ಕಾಂಗ್ರೆಸ್ ಶಾಸಕ ವಿನಯ್​ ಕುಲರ್ಣಿಗೆ ಕೊರಗಜ್ಜನ ಅಭಯದ ಜತೆಗೆ ಎಚ್ಚರಿಕೆ ಸೂಚನೆ

ಕಿರಣ್ ಹನುಮಂತ್​ ಮಾದಾರ್

Updated on: Jul 28, 2024 | 2:54 PM

ಬಿಜೆಪಿ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ್​ ಗೌಡ ಹತ್ಯೆ ಪ್ರಕರಣದ ಆರೋಪಿ ಎನಿಸಿರುವ ಧಾರವಾಡ ಗ್ರಾಮಾಂತರ ಶಾಸಕ ವಿನಯ್​ ಕುಲಕರ್ಣಿ ಸಂಕಷ್ಟ ಪರಿಹಾರಕ್ಕೆ ಕೊರಗಜ್ಜನ ಮೊರೆ ಹೋಗಿದ್ದಾರೆ. ಕೊರಗಜ್ಜನ ಸನ್ನಿಧಿಯಲ್ಲಿ ಶಾಸಕ ವಿನಯ್​ ಕುಲಕರ್ಣಿಯಲ್ಲಿ ದೈವ ನುಡಿದಿದ್ದೇನು? ಕಂಟಕ ಪರಿಹಾರಕ್ಕೆ ಕೊರಗಜ್ಜ ನೀಡಿದ ಅಭಯ ಎಂಥಾದ್ದು..? ಕಂಪ್ಲೀಟ್​ಡೀಟೇಲ್ಸ್ ಇಲ್ಲಿದೆ.

1 / 6
ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ಬಿಜೆಪಿ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರೋದು, ಧಾರವಾಡ ಪ್ರವೇಶಿಸಿದಂತೆ ಕೋರ್ಟ್ ನಿರ್ಬಂಧ ಹೇರಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ವಿನಯ್​ ಕುಲಕರ್ಣಿ ಬಿಜೆಪಿ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರೋದು, ಧಾರವಾಡ ಪ್ರವೇಶಿಸಿದಂತೆ ಕೋರ್ಟ್ ನಿರ್ಬಂಧ ಹೇರಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

2 / 6

ಇದೀಗ ಧಾರವಾಡಕ್ಕೆ ಪ್ರವೇಶ ನಿರ್ಬಂಧ ಸಂಬಂಧ ಮುಂದಿನ ತಿಂಗಳು ಕೋರ್ಟ್​ ತೀರ್ಮಾನ ಹೊರಡಿಸಲಿದ್ದು, ಅದಕ್ಕೂ ಮುನ್ನ ಶಾಸಕ ವಿನಯ್​ ಕುಲಕರ್ಣಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಕೊರಗಜ್ಜನ ಅಭಯದ ಜೊತೆಯಲ್ಲಿ ಸಾಕಷ್ಟು ಎಚ್ಚರಿಕೆಯನ್ನೂ ನೀಡಿದೆ.

3 / 6

ಹೌದು, ಸಂಕಷ್ಟ ಪರಿಹಾರಕ್ಕಾಗಿ ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಶಾಸಕ ವಿನಯ್​ ಕುಲಕರ್ಣಿ ಹಾಗೂ ಕುಟುಂಬಸ್ಥರು ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಪ್ರವೇಶದ ವಿಚಾರದಲ್ಲಿ ಸಿಬಿಐ ಕೋರ್ಟ್​ನಲ್ಲಿ ಮುಂದಿನ 48 ದಿನಗಳಲ್ಲಿ ನಿರ್ಬಂಧ ತೆರವುಗೊಳ್ಳಲಿದೆ ಎಂದು ದೈವ ಕಾರ್ಣಿಕ ನುಡಿದಿದೆ. ಅಲ್ಲದೇ ಮುಂದಿನ ಮೂರು ವರ್ಷಗಳ ಕಾಲ ಭಾರೀ ಜಾಗೃತಿಯಿಂದ ಇರುವಂತೆ ಎಚ್ಚರಿಕೆ ಕೂಡ ನೀಡಿದೆ.

4 / 6

ಇನ್ನು ಶಾಸಕ ವಿನಯ್​ ಕುಲಕರ್ಣಿಯ ಈ ಎಲ್ಲಾ ಕಂಟಕಕ್ಕೆ ಒಂದು ಹೆಣ್ಣು ಕಾರಣ ಎಂದು ಮಾರ್ಮಿಕವಾಗಿ ದೈವ ನುಡಿದಿದೆ. ಅಲ್ಲದೇ ಅಧರ್ಮದಲ್ಲಿ ಹೋದವರು ಯಾರೇ ಇದ್ದರೂ ಅವರನ್ನು ನಾನು ನೋಡಿಕೊಳ್ತೇನೆ. ಸಂಕಷ್ಟ ಪರಿಹಾರದ ಬಳಿಕ ಸಂತಸದಿಂದ ಬಂದು ನನ್ನ ಸನ್ನಿಧಿಯಲ್ಲಿ ಕೋಲಸೇವೆ ನೀಡು ಎಂದು ವಿನಯ್​ ಕುಲಕರ್ಣಿಗೆ ದೈವ ಹೇಳಿದೆ.

5 / 6

ಈ ವಿಚಾರವಾಗಿ ಮಾತನಾಡಿದ ಶಾಸಕ ವಿನಯ್​ ಕುಲಕರ್ಣಿ, ಚುನಾವಣಾ ಪೂರ್ವದಲ್ಲಿಯೇ ಕೋಲಸೇವೆ ಮಾಡಿಸಬೇಕು ಎಂದಿದ್ದೆ. ಆದರೆ ಈಗ ಸಮಯ ಕೂಡಿ ಬಂತು ಅಂತಾ ಹೇಳಿದರು.

6 / 6

ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ವಿನಯ್​ ಕುಲಕರ್ಣಿ ನ್ಯಾಯಾಂಗದಲ್ಲಿ ಯಾವುದೇ ರಿಲೀಫ್​ ಸಿಗುವ ಲಕ್ಷಣ ಕಾಣದೇ ಇದೀಗ ದೈವದ ಮೊರೆ ಹೋಗಿದ್ದಾರೆ. ಕೊರಗಜ್ಜನ ಕೃಪೆಯಿಂದಾದರೂ ಈ ಪ್ರಕರಣ ಶೀಘ್ರದಲ್ಲಿಯೇ ಇತ್ಯರ್ಥವಾಗುತ್ತಾ? ವಿನಯ್​ ಕುಲಕರ್ಣಿ ಧಾರವಾಡ ಪ್ರವೇಶದ ಹಾದಿ ಸುಗಮವಾಗುತ್ತಾ ಎಂದು ಕಾದು ನೋಡ್ಬೇಕಿದೆ.

Published On - 2:44 pm, Sun, 28 July 24

Loading...
Unable to load recommendations.
Follow Us