ಜೈಲಿನಲ್ಲಿರುವ ವಿನಯ್ ಕುಲಕರ್ಣಿಗೆ 24ನೇ ವಿವಾಹ ವಾರ್ಷಿಕೋತ್ಸವ..

2016 ಜೂನ್ 15ರಂದು ನಡೆದ ಹತ್ಯೆಗೆ ಸಂಬಂಧಿಸಿ ಇದೇ ನವೆಂಬರ್ 5 ರಂದು ಬಂಧನಕ್ಕೊಳಗಾಗಿರೋ ವಿನಯ್​ಗೆ ಸ್ನೇಹಿತರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಿವಾಹ ವಾರ್ಷಿಕೋತ್ಸವದ ಶುಭಕೋರಿದ್ದಾರೆ

ಜೈಲಿನಲ್ಲಿರುವ ವಿನಯ್ ಕುಲಕರ್ಣಿಗೆ 24ನೇ ವಿವಾಹ ವಾರ್ಷಿಕೋತ್ಸವ..
ವಿನಯ್ ಕುಲಕರ್ಣಿ (ಸಂಗ್ರಹ ಚಿತ್ರ).
Edited By:

Updated on: Dec 04, 2020 | 10:30 AM

ಧಾರವಾಡ: ಜಿಲ್ಲಾ ಪಂಜಾಯತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಹಿನ್ನೆಲೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿಗೆ ಇಂದು ವಿವಾಹ ವಾರ್ಷಿಕೋತ್ಸವ.

ಹುಟ್ಟುಹಬ್ಬವನ್ನು ಕೂಡ ಜೈಲಿನಲ್ಲಿಯೇ ಆಚರಿಸಿಕೊಂಡಿದ್ದ ವಿನಯ್, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 24 ವರ್ಷ ಕಳೆಯಿತು. 2016 ಜೂನ್ 15ರಂದು ನಡೆದ ಹತ್ಯೆಗೆ ಸಂಬಂಧಿಸಿ ಇದೇ ನವೆಂಬರ್ 5 ರಂದು ಬಂಧನಕ್ಕೊಳಗಾಗಿರೊ ವಿನಯ್​ಗೆ ಸ್ನೇಹಿತರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಿವಾಹ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ.

ನವೆಂಬರ್ 7 ಕ್ಕೆ ಕಾಂಗ್ರೆಸ್ ಮುಖಂಡ ವಿನಯ್ ಹುಟ್ಟುಹಬ್ಬವಿತ್ತು. ಆದರೆ ಸದ್ಯಕ್ಕೆ ಜೈಲಿನಲ್ಲಿರುವುದರಿಂದ ಯಾವುದೇ ಸಂಭ್ರಮವಿರಲಿಲ್ಲ.

ಇಂದು ಏನಾಗಲಿದೆ ವಿನಯ್ ಕುಲಕರ್ಣಿ ಭವಿಷ್ಯ: ಸಿಬಿಐ ಕಸ್ಟಡಿನಾ.. ನ್ಯಾಯಾಂಗ ಬಂಧನನಾ..?

Published On - 10:29 am, Fri, 4 December 20