ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ, ದಂಡ ಪಾವತಿಸದಿದ್ದರೆ ವಾಹನ ಜಪ್ತಿಗೆ ನಿರ್ಧಾರ..

ಟ್ರಾಫಿಕ್ ನಿಯಮಗಳನ್ನು ನಿಲ್ಲಂಘಿಸಿದ್ರೆ ಭಾರಿ ದಂಡ ಕಟ್ಟಬೇಕಾಗುತ್ತೆ. ಆದರೆ ಕೆಲ ಮಂದಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ ಇದೆ. 2017ರಿಂದ 2020ರವರೆಗೆ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಟ್ರಾಫಿಕ್ ಫೈನ್​ ಇದು.

ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ, ದಂಡ ಪಾವತಿಸದಿದ್ದರೆ ವಾಹನ ಜಪ್ತಿಗೆ ನಿರ್ಧಾರ..
Ayesha Banu

|

Dec 04, 2020 | 9:17 AM

ಬೆಂಗಳೂರು: ರಾಜಧಾನಿ ಬೆಂಗಳೂರು ಹೆಚ್ಚಿನ ಜನ ಸಂಖ್ಯೆಯನ್ನು ಹೊಂದಿದೆ. ಪೆಟ್ರೋಲ್​ಗೆ ದುಡ್ಡಿಲ್ಲಾ ಅಂದ್ರೂ ಇಲ್ಲಿನ ಜನಗಳ ಬಳಿ ಗಾಡಿಗಳು ಮಾತ್ರ ಇದ್ದೇ ಇರ್ತಾವೆ. ಅದರಲ್ಲೂ ಈ ಟೀನೇಜ್ ಹುಡುಗರಂತೋ ಲೈಸೆನ್ಸ್ ಇಲ್ಲ, ದುಬಾರಿ ದಂಡ ಇರೋದು ಗೊತ್ತಿದ್ರೂ ಶೋಕಿ ಮಾಡೋದನ್ನ ಕಮ್ಮಿ ಮಾಡಲ್ಲ. ರೂಲ್ಸ್ ಬ್ರೇಕ್ ಮಾಡೋ ಸವಾರರಿಗೆ ಬುದ್ಧಿ ಕಲಿಸೋಕೆ ಸರ್ಕಾರ ನಾನಾ ಪ್ಲಾನ್ಸ್​ಗಳನ್ನು ಮಾಡುದ್ರೂ ಪ್ರಯೋಜನವಾಗ್ತಿಲ್ಲ.

ಟ್ರಾಫಿಕ್ ನಿಯಮಗಳನ್ನು ನಿಲ್ಲಂಘಿಸಿದ್ರೆ ಭಾರಿ ದಂಡ ಕಟ್ಟಬೇಕಾಗುತ್ತೆ. ಆದರೆ ಕೆಲ ಮಂದಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 329 ಕೋಟಿ ರೂ. ಟ್ರಾಫಿಕ್ ದಂಡ ಬಾಕಿ ಇದೆ. 2017ರಿಂದ 2020ರವರೆಗೆ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿರುವ ಟ್ರಾಫಿಕ್ ಫೈನ್​ ಇದು.

ದ್ವಿಚಕ್ರ ವಾಹನಗಳ ಕೇಸ್ ಉಲ್ಲಂಘನೆಯಿಂದ 258 ಕೋಟಿ 27 ಲಕ್ಷದ 77 ಸಾವಿರದ 700 ರೂ ಬಾಕಿ ಉಳಿದಿದೆ. ಆಟೋಗಳಿಂದ 10 ಕೋಟಿ 47 ಲಕ್ಷ 48 ಸಾವಿರದ ಇನ್ನೂರು ರೂ ಹಾಗೂ ಕಾರುಗಳಿಂದ 41 ಕೋಟಿ 5 ಲಕ್ಷದ 23ಸಾವಿರದ 500 ರೂ ದಂಡದ ಮೊತ್ತ ಬಾಕಿ ಇದೆ. ಗೂಡ್ಸ್ ವೆಹಿಕಲ್ಸ್, ಕ್ಯಾಬ್, ಮಿನಿಲಾರಿ, ಮೊಪೆಡ್​ಗಳಿಂದ ಕೋಟಿಗಟ್ಟಲೇ ದಂಡದ ಮೊತ್ತ ಬರಬೇಕಿದೆ. ಹೀಗಾಗಿ ಫೈನ್ ಕಲೆಕ್ಟ್ ಮಾಡೋದಕ್ಕೆ ಆಯಾ ಸಂಚಾರಿ ಠಾಣೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ವಾಹನದ ನಂಬರ್ ಹಾಗೂ ಮಾಲೀಕರ ವಿಳಾಸ ನೀಡಿ ಫೈನ್ ಕಲೆಕ್ಟ್ ಮಾಡಲು ಸೂಚನೆ ನೀಡಲಾಗಿದೆ.

ಫೈನ್ ಕಟ್ಟಿಲ್ಲ ಅಂದ್ರೆ ವಾಹನಗಳು ಸೀಜ್: ದಂಡ ಕಟ್ಟದ ವಾಹನಗಳು ಪಾರ್ಕಿಂಗ್ ಲಾಟ್​ನಲ್ಲಿ ಪಾರ್ಕ್ ಮಾಡಿದ್ರೆ ಅಲ್ಲೇ ಸೀಜ್ ಮಾಡಲು ಸೂಚಿಸಲಾಗಿದೆ. ಹೀಗಾಗಿ ಫೀಲ್ಡಿಗಿಳಿದ ಪೊಲೀಸರು ವಾಹನಗಳ ವೀಲ್ ಲಾಕ್ ಮಾಡಿ ವಶಕ್ಕೆ ಪಡೆಯುತ್ತಿದ್ದಾರೆ. ಮೊದಲಿಗೆ ಫೈನ್ ಕಟ್ಟುವಂತೆ ಮೊಬೈಲ್​ಗೆ ಒಂದು ಬಾರಿ ಮೆಸೇಜ್ ಕಳಿಸಲಾಗತ್ತೆ. ನಂತರ ಮನೆ ಬಳಿ ತೆರಳಿ ನೋಟಿಸ್ ಕೊಟ್ಟು ಫೈನ್ ಪಾವತಿಸಲು ಸೂಚಿಸಲಾಗತ್ತೆ. ಒಂದು ಬಾರಿ ಮೆಸೇಜ್, ಎರಡು ಬಾರಿಯ ನೋಟಿಸ್ ಗೆ ಫೈನ್ ಕಟ್ಟದಿದ್ರೆ ಸಿಕ್ಕಲ್ಲಿ ವಾಹನ ಸೀಜ್ ಮಾಡಲಾಗುತ್ತೆ. ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆ, ಬೆಂಗಳೂರು1 ಹಾಗೂ ನೋಟಿಸ್ ನೀಡಲು ಬಂದತಹ ವೇಳೆಯಲ್ಲಿ ಸವಾರರು ಫೈನ್ ಕಟ್ಟಬಹುದು. ಇಲ್ಲದಿದ್ದರೆ ವಾಹನ ಸೀಜ್ ಆಗುತ್ತೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada