂಯೋಜಕರು
  • ತಮ್ಮೇಶ್​ಗೌಡ-  ಸಂಯೋಜಕರು
  • ಅಂಬಿ ಹುಲಿನಾಯ್ಕರ್​-  ಸಂಯೋಜಕರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us