ಬೆಂಗಳೂರಲ್ಲಿ ನೀರಿಗೆ ಬರ: ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆ
ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಷ್ಟೊಂದು ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ಜನರು ನಿತ್ಯ ಪರದಾಡುವಂತಾಗಿದೆ. ನೀರಿಲ್ಲದೇ ಸಿಲಿಕಾನ್ ಸಿಟಿ ಹೈರಾಣಾಗಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಧರಣಿ ಮಾಡಲಿದೆ.
ಬೆಂಗಳೂರು, ಮಾರ್ಚ್ 09: ನಗರದಲ್ಲಿ ಗಲ್ಲಿ ಗಲ್ಲಿಯಲ್ಲೂ ನೀರಿಗಾಗಿ (Water) ಹಾಹಾಕಾರ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದರೆ ಖುದ್ದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಇಷ್ಟೊಂದು ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ಜನರು ನಿತ್ಯ ಪರದಾಡುವಂತಾಗಿದೆ. ನೀರಿಲ್ಲದೇ ಸಿಲಿಕಾನ್ ಸಿಟಿ ಹೈರಾಣಾಗಿದ್ದಾರೆ. ನಗರದಲ್ಲಿ ನೀರಿನ ಸಮಸ್ಯೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಧರಣಿ ಮಾಡಲಿದೆ.
ಬೆಂಗಳೂರಲ್ಲಿ ನೀರಿನ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಆರ್. ಅಶೋಕ್
ಈ ವಿಚಾರವಾಗಿ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮಾಡಿದ ತಪ್ಪಿನಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಅನುಭವಿಸ್ತಿದ್ದೇವೆ. ಸರ್ಕಾರದ ಬಳಿ ಬೋರ್ ವೆಲ್ ಕೊರಿಸುವುದಕ್ಕೂ ಹಣವಿಲ್ಲ. ನಿಮ್ಮ 2000 ರೂಪಾಯಿಯಿಂದ ಏನು ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ವಾರದೊಳಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ಧರಣಿ ಮಾಡ್ತೀವಿ: ತೇಜಸ್ವಿ ಸೂರ್ಯ
ವಿದೇಶ ಚಾನಲ್ನಲ್ಲಿ ಬೆಂಗಳೂರಿನ ಮರ್ಯಾದೆ ಹೋಗಿದೆ. ನೀರಿನ ಸಮಸ್ಯೆ ಇದೆ, ಅಲ್ಲಿ ಯಾರು ಹೋಗಬೇಡಿ ಅಂತಿದ್ದಾರೆ. ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಜೋಡಿಯಿಂದ ನೀರಿನ ಸಮಸ್ಯೆ ಆಗಿದೆ. ಇಂತಹ ಕೆಟ್ಟ ಸರ್ಕಾರವನ್ನು ತೊಲಗಿಸಬೇಕಿದೆ. ಕಾಂಗ್ರೆಸ್ನ ಗ್ಯಾರಂಟಿಗಳು ನೀರಿನ ಮೇಲಿನ ಗುಳ್ಳೆಗಳಿದ್ದಂತೆ ಎಂದು ವಾಗ್ದಾಳಿ ಮಾಡಿದ್ದಾರೆ.
ನೀರಿನ ಅಭಾವ ಬರುತ್ತೆ ಎಂದು ಗೊತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಇನ್ನೊಂದು ವಾರದೊಳಗೆ ಸರ್ಕಾರ ತಾತ್ಕಾಲಿಕ ಪರಿಹಾರ ನೀಡಬೇಕು. ವಾರದೊಳಗೆ ಕ್ರಮಕೈಗೊಳ್ಳದಿದ್ದರೆ ವಿಧಾನಸೌಧದ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟಿಸುತ್ತೇವೆ ಎಂದು ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರು ಹೊರ ವಲಯದ ನೀರಿನ ಅಭಾವ ತಪ್ಪಿಸಲು ಜಲಮಂಡಳಿಯಿಂದ ಹೊಸ ಪ್ಲ್ಯಾನ್
ಅಧಿಕಾರಿಗಳನ್ನ ಕೇಳಿದ್ದು ಆಯ್ತು, ಜನರ ಪ್ರತಿನಿಧಿಗಳನ್ನ ಬೇಡಿದ್ದು ಆಯ್ತು. ಆದರೆ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಹೀಗಾಗಿ ಇವತ್ತು ಖಾಲಿ ಬಿಂದಿಗೆಗಳಿಗೆ ಹೂ ಇಟ್ಟು ಗಂಧದಕಡ್ಡಿ ಹಚ್ಚಿ ಜನರು ಪೂಜೆ ಮಾಡಿದ್ದಾರೆ. ಯಶವಂತಪುರ ವಿಧಾನಸಭಾಕ್ಷೇತ್ರದ ತಿಪ್ಪೇನಹಳ್ಳಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹದಿನೈದು ದಿನಕ್ಕೊಮ್ಮೆ ಬರುವ ನಲ್ಲಿ ನೀರಿನಿಂದ ಬೇಸತ್ತ ಜನರು ಇವತ್ತು ಖಾಲಿ ಬಿಂದಿಗೆಗಳನ್ನ ಹಿಡಿದು ಬೀದಿಗಿಳಿದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.