ಬೆಂಗಳೂರು: ಕರ್ನಾಟಕದ (Karnataka Rain) ಬಯಲು ಸೀಮೆಯ ಕೆಲವು ಜಿಲ್ಲೆಗಳಲ್ಲಿ ಇನ್ನೂ ಹಗುರ ಮಳೆಯಾಗುತ್ತಿದೆ. ಗುರುವಾರ ಕೋಲಾರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅಕಾಲಿಕವಾಗಿ ತುಂತುರು ಮಳೆಯಾಗಿತ್ತು. ಕೋಲಾರ, ಮಾಲೂರು, ಬಂಗಾರಪೇಟೆ ತಾಲೂಕಿನಲ್ಲಿ ತುಂತುರು ಮಳೆಯಾದರೆ, ಮುಳಬಾಗಲು, ಶ್ರೀನಿವಾಸಪುರ, ಕೆಜಿಎಫ್ ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಹಾಗೇ, ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು, ಮೈಸೂರಿನಲ್ಲಿ ಹಗುರ ಮಳೆಯಾಗಿತ್ತು.
ಇಂದು ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಶೀತ ಗಾಳಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಇಂದು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಇಂದು (ಶುಕ್ರವಾರ) ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಮುಂದಿನ 4 ದಿನಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಲಘು ಮಳೆಯಾಗುತ್ತದೆ. ಈಶಾನ್ಯ ಭಾರತದಲ್ಲಿ ಇಂದು ಚದುರಿದ ಮಧ್ಯಮ ಮಳೆಯಾಗಲಿದೆ. ನಂತರ ಒಣ ಹವಾಮಾನ ಇರುತ್ತದೆ.
At 0830 hrs IST Dense to very dense fog is reported at isolated pockets over H.P(Surendernagar 25m), Uttarakhand (Pantnagar 25m, Dehradun and Tehri 50 m each), Punjab (visibilities at Patiala 25m; Amritsar and Ludhiana 50m each), East U.P (Lucknow, Bahraich and Fursatganj 25 m )
— India Meteorological Department (@Indiametdept) January 27, 2022
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ. ಮುಂದಿನ 2 ದಿನಗಳ ಕಾಲ ಕರಾವಳಿ ಆಂಧ್ರಪ್ರದೇಶ, ಯಾನಂ, ರಾಯಲಸೀಮೆ, ಕೇರಳ, ಮಾಹೆಯಲ್ಲಿ ಮಳೆಯಾಗಲಿದೆ. ಮುಂದಿನ 4 ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಮಳೆಯಾಗಲಿದೆ. ಜನವರಿ 29ರಿಂದ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯದಲ್ಲಿ ಇಂದು ಮಳೆಯಾಗಲಿದ್ದು, ಜನವರಿ 30ರಿಂದ ಮಳೆ ಕಡಿಮೆಯಾಗುತ್ತದೆ.
ಇಂದು ವಿದರ್ಭ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಗುಜರಾತ್ ರಾಜ್ಯದಲ್ಲಿ ಶೀತ ಅಲೆಯ ನಿರ್ಮಾಣವಾಗಲಿದೆ. ಮುಂದಿನ 2-3 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢದಾದ್ಯಂತ ಮಳೆಯಾಗಲಿದೆ.
ಇದನ್ನೂ ಓದಿ: Weather Today: ಕರ್ನಾಟಕದಲ್ಲಿ ತಗ್ಗಿದ ಮಳೆ; ಪಂಜಾಬ್, ರಾಜಸ್ಥಾನ, ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
Bengaluru Rain: ಹೊಸವರ್ಷ ಆಚರಣೆಗೆ ವರುಣನ ಅಡ್ಡಿ; ಗಾಯದ ಮೇಲೆ ಬರೆ ಎಳೆದ ಮಳೆರಾಯ